ಹಾವುಗಳನ್ನು ಉಳಿಸಿ ,ಜಾಗೃತಿ ಅಭಿಯಾನ

0
184

ಬೆಂಗಳೂರು/ಮಹದೇವಪುರ : ಕ್ಷೇತ್ರದ ಮಾರತ್ತಹಳ್ಳಿ ವಾರ್ಡ್’ ಪ್ರಸಿದ್ಧ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ಭಕ್ತಾದಿಗಳಿಗೆ ಹಾವುಗಳಿಗೆ, ಹುತ್ತಗಳಿಗೆ ಹಾಲು ಹಾಕಬಾರದು, ಹಾವುಗಳ ಜೀವ ಉಳಿಸಿ ಎಂದು ಮಿಡಿತ ಫೌಂಡೇಶನ್ ಹಾಗೂ ಬ್ರಿಲಿಯಾಟ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆ ಸಹಯೋಗದಲ್ಲಿ ಜಾಗೃತಿ ಮೂಡಿಸುವ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಉರಗ ಸಂರಕ್ಷಕ ಸ್ನೇಕ್ ಮೋಹನ್ ಮಾತನಾಡಿ, ಹಾವು ಹಾಲು ಕುಡಿಯುವುದಿಲ್ಲ. ಹಾವು ಹಾಲಿನ ವಾಸನೆ ನೋಡಲು ಇಷ್ಟಪಡುವುದಿಲ್ಲ, ಹಾವು ಹುತ್ತಿನಲ್ಲಿರುವುದು ಬಹಳ ಕಡಿಮೆ‌. ಬೇರಿ ಜೀವಿಗಳಿಂದ ತಯಾರಾದ ಹುತ್ತದಲ್ಲಿ ತನ್ನ ರಕ್ಷಣೆಗಾಗಿ ಹಾವುಗಳು ವಾಸಿಸುತ್ತೆವೆ ಹೊರತು ಯಾವ ಕಾರಣವು ಇಲ್ಲ.ಪತ್ರಿಕೆ ಹಾಗು ಟಿವಿಯಲ್ಲಿ ಹಾವು ಹಾಲು ಕುಡಿಯುವುದು ನೋಡಿರಬಹುದು. ಆದರೆ ಇದು ಹೆಗೆ ಸಾಧ್ಯ? ಹಾವಾಡಿಸುವವರು ನಾಗಪಂಚಮಿಯ ಎರಡು ತಿಂಗಳು ಮುಂಚಿತವಾಗಿ ಹಾವಿಗೆ ಹಿಡಿದು ಅದಕ್ಕೆ ಆಹಾರ ನೀರು ನೀಡದೆ ಉಪವಾಸ ಹಾಕಿರುತ್ತಾರೆ. ಆದ್ದರಿಂದ ಉಪವಾಸ ಇದ್ದ ಹಾವು ಹಾಲು ಕುಡಿಯಲು ಮುಂದಾಗುತ್ತದೆ, ಆದರೆ ಅದು ಸಹ ಜಿಣ೯ವಾಗದೆ ಹೊಟ್ಟೆ ನೋವು ಹಾಗು ಸ್ವಾಶಕೊಶದಲ್ಲಿ ಉಸಿರಾಟದ ತೊಂದರೆಯಿಂದ ಕೆಲವೇ ದಿನಗಳಲ್ಲಿ ಹಾವು ಸಾವನ್ನೋಪ್ಪುತ್ತದೆ.

ಪೋಜೆಗೆ ಬಳಸುವ ಅರಿಶಿನ, ಕುಂಕುಮ, ಕಪೂ೯ರ, ನೀರು ಹಾಗು ಹಾಲು ಇವೆಲ್ಲವುಗಳು ಹಾವಿಗೆ ಹಾನಿ ಉಂಟು ಮಾಡುತ್ತದೆ. ಅರಿಶಿನ, ಕುಂಕುಮ ನೇರವಾಗಿ ಕಣ್ಣುಗಳಿಗೆ ಬಿದ್ದಾಗ ಸಿಟ್ಟಿನಿಂದ ಹೊರಬಂದು ಕಚ್ಚಿದ್ದು ದಾಖಲೆಗಳಿವೆ. ಎಕೆಂದರೆ ತನ್ನ ಕಣ್ಣಿನ ರಕ್ಷಣೆ ಮಾಡಿಕೊಳ್ಳಲು ಹಾವಿಗೆ ಕಣ್ಣು ರೆಪ್ಪೆ ಸಹ ಇರುವದಿಲ್ಲ. ಆಹಾರ ಧಾನ್ಯಗಳನ್ನು ನಾಶಮಾಡುವ ಇಲಿಗಳನ್ನು ನಿಯಂತ್ರನದಲ್ಲಿಡುವದರಲ್ಲಿ ಹಾವಿನ ಪಾತ್ರ ದೊಡ್ಡದು. ಇಲಿಗಳನ್ನು ಹಾಗೆ ಬಿಟ್ಟರೆ ಶೇ.75% ರಷ್ಟು ಕಾಳುಗಳನ್ನು ಕಡಿಗಳನ್ನು ತಿಂದು ನಾಶಮಾಡುತ್ತವೆ, ಇಲಿಗಳನ್ನು ಸಮತೊಲನದಲ್ಲಿಟ್ಟು ಪ್ಲೇಗ್ ಎಂಬ ರೋಗದಿಂದ ದೂರವಿಟ್ಟು ರೈತನಿಗೆ ಸಹಕಾರಿಯಾಗಿರುವ ಪ್ರಾಣಿ ಹಾವು ಎಂದು ತಿಳಿಸಿದರು.

