ಹೂಳೆತ್ತುವ ವಿಚಾರಕ್ಕೆ ವಿರೋದ ವ್ಯಕ್ತ..

0
231

ಬಳ್ಳಾರಿ: ರೈತ ಮುಖಂಡ ದರೂರು ಪುರುಷೋತ್ತಮ ಗೌಡ ಹೇಳಿಕೆ, ತುಂಗಭದ್ರಾ ಜಲಾಶಯದ ಹೂಳೆತ್ತುವ ವಿಚಾರಕ್ಕೆ ಕರ್ನಾಟಕ ರಾಜ್ಯ ರೈತ ಸಂಘ – ಹಸಿರು ಸೇನೆಯ ರಾಜ್ಯ ಗೌರವಾಧ್ಯಕ್ಷ ವಿರೋಧ ವ್ಯಕ್ತಪಡಿಸಿದ್ದಾರೆ, ಜಲಾಶಯದ ವ್ಯಾಪ್ತಿಯ ಮೂರು ಜಿಲ್ಲೆಗಳ ಜನರನ್ನು ಸೇರಿಸಿಕೊಂಡು ಹೂಳೆತ್ತುವ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿ ಹೂಳೆತ್ತುವ ವಿಚಾರ ಕೈ ಬಿಡಬೇಕೆಂದು ಹೇಳಿದ್ದಾರೆ, ಹೂಳೆತ್ತುವ ಜಾತ್ರೆಗೆ ದೇಣಿಗೆ ನೀಡಬಾರದೆಂದು ರೈತರನ್ನು ತಪ್ಪು ದಾರಿಗೆಳೆದಿದ್ದಲ್ಲದೇ ಹೂಳೆತ್ತುವ ಜಾತ್ರೆಗೆ ಸಂಗ್ರಹಿಸಿದ ದೇಣಿಗೆಯ ಲೆಕ್ಕ ನೀಡುವಂತೆ ಚಾಮರಸ ಮಾಲಿಪಾಟೀಲ್ – ಪುಟ್ಟಣ್ಣಯ್ಯ ಕೇಳಿದರು, ಸಂಡೂರಿನ ರೈತ ಮುಖಂಡರಿಂದ ವಾಹನವನ್ನು ಕಪ್ಪದ ರೂಪದಲ್ಲಿ ಕೊಡುಗೆಯಾಗಿ ಪಡೆದ ಪುಟ್ಟಣ್ಣಯ್ಯ ಗೆ ನಮ್ಮ ಬಗ್ಗೆ ಮಾತಾಡುವ ನೈತಿಕತೆಯಿಲ್ಲ, ಪುಟ್ಟಣ್ಣಯ್ಯ ಮಾಲಿಪಾಟೀಲ್ ನಮ್ಮ ಭಾಗದ ರೈತರು ಮತ್ತು ಸಮಸ್ಯೆಗಳನ್ನು ನಿರ್ಲಕ್ಷಿಸಿದ್ದಾರೆ, ಹೀಗಾಗಿ ಕಳೆದ ತಿಂಗಳಿನಿಂದಲೇ ನಾವು ರಾಜ್ಯ ರೈತ ಸಂಘ – ಹಸಿರು ಸೇನೆಯಿಂದ ಹೊರ ಬಂದಿದ್ದೇವೆ, ಇನ್ನು ಮುಂದೆ ಕೊಪ್ಪಳ ಬಳ್ಳಾರಿ ರಾಯಚೂರು ಸೇರಿದಂತೆ ಮೂರು ಜಿಲ್ಲೆಗಳು ಸೇರಿದಂತೆ ನೂತನ ರೈತ ಸಂಘಟನೆ ಮಾಡಲಿದ್ದೇವೆ.

LEAVE A REPLY

Please enter your comment!
Please enter your name here