ಹಾಲು ಉತ್ಪಾದಕರೊಂದಿಗೆ ಬಿ ಎಸ್ ವೈ ಸಂವಾದ…

0
109

ಹಾಲು ಉತ್ಪಾದಕರಿಗಾಗೀ ಹೊಸಕೋಟೆಯಲ್ಲಿ ಕ್ಯಾಟಲ್ ಪ್ಯಾಕ್ಟರೀಯನ್ನು ಅಧಿಕಾರಕ್ಕೆ ಬಂದ 6ತಿಂಗಳಲ್ಲಿ ಮಾಡುವುದಾಗಿ ಬಿಎಸ್ ವೈ ಘೋಷಣೆ.

ಬೆಂಗಳೂರು ಗ್ರಾಮಾಂತರ/ಹೊಸಕೋಟೆ:- ರಾಜ್ಯಾದ್ಯಂತ ಪರಿವರ್ತನಾ ರ್ಯಾಲಿ ಮುಗಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಲ್ಲಾ ವರ್ಗದವರನ್ನು ಮುಟ್ಟುವ ನಿಟ್ಟಿನಲ್ಲಿ ಇಂದು ಬೆಂಗಳೂರು ಗ್ರಾಮಾಂತರದ ಹೊಸಕೋಟೆಯಲ್ಲಿ ಹಾಲು ಉತ್ಪಾದಕರೊಂದಿಗೆ ಸಂವಾದದಲ್ಲಿ ಪಾಲ್ಗೊಂಡರು, ಅಪಾರ ಸಂಖ್ಯೆಯಲ್ಲಿದ್ದ ಹಾಲು ಉತ್ಪಾದಕರು ಹಲವು ಸಮಸ್ಯೆಗಳನ್ನು ಬಿಎಸ್ ವೈ ಮುಂದಿರಿಸಿದರು, ಬಿಎಸ್ ವೈ ಸರ್ಕಾವಧಿಯಲ್ಲಿ 2ರೂಗಳನ್ನು ಹಾಲು ಉತ್ಪಾದಕರಿಗೆ ಬೆಂಬಲವಾಗಿ ನೀಡುತಿತ್ತು, ಆದರೆ ಈಗಿನ ಸರ್ಕಾರ 3 ರೂಗಳನ್ನು ನೀಡುತ್ತಿರುವುದಾಗಿ ತಿಳಿಸಿ ಎಸ್.ಎನ್.ಎಪ್ 8.5ಮೇಲ್ಪ ಟ್ಟವರಿಗೆ ನೀಡಿ ಕೊಡುವ ನಾಟಕವಷ್ಟೇ ಮಾಡುತ್ತಿದ್ದಾರೆಂದು ಕೆಲ ಹಾಲು ಉತ್ಪಾದಕರು ಕಿಡಿಕಾರಿದರು,ಹಾಗೂ ರಾಸುವಿಗೆ ವಿಮೆಯು ಅರ್ಧ ಭಾಗವನ್ನು ನಮ್ಮಿಂದಲೇ ವಸೂಲಿ ಮಾಡುತ್ತಿದ್ದಾರೆಂಬ ಆರೋಪವನ್ನು ಮಾಡಿದರು, ಈ ಎಲ್ಲಾ ಪ್ರಶ್ನೆಗಳನ್ನು ಸಂಯಮದಿಂದ ಆಲಿಸಿದ ಬಿ ಎಸ್ ವೈ ಉತ್ತರಿಸಿ ನಮ್ಮ ಸರ್ಕಾರವಧಿಯಲ್ಲಿ2ರೂ ಜಾರಿ ಮಾಡಿದಂತೆ 3ರೂಗಳನ್ನು ಎಲ್ಲರಿಗು ಸಿಗುವಂತೆ ಮಾಡುತ್ತೇನೆಂದು ತಿಳಿಸಿ, ಈಗಾಗಲೇ ಕೆಎಂಎಪ್ 200ಕೋಟಿ ರೂಗಳನ್ನು ಹಾಲು ಉತ್ಪಾದಕರಿಗಾಗೀ ಮೀಸಲಿರಿಸಿದೆ ಅದನ್ನು ಹೊಸಕೋಟೆಯಲ್ಲಿ ಕ್ಯಾಟಲ್ ಪ್ಯಾಕ್ಟರೀಯನ್ನು ಅಧಿಕಾರಕ್ಕೆ ಬಂದ 6 ತಿಂಗಳಲ್ಲೇ ನಿರ್ಮಾಣ ಮಾಡುವುದಾಗಿ ಘೋಷಿಸಿದರು, ಈ ಮೂಲಕ ರೈತರ ಜೊತೇಗೆ ಹಾಲು ಉತ್ಪಾದಕರನ್ನು ಪಕ್ಷದ ಜೊತೇಗೆ ಕೆಲಸ ಮಾಡುವ ರೀತಿ ಮನವೊಲಿಸುವ ಪ್ರಯತ್ನವನ್ನು ಬಿಎಸ್ ವೈ ಮಾಡಿದ್ದು ಸ್ಪಷ್ಟವಾಗಿತ್ತು , ಈ ಸಂದರ್ಭದಲ್ಲಿ ಹೊಸಕೋಟೆಯ ಬಿಜೆಪಿ ಅಭ್ಯರ್ಥಿ ಶರತ್ ಬಚ್ಚೇಗೌಡ ಹಾಗೂ ಮಾಜಿ ಸಚಿವ, ಬಚ್ಚೇಗೌಡ, ಹಾಲು ಡೈರಿ ನಿರ್ದೇಶಕ ಹಾಗೂ ಹೊಸಕೋಟೆ ತಾಲೂಕಿನ ಬಿಜೆಪಿ ಅಧ್ಯಕ್ಷ ಹುಲ್ಲೂರು ಮಂಜುನಾಥ್, ಪಟ್ಟಣದ ಬಿಜೆಪಿ ಅಧ್ಯಕ್ಷ ಬೈರೆಗೌಡ, ಭಾರತ ಆಹಾರ ನಿಗಮದ ಸದಸ್ಯರು ವಿವಿ.ಸದಾನಂದ್, ಟಿಎಪಿಸಿಎಂಸ್ ಅಧ್ಯಕ್ಷ ಕೋಡಿಹಳ್ಳಿ ಸೊನ್ನಪ್ಪ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಬೈಟ್ : ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ.

LEAVE A REPLY

Please enter your comment!
Please enter your name here