ಹಿಂದಿ ಸಾಹಿತ್ಯಕ್ಕೆ ಹೆಚ್ಚಿನ ಒಲವು ನೀಡಿ.

0
179

ರಾಯಚೂರು:ಹಿಂದಿ ಸಾಹಿತ್ಯಕ್ಕೆ ಹೆಚ್ಚಿನ ಒಲವು ತೊರಿಸಬೇಕೆಂದು ನೇಪಾಳದ ಹಿಂದಿ ಬಾಷೆ ಪ್ರಚಾರಕ ವಿಷ್ಣುಲಾಲ್ ಕುಮಾರ  ಹೇಳಿದರು. ಅವರಿಂದು ಎಲ್.ವಿ.ಡಿ.ಕಾಲೇಜ್ ನಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಹಿಂದಿ ದಿವಸ್ ಹಿಂದಿ ಕಾರ್ಯ ಸಂಗೋಷ್ಟಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು. ದಲಿತ ಮತ್ತು ಮಹಿಳಾ ಸಾಹಿತ್ಯ ವನ್ನು ಬಿಟ್ಟು ಅಲ್ಪಸಂಖ್ಯಾತರ ಸಾಹಿತ್ಯದಿಂದ ಹೊರ ಬಂದಿರುವ ನಾವು ನೇಪಾಳ ಮತ್ತು ಭಾರತ ಅಂತರಾಷ್ಟ್ರೀಯ ಗಡಿ ಸಂಬಂದವನ್ನು ಬಲಪಡಿಸಲು ಹಿಂದಿ ಅವಶ್ಯಕ ವಾಗಿದೆ ಎಂದರು. ನೇಪಾಳ ದೇಶದಲ್ಲಿ ೩ ಕೋಟಿ ಜನಸಂಖ್ಯೆ ಇದ್ದಾರೆ ಆದರೆ ಹಿಂದಿ ಬಾಷೆಮಾತನಾಡುವ ಸಂಖ್ಯೆ ಕಡಿಮೆ ಇದೆ.ಭಾರತ ದಲ್ಲಿ ಹಿಂದಿ ಭಾಷೆಗೆ ಹೆಚ್ಚಿನ ಮಾನ್ಯತೆ ಇದೆ ಮತ್ತು ಸಂಸ್ಕತಿ ,ಭಾಷೆ,ಇವರು ಈ ದೇಶದಲ್ಲಿ ಹಿಂದಿದೆ ಜಾಸ್ತಿ ಒತ್ತು ನೇಡಿದೆ ಇದರಿಂದಾಗಿ ಭಾರತ ದೇಶದ ಮೂಲಕ ನೇಪಾಳದಲ್ಲಿ ಹಿಂದಿ ಭಾಷೆಯನ್ನು ಬೆಳಸಲಿಕ್ಕೆ ಆದ್ಯಯನಕ್ಕಾಗಿ ಆಗಮಿಸಿ  ನಮ್ಮ ದೇಶದಲ್ಲಿ ಭಾರತ ದೇಶದ ಬಗ್ಗೆ ಹೆಚ್ಚಿ ದೇಶಾಭಿ ಮಾನವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿಂದಿ ಭಾಷೆಯಲ್ಲಿ ಮಹಿಳಾ ಸಾಹಿತಿಗಳ ಸಂಖ್ಯೆ ಹೆಚ್ಚಳವಿದೆ ಇದರಿಂದ ಈ ದೇಶದಲ್ಲಿ ಹಿಂದಿ ಸಾಹಿತ್ಯ ಜೀವಂತವಿದೆ. ತಾಂತ್ರಿಕ ವಿಜ್ಞಾನಕ್ಕೆ ನೀಡಿರುವ ಕೋಡುಗೆ ಅಪಾರ ಇದನ್ನು ಹಿಂದಿ ಭಾಷೆ ಸಾಹಿತ್ಯ ಕ್ಕೆ ನೀಡಬೇಕೆಂದರು.

LEAVE A REPLY

Please enter your comment!
Please enter your name here