ಹಿಂದೂ ಸಂಸ್ಕೃತಿಗೆ ಮೊರೆಹೋದ ವಿದೇಶಿ ಮಹಿಳಾ ತಂಡ

0
354

ಬಳ್ಳಾರಿ /ಹೊಸಪೇಟೆ :ವಿಶ್ವಪ್ರಸಿದ್ಧ ಹಂಪಿಯನ್ನು ಯಾರು ನೋಡಲು ಬಯಸೋದಿಲ್ಲ ಹೇಳಿ. ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆಯಾದ್ರೂ ತೆರದ ಮ್ಯೂಸಿಯಂ ಸ್ಮಾರಕಗಳನ್ನು ನೋಡಬೇಕು ಎಂದು ಬಯಸ್ತಾರೆ. ಅದಕ್ಕೆ ದೇಶವಿದೇಶಗಳಿಂದ ಪ್ರವಾಸಿಗರು ತಂಡೋಪತಂಡವಾಗಿ ಆಗಮಿಸ್ತಾರೆ. ಆದರೆ ಇಲ್ಲೊಂದು ವಿದೇಶಿ ಮಹಿಳೆಯರ ತಂಡ ಹಂಪಿಯನ್ನು ನೋಡಿದ ಪರಿ ಹೇಗಿತ್ತು ಗೊತ್ತಾ? ನಮ್ಮ ಸಂಸ್ಕೃತಿಯನ್ನು ಅವರು ಗೌರವಿಸಿದ್ದು ಹೇಗೆ ಗೊತ್ತಾ? ನೀವೇ ನೋಡಿ.
ವಿಶ್ವಪರಂಪರಾ ಪಟ್ಟಿಯಲ್ಲಿ ಹಂಪಿಯನ್ನು ನೋಡಲು ಸಾಗರದಾಚೆಯಿಂದ ಪ್ರವಾಸಿಗರು ಆಗಮಿಸ್ತಾರೆ. ಇಲ್ಲಿಗೆ ಆಗಮಿಸುವ ವಿದೇಶಿಯರು ಹೆಚ್ಚಾಗಿಯೇ ತುಂಡುಡುಗೆ ತೊಟ್ಟು ಬರೋದು ಕಾಮನ್. ಈ ಹಿಂದೆ ಹಂಪಿಯ ಶ್ರೀ ವಿರು ಪಾಕ್ಷೇಶ್ವರ ದೇವಸ್ಥಾನದಲ್ಲಿ ತ್ರೀ ಪೀಸ್ ಬಟ್ಟೆ ತೊಟ್ಟು, ಚಪ್ಪಲಿ ಹಾಕಿ ರಾದ್ಧಾಂತವಾಗಿತ್ತು. ಆದರೆ ಇದಕ್ಕೆ ಅಪವಾದ ಎನ್ನುವಂತೆ ಹಂಪಿಗೆ ಬಂದಿಳಿದಿರುವ ವಿದೇಶಿಯರ ಮಹಿಳಾ ತಂಡ ನಮ್ಮ ಹಿಂದೂ ಸಂಸ್ಕೃತಿಯನ್ನು ಗೌರವಿಸಿದ್ದಾರೆ. ರಷ್ಯಾ ದೇಶದಿಂದ ಬಂದ 15 ವಿದೇಶಿ ಮಹಿಳೆ ಯರ ತಂಡ ಹಂಪಿ ವೀಕ್ಷಣೆಯುದ್ದಕ್ಕೂ ಸೀರೆ ಯನ್ನು ಉಟ್ಟಿದ್ದು ವಿಶೇಷವಾಗಿತ್ತು. ಎಂದೂ ಸೀರೆ ಉಡದ ಈ ರಷ್ಯಾ ದೇಶದ ಸುಂದರಿಯರು ಇದೇ ಮೊದಲ ಬಾರಿಗೆ ಹಂಪಿಗೆ ಭೇಟಿ ನೀಡಿದ್ದರು. ಎರಡು ದಿನಗಳ ಕಾಲ ಹಂಪಿಯ ಪ್ರಸಿದ್ಧ ದೇವಾಲಯ, ಸ್ಮಾರಕಗಳು ವೀಕ್ಷಣೆ ಮಾಡಿ ಖುಷಿಪಟ್ಟರು.

