ಹುಡುಕಿದೆಂತೆಲ್ಲಾ… ವಿಶೇಷಗಳೇ!

0
394

ಬಳ್ಳಾರಿ /ಹೊಸಪೇಟೆ :ವಿಶ್ವ ಪಾರಂಪರಿಕ ತಾಣ ಹಂಪಿಯ ಸುತ್ತ ಮುತ್ತ ಹುಡುಕಿದೆಂತೆಲ್ಲಾ ಒಂದಲ್ಲ ಒಂದು ವಿಶೇಷ ಸ್ಥಳಗಳು ದೊರೆಯುತ್ತವೆ ಎನ್ನುವುದಕ್ಕೆ ತಾಲೂಕಿನ ಬುಕ್ಕಸಾಗರ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿನ ಮೂರು ಐತಿಹಾಸಿಕ ಜಲಧಾರೆಗಳೆ ಸಾಕ್ಷಿ .
ಹೌದು ಐತಿಹಾಸಿಕ ಹಂಪಿಯನ್ನು ಪ್ರವಾಸಿ ತಾಣಗಳ ತವರೂರು ಎಂದರು ತಪ್ಪಿಲ್ಲ. ಮಳೆಗಾಲದಲ್ಲಿ ಕಲ್ಲು ಬೆಟ್ಟದಿಂದ ದುಮ್ಮುಕ್ಕುವ ಐತಿಹಾಸಿಕ ನೆಲೆಯುಳ್ಳ ಅಕ್ಕ-ಬುಕ್ಕ, ಕುಮಾರ ರಾಮ, ಹಾಗೂ ವಿದ್ಯಾರಣ್ಯ ಜಲಧಾರೆಗಳ ಮೂಲಗಳನ್ನು ಕಾಣಬಹುದು. ಅಚ್ಚ ಹಸಿರು ಸೀರೆ ತೊಟ್ಟ ಬುಕ್ಕಸಾಗರ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ರಮಣಿಯಂತೆ ಹರಿದು ದುಮ್ಮುಕ್ಕುವ ಈ ಮೂರು ಜಲಪಾತಗಳನ್ನು ನೋಡುವುದೇ ಆನಂದ. ಈ ಜಲಧಾರೆಗಳಿಗೆ ತಲುಪಲು ಕಂಪ್ಲಿ ಮಾರ್ಗದ ರಾಜ್ಯ ಮುಖ್ಯ ರಸ್ತೆಯಿಂದ ಒಂದುವರೆ ಕಿ.ಮಿ ದೂರ ಕ್ರಮಿಸಿದರೆ ಸಾಕು. ನೂರಾರು ಬೆಡ್ಡ ಗುಡ್ಡಗಳ ತಪ್ಪಲಲ್ಲಿರುವ ಈ ಜಲಾಧಾರೆಗಳಿಗೆ ಐತಿಹಾಸಿಕ ಸ್ಪರ್ಶ ಇರುವುದು ಅಚ್ಚರಿಗೆ ಕಾರಣವಾಗಿದೆ. ಸುಮಾರು ನಾಲ್ಕು ಶತಮಾನಗಳ ಹಿಂದೆ ಸಂಡೂರು ದೊರೆ ಕಪಿಲ ರಾಯನು ಪ್ರವಾಸಕ್ಕೆಂದು ಬಂದಾಗ ದಟ್ಟ ಅರಣ್ಯದ ನಡುವೆ ದುಮ್ಮುಕ್ಕಿ ಹರಿಯುವ ನೀರಿನ ಶಬ್ದ ಆಲಿಸಿ, ವಿಶ್ರಾಂತಿಗಾಗಿ ಅಲ್ಲಿಗೆ ತೆರಳಿ ಈಗೀರುವ ಅಕ್ಕ-ಬುಕ್ಕ ಜಲಧಾರೆ ಅಲ್ಲೆ ವಾಸ್ಥವ್ಯ ಹೂಡಿ ಇರುವ ಮೂರು ಸುಂದರ ಜಲಪಾತಗಳಿಗೆ ಕುಮಾರ ರಾಮ, ಅಕ್ಕ-ಬುಕ್ಕ ಹಾಗೂ ವಿದ್ಯಾರಣ್ಯ ಎಂದು ಹೆಸರಿಟ್ಟಿದ್ದಾನೆ. ಈ ಪ್ರದೇಶದಲ್ಲಿ ಮಳೆ ಕೊರತೆಯಿಂದ ಮೂರು ಜಲಧಾರೆಗಳು ಸುಮಾರು ನಾಲ್ಕು ವರ್ಷಗಳಿಂದ ನೀರಿಲ್ಲದೆ ಇದ್ದಿದ್ದು, ವನ್ಯ ಜೀವಿಗಳು ತುಂಗಭದ್ರಾ ನದಿಗೆ ನೀರರಸಿ ಬರುತ್ತಿದ್ದಾವೆಂದು ಸ್ಥಳಿಯರು ಹೇಳಿದರು.

LEAVE A REPLY

Please enter your comment!
Please enter your name here