ಹಸಿ ಕರಗ ಮತ್ತು ಹೂವಿನ ಕರಗ ಮಹೋತ್ಸವ

0
229

ಶಿಡ್ಲಘಟ್ಟ: ನಗರದ ಯಲ್ಲಮ್ಮದೇವಿಯ ಹಸಿ ಕರಗ ಮತ್ತು ಹೂವಿನ ಕರಗ ಮಹೋತ್ಸವ ಅದ್ಧೂರಿಯಾಗಿ ಶುಕ್ರವಾರ ರಾತ್ರಿ ನೆರವೇರಿತು.

ಕರಗ ಮಹೋತ್ಸವ  ಕಳೆದ ನಾಲ್ಕು ದಿನಗಳಿಂದ ಗ್ರಾಮದ ಎಲ್ಲಾ ಸಮುದಾಯದವರು ಜಾತಿಭೇದವಿಲ್ಲದೇ ಮಹೋತ್ಸವದಲ್ಲಿ ಪಾಲ್ಗೊಂಡು ದೇವತಾ ಕಾರ್ಯವನ್ನು ನೆರವೇರಿಸಿದರು.

ನಾನಾ ರೂಪದ ಪುಷ್ಪ ಪಲ್ಲಕ್ಕಿಗಳು, ಡ್ಯಾನ್ಸ್‌ ಕಾರ್ಯಕ್ರಮ, ಗಾಯನ, ದಾವಣಗೆರೆ ಗೀತಾ ತಂಡದಿಂದ ಮಿಮಿಕ್ರಿ, ಹಾಸ್ಯ ರಸ ಸಂಜೆ ವಿನೂತನ ಡ್ಯಾನ್ಸ್‌, ಅಷ್ಟೇ ಅಲ್ಲದೇ, ಎಣ್ಣೆ ಮರ ಏರುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಈ ಬಾರಿ ಕರಗದ ಪೂಜಾರಿ  ಮುನಿಕೃಷ್ಣಣ್ಣ ಕರಗವನ್ನು ಹೊತ್ತು ಸಾವಿರಾರು ಭಕ್ತರ ಪ್ರೀತಿಗೆ ಪಾತ್ರರಾದರು.  ನಗರದ ನಡೆದ ಕರಗವನ್ನು ವೀಕ್ಷಿಸಲು ತಾಲೂಕಿನ ಸುತ್ತ ಮುತ್ತಲಿನ ಗ್ರಾಮಸ್ಥರಲ್ಲ ಬಂದಿದ್ದು ವಿಶೇಷವಾಗಿತ್ತು

LEAVE A REPLY

Please enter your comment!
Please enter your name here