ಹೂಳೆತ್ತುವ ಜಾತ್ರೆಯಲ್ಲಿ ಹಲವು ಬಿಜೆಪಿ ಗಣ್ಯರು ಭಾಗಿ

0
331

ಬಳ್ಳಾರಿ /ಹೊಸಪೇಟೆ : ತಾಲೂಕಿನ ತುಂಗಭದ್ರಾ ಜಲಾಶಯಕ್ಕೆ ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ ಭೇಟಿ, ಹೂಳೆತ್ತಲಾಗುತ್ತಿರುವ ಪ್ರದೇಶಕ್ಕೆ ಭೇಟಿ, ಹೂಳೆತ್ತರುವ ಪ್ರದೇಶವನ್ನು ವೀಕ್ಷಿಸಿದ ಬಿಎಸ್ ವೈ, ಕಳೆದ ಹತ್ತು ದಿನಗಳಿಂದ ಹೂಳು ತೆಗೆಯುತ್ತಿರುವ ರೈತಪರ ಸಂಘಟನೆಗಳು, ಶೋಭಾ ಕರಂದ್ಲಾಜೆ, ಬಿ ಶ್ರೀರಾಮುಲು, ಗೋವಿಂದ ಕಾರಜೋಳ, ಸಿ ಟಿ ರವಿ ಹಲವು ನಾಯಕರು ಭಾಗಿ
ಹೂಳೆತ್ತುವ ಜಾತ್ರೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ :
ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಪಾದ ಯಾತ್ರೆ ಮಾಡಿದ್ದರು ಸಿದ್ದರಾಮಯ್ಯ, ಅವರು ಸಿಎಂ ಆದಾಗ ಕೊಟ್ಟ ಭರವಸೆ ಈಡೇರಿಸುತ್ತಾರೆಂದು ನಾವು ನಂಬಿದ್ದೆವು, ಆದರೆ ನಮಗೆ ನಿರಾಶೆಯಾಗಿದೆ, ಬಿಎಸ್ ವೈ ಸಿಎಂ ಆಗಿದ್ದಾಗ ಕೃಷ್ಣಾ ಬೇಸಿನ್ ನ ನೀರಾವರಿಗಾಗಿ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡಿದ್ದರು, ಆದರೆ ಕಾಂಗ್ರೆಸ್ ಸರ್ಕಾರ ಏನೂ ಮಾಡಲಿಲ್ಲ, ಕಾಂಗ್ರೆಸ್ ಗೆ ಜನ ಅವಕಾಶ ನೀಡಿದ್ದರು, ಜನರ ಸಮಸ್ಯೆ ಬಗೆಹರಿಸಬೇಕಿತ್ತು, ಆದರೆ ಕಾಂಗ್ರೆಸ್ ತನಗೆ ಸಿಕ್ಕ ಅವಕಾಶವನ್ನು ಕಳೆದುಕೊಂಡಿದೆ, ತುಂಗಭದ್ರಾ ಜಲಾಶಯದ ಹೂಳೆತ್ತುವ ರೈತರ ಕೆಲಸಕ್ಕೆ ಸರ್ಕಾರ ಸಹಕಾರ ಕೊಡಬೇಕು, ಸರ್ಕಾರ ಬದುಕಿದ್ದರೆ ರೈತರ ಹೂಳಿನ ಸಮಸ್ಯೆ ಬಗೆಹರಿಸಲಿ ಎಂದರು.

