ಹಿರಿಯ ಮುತ್ಸದಿಯ ಹುಟ್ಟುಹಬ್ಬದ ಸಂಭ್ರಮ

0
161

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ತಾಲೂಕಿನ ಕಾಂಗ್ರೆಸ್ ಹಿರಿಯ ರಾಜಕೀಯ ಮುತ್ಸದಿ,ಮಾಜಿ ಶಾಸಕ ಆರ್.ಜಿ. ವೆಂಕಟಾಚಲಯ್ಯನವರ 82 ನೇ ಜನ್ಮದಿನಾಚರಣೆಯನ್ನು ನಗರದ ಗುರುಭವನದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಜನ್ಮದಿನಾಚರಣೆಯನ್ನು ಆಚರಿಸಿಕೊಂಡ ಆರ್.ಜಿ ಅವರು ತಾಲೂಕಿನ ಜನತೆಗೆ ಸ್ವಾತಂತ್ರ್ಯದಿನಾಚರಣೆಯ ಶುಭಾಶಯ ಕೋರಿದರು.ಶಾಸಕ ಟಿ.ವೆಂಕಟರಮಣಯ್ಯ ಹಾಜರಿದ್ದು ತಮ್ಮ ರಾಜಕೀಯಗುರು ಆರ್.ಜಿ.ವೆಂಕಟಾಚಲಯ್ಯ ನವರಿಗೆ ಸಿಹಿತಿನಿಸಿ ಆಶೀರ್ವಾದಬಪಡೆದರು. ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು, ಸಿಹಿ ಹಂಚಿ ಸಂಭ್ರಮಿಸಿದರು. ಕಾರ್ಯಕ್ರಮದ ಅಂಗವಾಗಿ ಯುವಕಾಂಗ್ರೆಸ್ ಘಟಕದ ವತಿಯಿಂದ ರಕ್ತದಾನ ಮತ್ತು ಉಚಿತ ಕಣ್ಣಿನ ತಪಾಸಣಾ ಶಿಭಿರವನ್ನು ಏರ್ಪಡಿಸಲಾಗಿತ್ತು.ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here