ಹೂಳಿನ ಕುರಿತು ಅಧಿವೇಶನದಲ್ಲಿ ಚರ್ಚೆ !

0
237

ಬಳ್ಳಾರಿ/ಹೊಸಪೇಟೆ:ತುಂಗಭದ್ರಾ ಜಲಾಶಯದ ಹೂಳಿನ ಕುರಿತು ಅಧಿವೇಶನದಲ್ಲಿ ಚರ್ಚೆ : ಬಳ್ಳಾರಿಗ್ರಾಮೀಣ ಶಾಸಕ ಎನ್.ವೈ.ಗೋಪಾಲಕೃಷ್ಣ.
ತುಂಗಭದ್ರಾ ಜಲಾಶಯದ ಹೂಳಿನ ಕುರಿತು ಜೂನ್ 5ರಿಂದ ಆರಂಭಗೊಳ್ಳುವ ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದು ಬಳ್ಳಾರಿ ಗ್ರಾಮೀಣ ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.

ತುಂಗಭದ್ರಾ ಜಲಾಶಯದ ಹೂಳಿನ ಜಾತ್ರೆಯ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ವಿಧಾನ ಮಂಡಲ ಅಧಿವೇಶನ ಜೂನ್ 5ರಿಂದ ಪ್ರಾರಂಭಗೊಳ್ಳಲಿದೆ. ಅಧಿವೇಶನದಲ್ಲಿ ಜಲಾಶಯದ ಹೂಳಿನ ಕುರಿತು ಪ್ರಸ್ಥಾಪಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರ ಜೊತೆ ಚರ್ಚಿಸಿ ಮುಂದಿನ ರೂಪು ರೇಷಗಳ ಕುರಿತು ತೀರ್ಮಾನಿಸಲಾಗುವುದು ಎನ್ನುವ ಭರವಸೆ ನೀಡಿದರು.

ರೈತರು ಸೇರಿ ಹೂಳೆತ್ತುವ ಕಾರ್ಯಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆ. ಎಲ್ಲರೂ ಪಕ್ಷಾತೀತವಾಗಿ ರೈತರ ಹೂಳೆತ್ತುವ ಕಾರ್ಯವನ್ನು ಶ್ಲಾಘಿಸಬೇಕು. ಹೂಳು ತೆಗೆಯುವುದರಿಂದ ಅಂತರ್ಜಲ ಹೆಚ್ಚುತ್ತದೆ. ಇದರಿಂದ ಎಲ್ಲದಕ್ಕೂ ಅನುಕೂಲವಾಗುತ್ತದೆ ಎಂದರು.

ದೇಣಿಗೆ : ಇದೇ ಸಂಧರ್ಭದಲ್ಲಿ ಶಾಸಕ ಎನ್.ವೈ.ಗೋಪಾಲಕೃಷ್ಣ 25 ಸಾವಿರ, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ 50 ಸಾವಿರ ದೇಣಿಗೆಯನ್ನು ರೈತ ಸಂಘದ ಜಿಲ್ಲಾಧ್ಯಕ್ಷ ದರೂರು ಪುರುಷೋತ್ತಮಗೌಡರವರಿಗೆ ಹಸ್ತಾಂತರಿಸಿದರು.

ಸಿಂಧನೂರಿನ ರವಡಗುಂದ ಮಠದ ಶ್ರೀ ಮರಿಸಿದ್ದ ಶಿವಾಚಾರ್ಯ ಸ್ವಾಮೀಜಿಯವರು ತಾವು ಸಂಗ್ರಹಿಸಿದ 5ಲಕ್ಷ ದೇಣಿಗೆಯಲ್ಲಿ ದಿನಾಲು 2 ಹಿಟಾಚಿ ಮಷೀನ್‌ಗಳನ್ನು ಹೂಳು ತೆಗೆಯಲಿಕ್ಕೆ ನೀಡಲಾಗುವುದು ಎಂದು ಘೋಷಿಸಿದರು

LEAVE A REPLY

Please enter your comment!
Please enter your name here