ಹುಚ್ಚು ಕೋಳಿ ಮನಸು ಅದು ಹದಿನಾರರ ವಯಸ್ಸು…

0
122

ಬೆಂಗಳೂರು/ಮಹದೇವಪುರ:-ಹುಚ್ಚು ಕೋಳಿ ಮನಸು ಅದು ಹದಿನಾರರ ವಯಸ್ಸು… ಇವತ್ತು ನಾವ್ ಹೇಳ ಹೊರಟಿರೋ ಸ್ಟೋರಿ ಅಂತದ್ದೇ…
ಹೌದು, ಲೈಟಾಗಿ ಲವ್ವಾಗಿ ಹುರಿ ಮೀಸೆಯ ಹುಡುಕಿಕೊಂಡವಳಿಗೆ ಇದೀಗ ಪ್ರೀಯತಮನೇ ವಿಲನ್ ಆಗಿಬಿಟ್ಟಿದ್ದ. ಹಣ್ಣು ಹಂಚಿಕೊಳ್ಳೋ ರೀತಿ ಪ್ರೀತಿಸಿದ ಹೆಣ್ಮಗಳನ್ನೇ ಸ್ನೇಹಿತರ ಜೊತೆ ಹಂಚಿಕೊಳ್ಳೋಕೆ ಹೋದವ್ನ ರೇಪ್ ಕಹಾನಿ ನೋಡಿ ಬರೋಣ ಬನ್ನಿ.

ಆಕೆಗಿನ್ನೂ ಪಿಯುಸಿ ಇದೇ ರಾಘವೇಂದ್ರ ದಿನಾಲೂ ಬೆಂಗಳೂರಿನ ಕಾಡುಗೋಡಿ ಯಲ್ಲಿರುವ ಟೀ ಅಂಗಡಿಯಲ್ಲೇ ಕುಂತು ಏಯ್ ಬುಲ್ ಬುಲ್ ಮಾತಾಡಕಿಲ್ವಾ ಅಂತ ಹೇಳಿ ಪ್ರೀತಿಯ ಪಾರಿವಾಳಕ್ಕೆ ಗಾಳಹಾಕ್ತಿದ್ದ. ಅದೇನೋ ಮೋಡಿ ಆಕೆಯನ್ನ ಕಾಡಿ ಈ ಐತ್ಲಾಂಡಿ ರಾಘವೇಂದ್ರ ನ ಜೊತೆ ಲವ್ವು ಶುರು ಹಚ್ಚಿಕೊಂಡು ಬಿಟ್ಟಿದ್ದಳು. ವಾಟ್ಸಪ್ ಟೆಕ್ಸ್ಟು-ಫೋನ್ ಟಾಕು ಹೆಚ್ಚಾಗಿ ಮುಚ್ಚಿಟ್ಟ ಮಾತೆಲ್ಲ ಆ ಸಂಜೆ ಅರಳಿತ್ತು.ಹೀಗೆ ರಾಘವೇಂದ್ರ ಮುಗ್ದ ಹುಡುಗಿಯನ್ನ ತನ್ನ ತಾಳಕ್ಕೆ ತಕ್ಕನಾಗಿ ಬಳಸಿ ಕೊಂಡು ಹಾಸಿಗೆಗೆ ಕರೆದಿದ್ದ. ಏನೂ ತಿಳಿಯದ ಹೆಣ್ಮಗಳು ರಾಘವೇಂದ್ರನ ಮಾತಿನಂತೆ ಕಾಡು ಗೋಡಿಯ ಕ್ಲಾಸಿಕ್ ಇನ್ ಲಾಡ್ಜ್ ಗೆ ಕಳೆದ ತಿಂಗಳ ೩೦ ನೇ ತಾರೀಕಿನಂದು ಕರೆದೊಯ್ದಿದ್ದ. ಅಷ್ಟೇ ಅಲ್ಲ ಅದೇ ಲಾಡ್ಜ್ ನಲ್ಲಿ ರಾತ್ರಿಯೆಲ್ಲ ವಿದ್ಯಾರ್ಥಿನಿ ಯ ಜೊತೆ ತಂಗಿದ್ದ.