ಬಿಎಸ್.ಯಡ್ಯೂರಪ್ಪ ಮಾತನಾಡುತ್ತಾ ನೀರಾವರಿ ಸಚಿವನಿಗೆ , ಸರ್ಕಾರಕ್ಕೆ ಕಿಂಚಿತ್ತು ಕಾಳಜಿ ಇದ್ದಿದ್ದರೆ ರೈತರ ಈ ಕೆಲಸವನ್ನು ಬಂದು ನೋಡಿ ಸಲಹೆ ಸಹಕಾರ ನೀಡಬೇಕಿತ್ತು, ಆದರೆ ಅವರಿಗೆ ಪುರಸೊತ್ತಿಲ್ಲ, ಅವರು ಮಾಡುವ ಕೆಲಸಗಳೇ ಬೇರೆ, ನಾನು ಬರಗಾಲ ವೀಕ್ಷಣೆಗೆ ಹೊರಟಾಗ ನನ್ನ ಸ್ಥಳೀಯ ಮುಖಂಡರು ರೈತರ ಹೂಳೆತ್ತುವ ಜಾಗಕ್ಕೆ ಭೇಟಿ ನೀಡುವಂತೆ ತಿಳಿಸಿದರು, ನಾವು ಸರ್ಕಾರದಲ್ಲಿದ್ದಾಗ ಹೂಳು ತೆಗೆಯುವ ನಿಟ್ಟಿನಲ್ಲಿ ಪ್ರಾಥಮಿಕ ಕೆಲಸ ಮಾಡಿದ್ದೇವೆ, ಹೂಳು ತೆಗೆಯಲು ಅಂದಾಜು ಹತ್ತು ಸಾವಿರ ಕೋಟಿ ರೂಪಾಯಿಗಳು ಖರ್ಚಾಗುತ್ತವೆ ಎಂಬ ತಜ್ಞರ ಅಭಿಪ್ರಾಯ ಇದೆ, ಹೀಗಾಗಿ ಹೂಳು ತೆಗೆಯುವುದರ ಬದಲು ಇರುವ ಪರ್ಯಾಯ ಮಾರ್ಗಗಳ ಬಗ್ಗೆಯೂ ಚರ್ಚಿಸಬೇಕಿದೆ, ಇದೇ ವಿಚಾರಗಳ ಆಧಾರದಲ್ಲಿ ನಮ್ಮ ಸರ್ಕಾರದಲ್ಲಿ ಹೂಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಿದ್ದೆವು, ಭೀಕರ ಬರಗಾಲ ಎದುರಾಗಿದೆ, ಕೆರೆ ಕಟ್ಟೆಗಳು ಜಲಾಶಯಗಳು ಬತ್ತಿ ಹೋಗಿ ಜನ ಜಾನುವಾರುಗಳಿಗೆ ನೀರಿಲ್ಲದಂತಾಗಿದೆ, ಪುಣ್ಯಾತ್ಮ ಸಿದ್ದರಾಮಯ್ಯ ಕಾಲಿಟ್ಟಾಗಿನಿಂದ ಈ ದುಃಸ್ಥಿತಿ ಬಂದಿದೆ, ಆದರೆ ನಾವು ಕೇಂದ್ರ ಸರ್ಕಾರದ ನೆರವಿನೊಂದಿಗೆ ರೈತರ ಇಂತಹ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಮಾಡುತ್ತೇವೆ, ಭೀಕರ ಬರಗಾಲ ಬಂದಿರುವ ಈ ಸಂದರ್ಭದಲ್ಲಿ ಸರ್ಕಾರ ಇಂತಹ ಕೆಲಸಗಳಿಗೆ ಮುಂದಾಗಬೇಕಿತ್ತು, ಆದರೆ ಸರ್ಕಾರ ಸತ್ತಿದೆ
ನಾನು ಬರಗಾಲದ ವೀಕ್ಷಣೆಗೆ ಹೊರಟಾಗ ಯಡಿಯೂರಪ್ಪ ಕೊಡೆ ಹಿಡಿದು ಹೋಗಬೇಕಾಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು, ಇಲ್ಲಿಯವರೆಗೆ ಏಳು ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ ಎಲ್ಲ ಕಡೆಯೂ ಭೀಕರ ಬರಗಾಲದ ದಾರುಣ ದೃಶ್ಯ ಕಂಡು ಕಣ್ಣೀರಾಗಿದ್ದೇನೆ, ಆದರೆ ಸಿಎಂ ಸಿದ್ದರಾಮಯ್ಯ ಸಿನೆಮಾ ನೋಡಿಕೊಂಡು ದೋಸೆ ತಿಂದುಕೊಂಡು ಮಜವಾಗಿದ್ದಾರೆ, ಅದೇ ದೊಡ್ಡ ಸುದ್ದಿಯಾಗುತ್ತದೆ, ಹಾಗೆ ಮಾಡುವ ಮೂಲಕ ನಮಗೆ ಅವಮಾನ ಮಾಡುತ್ತಿದ್ದಾರೆ ಎಂದರು.

LEAVE A REPLY

Please enter your comment!
Please enter your name here