ಹುಡುಗಿಯನ್ನು ಚುಡಾಯಿಸಿದ ಕಾಮಣ್ಣರ ಕೈಗೆ ಕೋಳ

0
148

ಬೆಂಗಳೂರು:ಮಾರತ್ ಹಳ್ಳಿ: ರಸ್ತೆಯಲ್ಲಿ ಹುಡುಗಿಯನ್ನು ಚುಡಾಯಿಸಿದ ಬೀದಿ ಕಾಮಣ್ಣರನ್ನು 24 ಗಂಟೆಗಳ ಅವಧಿ ಯಲ್ಲಿ ಬಂದಿಸುವಲ್ಲಿ ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ಭಾನುವಾರ ರಾತ್ರಿ ಯುವತಿಯೊಬ್ಬಳು ಮಾರತ್ತಹಳ್ಳಿ ಸಮೀಪದ ಪಣತ್ತೂರು ಬಲಿ ಸ್ನೇಹಿತನ ಜೊತೆ ಹೋಗುತ್ತಿರಬೇಕಾದರೆ ಇಬ್ಬರು ಯುವಕರು ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ್ದರು. ಈ ಸಂಬಂದ ನೊಂದ ಯುವತಿ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಾದ 24 ಗಂಟೆಗಳ ಕಾಲಾವದಿಯಲ್ಲಿ ಮಾರತ್ತಹಳ್ಳಿ ಇನ್ಸ್ಪೆಕ್ಟರ್ ಪ್ರಶಾಂತ್ ಬಾಬು ನೇತೃತ್ವದಲ್ಲಿ ಇಬ್ಬರು ಸಿಬ್ಬಂದಿಗಳು ಕಾಮುಖರನ್ನು ಬಂದಿಸಿ ಕೃಷ್ಣಜನ್ಮಸ್ಧಳಕ್ಕೆ  ಕಳುಹಿಸಿಕೊಟ್ಟಿದ್ದಾರೆ. ಈ ಸಿಬ್ಬಂದಿಗಳ ಕಾರ್ಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.

LEAVE A REPLY

Please enter your comment!
Please enter your name here