ಬೈಟ್ – ಅಬ್ದುಲ್ ಅಹದ್ – ವೈಟ್ ಫೀಲ್ಡ್ ವಿಭಾಗದ ಡಿಸಿಪಿ.

ಇತ್ತ ಮಗಳು ಕೆ.ಆರ್ ಪುರಂ ಬಳಿಯ ಕಾಲೇಜಿಗೆ ಹೋಗ್ತೀನಿ ಅಂದವ್ಳು ಮನೆಗೆ ಬರದೇ ಇರೋದನ್ನ ನೋಡಿ ಹೆದರಿದ ಯುವತಿಯ ಪೋಷಕರು ಕೆ.ಆರ್ ಪುರಂ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಕೆ.ಆರ್.ಪುರ ಪೊಲೀಸ್ರು ಯುವತಿಗಾಗಿ ಹುಡುಕಾಟ ನಡೆಸಿದ್ರು. ಅಂತೂ ಇಂತೂ ಸಂತ್ರಸ್ತ ಯುವತಿಯ ಫೋನ್ ನಾಲ್ಕನೇ ತಾರೀಕು ಸ್ವಿಚ್ ಆನ್ ಆಗ್ತಿದ್ದಂತೆ ಪೊಲೀಸ್ರು ವಿದ್ಯಾರ್ಥಿನಿಯಿದ್ದ ಜಾಗವನ್ನ ಪತ್ತೆಹಚ್ಚಿದ್ದರು. ಈ ವೇಳೆ ವಿದ್ಯಾರ್ಥಿನಿ ಕಾಡು ಗೋಡಿಯ ಕ್ಲಾಸಿಕ್ ಲಾಡ್ಜ್ ನಲ್ಲಿರೋದನ್ನ ತಿಳಿದ ಪೊಲೀಸ್ರು ಆಕೆಯನ್ನ ಬಚಾವ್ ಮಾಡಿದ್ರು. ನಂತರ ವಿಚಾರಣೆ ಕೈಗೊಂಡಾಗ ಇದೇ ರಾಘವೇಂದ್ರ ಮೋಜು ಮಸ್ತಿ ಮಾಡೋಣ ಅಂತ ಲಾಡ್ಜಿಗೆ ಕರೆದೊಯ್ದಿದ್ದ. ನಂತರ ಆತನ ಸ್ನೇಹಿತ ರಾದ ಸಾಗರ್, ಮಂಜುರಾಜ್ ಹಾಗೆಯೇ ಲಾಡ್ಜ್ ನ ಮಾಲೀಕ ಮನೋರಂಜನ್ ದಾಸ್ ನ ಜೊತೆ ಮಲಗುವಂತೆ ಒತ್ತಾಯಿಸಿದ್ದನಂತೆ. ಇದಕ್ಕೆ ಒಲ್ಲೆ ಎಂದಿದ್ದಕ್ಕೆ ತನ್ನನ್ನ ಕೂಡಿಹಾಕಿ ಸತತ ಏಳು ದಿನ ಅತ್ಯಾಚಾರ ಮಾಡಿದ್ರು ಅಂತ ಎಳೆಎಳೆಯಾಗಿ ಪೊಲೀಸ್ರೆದ್ರು ಘಟನೆಯ ಬಗ್ಗೆ ಬಿಚ್ಚಿಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಟ್ಟಾರೆ ಇಷ್ಟು ಸಂಸ್ರಸ್ತೆ ಹೇಳ್ತಿದ್ದಂತೆ ಕೇಳಿದ ಕೆ.ಆರ್ ಪುರಂ ಪೊಲೀಸ್ರು ಆರೋಪಿಗಳನ್ನ ಒಬ್ಬೊಬ್ಬರನ್ನಾಗಿ ಖೆಡ್ಡಾಕ್ಕೆ ಕೆಡವಿ ಜೈಲಿಗಟ್ಟಿ ದ್ದಾರೆ. ಈ ಕಥೆಯ ನೀತಿ ಪಾಠ ಪ್ರೀತಿಯ ನೋಟ ನಾಟಕವಾದರೆ ಭವಿಷ್ಯವೇ ನರಕ ವಾದೀತು ಜೋಕೆ.

LEAVE A REPLY

Please enter your comment!
Please enter your name here