ಹೆಚ್ ಡಿ ಕೆ ಆಗಮನ ಹಿನ್ನೆಲೆ, ಸ್ಥಳ ಪರಿಶೀಲನೆ…

0
102

ಚಿಕ್ಕಬಳ್ಳಾಪುರ/ಚಿಂತಾಮಣಿ:ನಗರಕ್ಕೆ ಆಗಮಿಸುವ ಮಾಜಿ ಮುಖ್ಯ ಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಬರುವ ಹಿನ್ನೆಲೆಯಲ್ಲಿ ಶಾಸಕ ಜೆಕೆ ಕೃಷ್ಣಾ ರೆಡ್ಡಿ ಸ್ಥಳ ಪರಿಶೀಲನೆ ಮಾಡಿದರು.ಚಿಂತಾಮಣಿ ನಗರಕ್ಕೆ ಏಪ್ರಿಲ್ 28ರಂದು ಶನಿವಾರ ಸಂಜೆ ಐದು ಗಂಟೆ ಆಗಮಿಸಿ ಬಾಗೇಪಲ್ಲಿ ರಸ್ತೆಯಲ್ಲಿರುವ ವಾಲ್ಮೀಕಿ ವೃತ್ತದಿಂದ ರೋಡ್ ಶೊ ಮುಖಾಂತರ ಆಯೋಜಿಸಿರುವ ಜೆಡಿಎಸ್ ಬೃಹತ್ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆಗಮಿಸುತ್ತಿದ್ದು ಸಮಾರಂಭಕ್ಕೆ ಸುಮಾರು 40 ರಿಂದ 50 ಸಾವಿರ ಕಾರ್ಯಕರ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ಜೆಡಿಎಸ್ ಅಭ್ಯರ್ಥಿ ಶಾಸಕ ಜೆಕೆ ಕೃಷ್ಣಾರೆಡ್ಡಿ ತಿಳಿಸಿದರು.ಈ ವೇಳೆ ಮೊಹಮ್ಮದ್ ಶಫೀಕ್, ಮಂಜುನಾಥ್, ಸಾದಿಕ್, ವೆಂಕಟರವಣಪ್ಪ, ಜೆಡಿಎಸ್ ಮುಖಂಡರು ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here