ಹಾಸಿಗೆ ಇಲ್ಲದ ಆಸ್ಪತ್ರೆನಾ..?

0
176

ಚಿಕ್ಕಬಳ್ಳಾಪುರ/ಬಾಗೇಪಲ್ಲಿ: ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಯನ್ನು ಹೀನಾಯವಾಗಿ ನೆಲದ ಮೇಲೆ ಮಲಗಿಸಿರುವ ದೃಶ್ಯ ಕಂಡು ಆಸ್ಪತ್ರೆಗಳೇಕೆ ಈ ಗತಿಗೆಟ್ಟ ಸ್ಥಿತಿ ತಲುಪುತ್ತಿದ್ದಾವೆ? ಎನ್ನುವ ಒಂದು ಪ್ರಶ್ನೆ ಕಾಡುತ್ತೆ. ಈತನನ್ನೇಕೆ ನೆಲದ ಮೇಲೆ ಮಲಗಿಸುದ್ದಾರೆ ಎಂದು ವಿಚಾರಿಸಿದರೆ   ಸುಮಾರು ಎಂಟು ಒಂಭತ್ತು ದಿನಗಳಿಂದ ಈತನಿಗೆ ಭೂತಾಯಿಯೇ ಹಾಸಿಗೆಯಂತೆ.ಯಾಕಪ್ಪಾ ಅಂತಿರಾ?  ಈತನದ್ದು ಹೊರರಾಜ್ಯವಂತೆ  ಈತನ ಕಡೆಯವರೂ ಇಲ್ಲಿ ಯಾರೂ ಇಲ್ಲವಂತೆ, ಈತನನ್ನು ಹುಡಿಕೊಂಡು ಯಾರೂ ಬಂದೂ ಇಲ್ಲ ಎಂಬ ಕಾರಣಕ್ಕೆ ಆಸ್ಪತ್ರೆ ಸಿಬ್ಬಂದಿ ಈತನನ್ನು ಈ ಹೀನಾಯಸ್ಥಿತಿಗೆ ತಳ್ಳಿದ್ದಾರೆ ಎಂದು ತಿಳಿದುಬಂದಿದೆ. ಎಲ್ಲೋ ರಸ್ತೆ ಬದಿಯಲ್ಲಿ ಎಚ್ಚರತಪ್ಪಿ ಬಿದ್ದಿದ್ದ . ಈ ರೋಗಿಯ ಹೆಸರು ಗೋವಿಂದರಾಜು ಈತ ತಮಿಳು ಭಾಷೆ ಮಾತನಾಡುತ್ತಿದ್ದು, ಮತಿಸ್ಥಿಮಿತ ಕಳೆದುಕೊಂಡಿದ್ದು ಬೆಡ್ ಮೇಲಿನಿಂದ ಬೀಳಬಹುದೆಂದು ಕೆಳಗೆ ಮಲಗಿಸಲಾಗಿದ್ದು, ಆತನ ತಲೆಯನ್ನು ಸ್ಕ್ಯಾನ್‌ ಮಾಡಬೇಕಾಗಿದೆ ಎಂದು ಉತ್ತರನೀಡಿ ನುಳಿಚಿಕಳ್ಳುವ  ಆಸ್ಪತ್ರೆಯ ಅಧಿಕಾರಿಗಳು, ಈತನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗ ಬೇಕಾಗಿದೆ. ಕಳೆದ 8 ದಿನದ  ಹಿಂದೆ ಈತನನ್ನು ದಾರಿ ಹೋಕರು 108 ವಾಹನದ ಮೂಲಕ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎನ್ನಲಾಗಿದೆ. ಈತನ ಸಂಬಂಧಿಗಳಾಗಲಿ ಅಥವಾ ಈತನ ವಿವರ ತಿಳಿದು ಬಂದಿಲ್ಲ. ಈತನನ್ನು ತಂದು ಆಸ್ಪತ್ರೆಗೆ ಸೇರಿಸಿ ಹೋದವರು ಇತ್ತ ತಲೆ ಹಾಕಿಲ್ಲ ಎನ್ನುತ್ತಾರೆ ಇಲ್ಲನ ಸಿಬ್ಬಂಧಿ ಒಬ್ಬರು.

LEAVE A REPLY

Please enter your comment!
Please enter your name here