ಮಿಡಿತ ಫೌಂಡೇಶನ್ ಅಧ್ಯಕ್ಷ ಪರಿಸರ ಮಂಜು ಮಾತನಾಡಿ,
ವಿಷಾದ ಹಾವಿಗೆ ಹಾಲೆ ವಿಷವಾಗಿದೆ, ಹಾಲಿನಿಂದ ಹಾವಿಗೆ ಸಾವು ಖಚಿತ. ಅದರಿಂದ ಮೂಢನಂಬಿಕೆಗಳಿಗೆ ಬಳಿಯಾಗಿ ಹಾವುಗಳಿಗೆ ನಾಗರ ಪಂಚಮಿಯಲ್ಲಿ ಹಾಲಿಡುವುದು ಸರಿಯಲ್ಲ. ಭಕ್ತಿಯಿಂದ ಪೂಜಿಸುವ ನಾಗರಾಜನಿಗೆ  ಭಕ್ತರಿಂದಲೆ ಕೊಲೆಮಾಡುವುದು  ಬೇಡ, ಸಂಪ್ರದಾಯ ಎಂದು ಹಾವುಗಳನ್ನು ಕೊಲ್ಲುವುದು  ಸರಿಯಲ್ಲ,  ಅದರ ಬದಲು ಬಡ ಮಕ್ಕಳಿಗೆ ಹಾಗೂ ರೋಗಿಗಳಿಗೆ ಹಾಲನ್ನು ವಿತರಿಸಿ ಅವರ ಬದುಕನ್ನು ಉಳಿಸಿ. ಹಾವು ಪರಿಸರ ಸ್ನೇಹಿ, ರೈತ ಸ್ನೇಹಿಯಾಗಿದ್ದು, ಹಾವಿನ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಹಾವು ಎಂದಿಗೂ ಹಾಲು ಸೇವನೆ ಮಾಡುವುದಿಲ್ಲ. ಧರ್ಮದ ಹೆಸರಿನಲ್ಲಿ ಹಾವಿಗೆ ಹಾಲು ಎರೆಯುವುದು ಅಂಧ ಶೃದ್ಧೆ. ಹಾವಿಗೆ ಹಾಲು ಎರೆಯುವ ಬದಲು ಹಸಿದ ಹೊಟ್ಟೆಗಳಿಗೆ ಹಾಲುನಿಸಿ ಎಂದು ಹೇಳಿದರು.

ಇದೇವೇಳೆ ಉರಕ ಪ್ರೇಮಿಗಳು ರಸ್ತೆಬದಿ ಇರುವ ಅಂಗಡಿಗಳಿಗೆ, ರಸ್ತೆ ಓಕರಿಕೆ  ಹಾವಿನ ಕುರಿತು  ಅಂಧ ಶೃದ್ಧೆಯ ಬಗ್ಗೆ  ಅರಿವು ಮೂಡಿಸುವ  ಉಪನ್ಯಾಸ ನೀಡುತ್ತಿದ್ದರೇ ಇನ್ನೊಂದೆಡೆ ಭಕ್ತರು ದೇವರ ಆಶಿರ್ವಾದ ಪಡೆಯುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬಂದಿತ್ತು.

ಈ ಜಾಗೃತಿ ಕಾರ್ಯಕ್ರಮದಲ್ಲಿ ಬ್ರಿಲಿಯಾಟ್ ಕಂಪ್ಯೂಟರ್ ಎಜುಕೇಶನ್ ಮುಖ್ಯಸ್ಥೆ‌ ಮೇರಿ ಆಗಿನ್ಸ್, ವರ್ತೂರು ಗೌರಿಪೊನ್ನಸ್ವಾಮಿ, ಉರಗ ಪ್ರೇಮಿಗಳಾದ ಯೇಸು, ಕನ್ನಡ ಭಕ್ತ ಕಿರಣ್, ಮಧು, ದುರ್ಗಪ್ರಸಾದ್,  ವಿದ್ಯಾರ್ಥಿಗಳಾದ ಸರಸ್ವತಿ, ರೂಪ, ಚೈತನ್ಯ, ಇಂದಿರ, ಜಯಂತಿ, ಮಿಡಿತ ಸಂಸ್ಥೆಯ ಸದಸ್ಯರು, ಸ್ವಯಂ ಸೇವೆಕರು ಮುಂತಾದವರು ಇದ್ದರು.

LEAVE A REPLY

Please enter your comment!
Please enter your name here