ಹಳ್ಳಿ,ಹಳ್ಳಿಗೂ ಕಾವೇರಿ ನೀರು…!

0
1361

ಬೆಂಗಳೂರು/ಕೃಷ್ಣರಾಜಪುರ:- ಜನ ಹಿತವನ್ನು ಧ್ಯೇಯವಾಗಿಸಿಕೊಂಡಾಗ ಮಾತ್ರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಹೊಣೆ ನಿಭಾಯಿಸಲು ಸಾಧ್ಯ ಎಂದು ಶಾಸಕ ಬಿ.ಎ.ಬಸವರಾಜ್ ಅಭಿಪ್ರಾಯಪಟ್ಟರು.
ಕ್ಷೇತ್ರದ ಹೊರಮಾವಿನಲ್ಲಿ ಆಯೋಜಿಸಿದ್ದ 110 ಹಳ್ಳಿಗಳ ಪೈಕಿ ಮೊದಲ ಹಂತವಾಗಿ ಕೆಆರ್ಪುರ ಕ್ಷೇತ್ರದ 11ಹಳ್ಳಿಗಳಲ್ಲಿನ ವಿವಿಧ ಬಡಾವಣೆಗಳಿಗೆ ಕಾವೇರಿ ನೀರು ಒದಗಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 2007ರಲ್ಲಿ ಬಿಜೆಪಿ, ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಬೆಂಗಳೂರು ಪೂರ್ವ ಭಾಗದ 110 ಹಳ್ಳಿಗಳನ್ನು ಪಾಲಿಕೆಗೆ ಸೇರ್ಪಡಿಸಿಕೊಳ್ಳಲಾಯಿತಾದರೂ ಮೂಲಭೂತ ಸೌಲಭ್ಯಗಳನ್ನೊದಗಿಸುವ ಗೋಜಿಗೆ ಹೋಗಲಿಲ್ಲ, ನಂತರ ಬಹುಮತದಿಂದ ಅಸ್ಥಿತ್ವಕ್ಕೆ ಬಂದ ಬಿಜೆಪಿ ಸರ್ಕಾರಕ್ಕೂ 110 ಹಳ್ಳಿಗಳು ನೆನಪು ಬರಲಿಲ್ಲ, ಜನಹಿತವನ್ನು ಧ್ಯೇಯವಾಗಿಸಿಕೊಂಡಾಗ ಮಾತ್ರ ಜನರ ಅವಶ್ಯಕತೆ ಪೂರೈಸುವ ಹೊಣೆ ಹೊರಲು ಸಾಧ್ಯವಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಜನಪರ ಕಾಳಜಿಯಿದ್ದರಿಂದಲೇ 110 ಹಳ್ಳಿಗಳಿಗೆ ಸೌಲಭ್ಯ ಕಲ್ಪಿಸಲು ಅನುದಾನ ನೀಡಿದ್ದಾರೆ, ಕೆಆರ್ಪುರ ಕ್ಷೇತ್ರ ವ್ಯಾಪ್ತಿಯ 11 ಹಳ್ಳಿಗಳ ಪೈಕಿ 176 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಕಾವೇರಿ ನೀರು ಸರಬರಾಜು ಕಾಮಗಾರಿಯ ಮೊದಲ ಹಂತವಾಗಿ ಕ್ಷೇತ್ರದ ಅಶೀವರ್ಾದ್ ಕಾಲೋನಿ, ಪಿ ಅಂಡ್ ಟಿ ಬಡಾವಣೆ, ಕೋಕೊನಟ್ ಬಡಾವಣೆ, ಬ್ಯಾಂಕ್ ಅವೆನ್ಯು ಬಡಾವಣೆ ಸೇರಿ ಸುತ್ತಲಿನ 24 ವಿವಿಧ ಬಡಾವಣೆಗಳಿಗೆ ನೀರು ಒದಗಿಸಲಾಗಿದೆ, ಮುಂಬರುವ ದಿನಗಳಲ್ಲಿ ಬಾಕಿ ಉಳಿದ ಹಳ್ಳಿ ಗಳಿಗೂ ನೀರೊದಗಿಸಲಿದ್ದೇವೆ, ಒಳ ಚರಂಡಿ ವ್ಯವಸ್ಥೆಯೂ ಬಹು ಮುಖ್ಯ ಅವಶ್ಯಕತೆಯಾಗಿದ್ದು ಮಾ 4ಕ್ಕೆ ಯುಜಿಡಿ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಮುಖ್ಯಮಂತ್ರಿಗಳು ನೆರವೇರಿಸಲಿದ್ದಾರೆಂದು ತಿಳಿಸಿದರು.
ಯುಜಿಡಿ ಮತ್ತು ಕಾವೇರಿ ನೀರಿನ ಸಂಪರ್ಕ ಕಾಮಗಾರಿಯ ನಿಮಿತ್ತ ಅಗೆಯಲಾದ ರಸ್ತೆಗಳು ಹದಗೆಟ್ಟಿದ್ದು, ರಸ್ತೆ ರಿಪೇರಿ ಮಾಡುವ ಸಲುವಾಗಿ 15ಕೋಟಿ ಮೀಸಲಿರಿಸಿದ್ದೇವೆ, ಹೊರಮಾವಿನ ರೈಲ್ವೆ ಕ್ರಾಸಿಂಗ್ ಮತ್ತು ರಾಮಮೂತರ್ಿ ನಗರ ರೈಲ್ವೆ ಮೇಲ್ಸೇತುವೆ ಬಳಿ ಸಂಚಾರ ದಟ್ಟಣೆ ಹೆಚ್ಚಾದ ಹಿನ್ನೆಲೆ ಸಾರ್ವಜನಿಕರು ತೀವ್ರ ತೊಂದರೆ ಎದುರಿಸಬೇಕಿತ್ತು, ಪರಿಹಾರವಾಗಿ ರೈಲ್ವೆ ಕೆಳ ಸೇತುವೆ ಮತ್ತು ರೈಲ್ವೆ ಮೇಲ್ಸೇತುವೆ ನಿರ್ಮಿಸುವ ಮೂಲಕ ಸುಗಮ ಸಂಚಾರ ಕಂಡು ಕೊಳ್ಳಲಿ ದ್ದೇವೆ,ಕ್ಷೇತ್ರಾದ್ಯಂತ ಪ್ರತಿಯೊಂದು ಬಡಾವಣೆಗೂ ಎಲ್ಇಡಿ ವಿದ್ಯುತ್ ದೀಪಗಳನ್ನು ಅಳವಡಿಸುವ ಧ್ಯೇಯವಿದೆ, ಈಗಾಗಲೇ ಹಲವೆಡೆ ಅಳವಡಿ ಸಿದ್ದೇವೆ, ಸಿಸಿ ಕ್ಯಾಮೆರಾಗಳನ್ನು ಸೂಕ್ಷ್ಮ ಪ್ರದೇಶ ಗಳಲ್ಲಿ ಅಳವಡಿಸಿ ಅಪರಾಧಗಳಿಗೆ ಕಡಿ ವಾಣ ಹಾಕುವ ಕಾರ್ಯ ನಡೆಯುತ್ತಿದೆ, ಕ್ಷೇತ್ರದ ಅಭಿವೃದ್ಧಿಗೆ ಶ್ರಮನಿರತನಾಗಿದ್ದೇನೆ 2018ರ ವಿದಾನ ಸಭಾ ಚುನಾವಣೆಯಲ್ಲಿ ಬಹುಮತ ನೀಡುವ ಮೂಲಕ ಮತ್ತೊಮ್ಮೆ ನಿಮ್ಮ ಸೇವೆಗೆ ಅನುವು ಮಾಡಿಕೊಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ರಾಧಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನೇಗೌಡ, ಸಂಪತ್, ಸೇರಿದಂತೆ ಇತರರಿದ್ದರು.

LEAVE A REPLY

Please enter your comment!
Please enter your name here