ಕಳೆದ ಕೆಲ ದಿನಗಳ ಹಿಂದೆ ಭಾರತಕ್ಕೆ ಬಂದಿಳಿದ ರಷ್ಯಾ ವಿದೇಶಿಯರ ತಂಡ ಗೋವಾದಲ್ಲಿ ತಂಗಿದ್ದರು. ಆನಂತರ ಅಲ್ಲಿಂದ ಹಂಪಿ ನೋಡಲು ಬಯಸಿದ ತಂಡಕ್ಕೆ ರಷ್ಯಾ ದೇಶದ ರೂಟ್ ಗೌಡ್ ನತಾಲಿ ಅವರ ಸಲಹೆ ಮೇರೆಗೆ ಹಂಪಿಯನ್ನು ಸೀರೆ ಉಟ್ಟು ನೋಡಲು ಉತ್ಸುಕರಾದ್ರು. ಎರಡು ದಿನಗಳ ಕಾಲ ಬೆಟ್ಟಗುಡ್ಡಗಳಾದ್ರೂ ಚಿಂತೆಯಿಲ್ಲ, ಆ ಉಡುಗೆಯಲ್ಲಿ ಪ್ರಯಾಣ ಮಾಡಿ ಸೀರೆ ಉಟ್ಟು ಹಂಪಿಯ ಅಷ್ಟೂ ಸ್ಮಾರಕಗಳನ್ನು ವೀಕ್ಷಣೆ ಮಾಡಿದರು. ಸೀರೆ ಉಟ್ಟು ಇದರಲ್ಲಿಯೇ ಬೆಳಗ್ಗೆ ಎತ್ತರದ ಮಾತಂಗ ಪರ್ವತ ಬೆಟ್ಟ ಹತ್ತಿ ಸೂರ್ಯೋದಯ, ಸಂಜೆ ಹೇಮಕೂಟ ಪರ್ವತ ದಲ್ಲಿ ಸೂರ್ಯಾಸ್ತವನ್ನು ನೋಡಿ ಅದ್ಭುತ ಅನುಭೂತಿ ಪಡೆದರು.
ನಮ್ಮ ದೇಶದಲ್ಲಿಯೇ ದೇವಾಲಯಗಳಿಗೆ ಡ್ರೆಸ್ ಕೋಡ್ ಬೇಕೆ ಎಂಬ ಪ್ರಶ್ನೆ ಮಾಡಿಕೊಳ್ಳುತ್ತಿರುವ ಸಂದರ್ಭವಿದು. ಇಂಥ ಪರಿಸ್ಥಿತಿಯಲ್ಲಿ ರಷ್ಯಾ ದೇಶದ ಮಹಿಳೆಯರು, ಯುವತಿಯರು ನಮ್ಮ ದೇಶದ ಸಂಸ್ಕೃತಿಗೆ ಗೌರವ ಕೊಟ್ಟಿದ್ದಾರೆ. ಸೀರೆ
ಉಟ್ಟು ನಮ್ಮವರನ್ನು ನಾಚಿಸುವಂತೆ ಸಭ್ಯವಾಗಿ ಹಂಪಿ ವೀಕ್ಷಣೆ ಮಾಡಿದ್ದಾರೆ. ಆ ಮೂಲಕ ವಿದೇಶಿಯರ ಟೂಪೀಸ್ ಉಡುಗೆಗೆ ಬ್ರೇಕ್ ಕೂಡ ಹಾಕಿದ್ದು ಮೆಚ್ಚುವ ವಿಚಾರವೇ.

LEAVE A REPLY

Please enter your comment!
Please enter your name here