ಹೂಳಿನ ಜಾತ್ರೆಗೆ ಒಂದು ಲಕ್ಷ ರೂಪಾಯಿ ಹಾಗು 2000 ಲೀಟರ್ ಡಿಜೇಲ್ ದೇಣಿಗೆ

0
145

ಬಳ್ಳಾರಿ / ಹೊಸಪೇಟೆ: ಕಳೆದ ಮೇ 18ರಿಂದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಮ್ಮಿಕೊಂಡಿದ್ದ ತುಂಗಭದ್ರಾ ಜಲಾಶಯದ ಹೂಳೆತ್ತುವ ಜಾತ್ರೆಗೆ ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಹಾಗೂ ಸಂಸದರಾದ ಬಿ.ಶ್ರೀರಾಮುಲು ಅವರು ಒಂದು ಲಕ್ಷ ರೂಪಾಯಿ ನೆರವು ಹಾಗೂ ರೈತರ ಟ್ರ್ಯಾಕ್ಟರ್‌ಗಳಿಗಾಗಿ 2 ಸಾವಿರ ಲೀಟರ್ ಡೀಸೆಲ್ ನೀಡುವ ಮೂಲಕ ಅನ್ನದಾತನಿಗೆ ನೆರವು ನೀಡಿದ್ದಾರೆ.

ಇಂದು ವ್ಯಾಸನಕೇರಿ, ಡಣಾಯಕನಕೆರೆ ಲೋಕಪ್ಪನ ಹೊಲ, ಮರಿಯಮ್ಮನಹಳ್ಳಿ ಬಳಿ ರೈತರು ಜಲಾಶಯದಲ್ಲಿ ಹುದುಗಿದ್ದ ಹೂಳೆತ್ತುವ ಕಾರ್ಯವನ್ನು ಖುದ್ದಾಗಿ ವೀಕ್ಷಿಸಿದರಲ್ಲದೆ, ಸರ್ಕಾರಗಳು ಮಾಡದ ಕೆಲಸಕ್ಕೆ ಕೈ ಹಾಕಿರವ ಅನ್ನದಾತನ ಧೈರ್ಯ ಮತ್ತು ಸಾಹಸವನ್ನು ಶ್ಲಾಘಿಸಿದರು. ರೈತ ಸಂಘದ ಕಾರ್ಯಾಧ್ಯಕ್ಷ ಡಿಜಿ ಪುರುಷೋತ್ತಮಗೌಡ ಅವರೊಂದಿಗೆ ಹೂಳಿನ ಜಾತ್ರೆಯ ಕುರಿತು ಮಾಹಿತಿ ಪಡೆದ ಜಿ.ಸೋಮಶೇಖರ್ ರೆಡ್ಡಿ ಅವರು ರೈತರಲ್ಲಿ ಇನ್ನಷ್ಟು ಜಾಗೃತಿ ಮೂಡಿಸಲು ಅಕ್ಟೋಬರ್‌ನಲ್ಲಿ ಬೃಹತ್ ರೈತರ ಸಭೆ ನಡೆಸಬೇಕು. ಮುಂದಿನ ಜನೆವರಿಯಿಂದ ಒಂದು ಲಕ್ಷ ಟ್ರ್ಯಾಕ್ಟರ್ ಮೂಲಕ ಜಲಾಶಯದ ಹೂಳು ತೆಗೆಸುವ ಕಾರ್ಯವಾಗಬೇಕು. ಆ ದಿಸೆಯಲ್ಲಿ ರೈತರಿಗೆ ಸಂಸದರಾ ಬಿ.ಶ್ರೀರಾಮಲು ಮತ್ತು ತಾವು ಎಲ್ಲ ರೀತಿಯ ನೆರವು ನೀಡುವುದಾಗಿ ತಿಳಿಸಿದರು. ಅಲ್ಲದೇ, ರೈತರ ಈ ಬೃಹತ್ ಹಾಗೂ ಪವಿತ್ರವಾದ ಕೆಲಸಕ್ಕೆ ಪಕ್ಷ ಭೇದ ಮರೆತು ಎಲ್ಲರೂ ಬೆಂಬಲಿಸಬೇಕು. ರಾಜ್ಯ ಸರ್ಕಾರವೂ ಕೂಡ ಅನ್ನದಾತನ ಬವಣೆ ತಪ್ಪಿಸಲು ಕೈ ಜೋಡಿಸಬೇಕೆಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮೃತ್ಯುಂಜಯ ಜಿನಗಾ, ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಗುರುಲಿಂಗನಗೌಡ, ಬಿಜೆಪಿ ಮುಖಂಡರಾದ ಗುತ್ತಿಗನೂರು ವಿರೂಪಾಕ್ಷಗೌಡ, ವೀರಶೇಖರರೆಡ್ಡಿ ಹಾಗೂ ಕೆಎ ರಾಮಲಿಂಗಪ್ಪ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ ರೈತ ಮುಖಂಡರು ಇದ್ದರು.

————

LEAVE A REPLY

Please enter your comment!
Please enter your name here