ಹಾಲಿ ಶಾಸಕರ ವಿರುದ್ದ ಭುಗಿಲೆದ್ದ ಭಿನ್ನಮತ

1
6884

ಚಿಕ್ಕಬಳ್ಳಾಪುರ/ ಶಿಡ್ಲಘಟ್ಟ:ಮೇಲೂರು ರವಿಕುಮಾರ್ ದಿಟ್ಟ ನಡೆಯ ಕಡೆಗೆ.

ರವಿಕುಮಾರ್ ಅಭಿಮಾನಿಗಳ ಬಳಗ ಹಾಗೂ ಹೆಚ್.ಡಿ ದೇವೆಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಚಾರಿಟಬಲ್ ಟ್ರಸ್ಟ್ ನ ಸಾವಿರಾರು ಕಾರ್ಯಕರ್ತರು ಶ್ರೀ ಬ್ಯಾಟರಾನಸ್ವಾಮಿ ದೇವಸ್ಥಾನ ಬಳಿ ಅಪಾರವಾದ ಕಾರ್ಯಕರ್ತರು ಸೇರುವ ಮೂಲಕ ದೇವಸ್ಥಾನದ ಬಳಿ ಜಾತ್ರಾ ವಾತವರಣ ನಿರ್ಮಾಣವಾಗಿತ್ತು.

ಚುನಾವಣೆ ಎದುರಿಸಲು ಕಾರ್ಯಕರ್ತರ ಹಲವಾರು ಮುಖಂಡರ ತೀರ್ಮಾನಕ್ಕೆ ಬದ್ದನಾಗಿರುತ್ತೇನೆ. ನಮ್ಮ ಹೋರಾಟ ಜೆಡಿಎಸ್ ಪಕ್ಷದ ವಿರುದ್ಧ ಅಲ್ಲ ಹಾಲಿ ಶಾಸಕರ ವಿರುದ್ಧ ಯಾವುದೇ ಕಾರಣಕ್ಕೂ ಪಕ್ಷವನ್ನು ಹಾಳು ಮಾಡಲು ಬಿಡುವುದಿಲ್ಲ ಎಂದು ಜೆಡಿಎಸ್ ಮುಖಂಡ ಮೇಲೂರು ರವಿಕುಮಾರ್ ಮಾತನಾಡಿದರು.

ಈ ಭಾರಿ ಜೆಡಿಎಸ್ ಆಕಾಂಕ್ಷಿಯಾಗಿದ್ದ ಮೇಲೂರು ರವಿಕುಮಾರ್ ಗೆ ಟಿಕೇಟು ನೀಡದೆ ಸೂಲುವಂತ ಹಾಲಿ ಶಾಸಕರಿಗೆ ನೀಡಿದ್ದಾರೆ.ಆದರೂ ಸಹ ಸಿದ್ಧರಾಗಬೇಕು ಪಕ್ಷೇತರ ಅಬ್ಯಾರ್ಥಿಯಾಗಿ ಚುನಾವಣೆಗೆ ನಿಲ್ಲಬೇಕು ಭಾರಿ ಬಹುಮತಗಳಿಂದ ಗೆಲ್ಲಿಸುತ್ತೇವೆ ನಿಮ್ಮೊಂದಿಗೆ ನಿಷ್ಠಾವಂತ ಕಾರ್ಯಕರ್ತರು ನಾವಿದ್ದೇವೆ ಎಂದು ಸಾವಿರಾರು ಜನರು ಜಯಗೋಷಗಳನ್ನು ಕೂಗಿ ರವಿಕುಮಾರನ್ನು ಹೆಗಲಮೇಲೆ ಹೊತ್ತು ಸಾಗಿದರು.

ಈ ಸಂದರ್ಭದಲ್ಲಿ ಬಂಕ್ ಮುನಿಯಪ್ಪ ಸೇರಿದಂತೆ ಹಲವಾರು ಮುಖಂಡರು ಮತ್ತು ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.

1 COMMENT

LEAVE A REPLY

Please enter your comment!
Please enter your name here