ಹೆಣ್ಣು ಮಕ್ಕಳ ಅತ್ಯಾಚಾರ ವಿರೋಧಿ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ..

0
114

ಚಿಕ್ಕಬಳ್ಳಾಪುರ/ಚಿಂತಾಮಣಿ:ದಲಿತ ಮತ್ತು ಮುಸ್ಲಿಂ ಹಿಂದುಳಿದ ಜಾತಿಗಳ ಹೆಣ್ಣು ಮಕ್ಕಳ ಅತ್ಯಾಚಾರ ಮತ್ತು ಕೊಲೆ ವಿರೋಧಿ ವೇದಿಕೆ ವತಿಯಿಂದ ನಗರದ ಪ್ರವಾಸಿ ಮಂದಿರದಿಂದ ಹೊರಟು ಪ್ರಮುಖ ಬೀದಿಗಳಲ್ಲಿ ಬೃಹತ್ ಪ್ರತಿಭಟನೆ ಮಾಡಿ ಚಿಂತಾಮಣಿ ತಾಲೂಕಿನ ದಂಡಾಧಿಕಾರಿಗಳಿಗೆ ಮುಸ್ಲಿಂ ಸಮುದಾಯದ ಮುಖಂಡರು ಮತ್ತು ದಲಿತ ಮುಖಂಡರು ತಾಲ್ಲೂಕಿನ ದಂಡಾಧಿಕಾರಿಯ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿದರು.ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ಎಲ್ಲಿ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿನಿ

ನವೋದಯ ಅಲ್ಪಸಂಖ್ಯಾತರ ವಸತಿ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದ ಝೈಬುನ್ನಿಸಾ ರವರು ಆತ್ಮಹತ್ಯೆಗೆ ಕಾರಣ ಆಂಗ್ಲ ಶಿಕ್ಷಕ ರವಿ ಎನ್ ಎಸ್ ಕಾರಣ ಕರ್ತರಾಗಿದ್ದಾನೆ . ಹೀಗಾಗಿಯೇ ನ್ಯಾಯಸಮ್ಮತ ತನಿಖೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಿದರು.
ದಿನೇದಿನೇ ಹೆಚ್ಚಾಗಿ ನಡೆಯುತ್ತಿರುವ ದಲಿತ ಮುಸ್ಲಿಂ ಹಿಂದುಳಿದ ಜಾತಿಗಳ ಹೆಣ್ಣು ಮಕ್ಕಳ ಅತ್ಯಾಚಾರ ಮತ್ತು ಕೊಲೆ ಮಾಡುತ್ತಿದ್ದಾರೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವು ಆರೋಪಿಗಳನ್ನು ಬಂಧಿಸಲು ಮತ್ತು ಶಿಕ್ಷಿಸಲು ವಿಫಲರಾಗಿದ್ದಾರೆ. ಎಂದು ನಗರದಲ್ಲಿ ಬೃಹತ್ ಪ್ರತಿಭಟನೆ ಮೆರವಣಿಗೆ ಮಾಡಿದರು .

LEAVE A REPLY

Please enter your comment!
Please enter your name here