ಹೆದ್ದಾರಿ ದರೋಡೆಕೋರರ ಬಂಧನ…

0
142

ಬೆಂಗಳೂರು ಗ್ರಾಮಾಂತರ/ಹೊಸಕೋಟೆ:- ಹೆದ್ದಾರಿ ಹಾಗೂ ಟೋಲ್ ಗಳ ಬಳಿ ಮಾರಕಾಸ್ತ್ರಗಳನ್ನು ತೋರಿಸಿ ಹಣ, ಒಡವೆಗಳನ್ನು ದೋಚುತ್ತಿದ್ದ ಹೆದ್ದಾರಿ ದರೋಡೆಕೋರರನ್ನು ಬಂದಿಸುವಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಪೊಲೀಸ್ರು ಯಶಸ್ವಿಯಾಗಿದ್ದಾರೆ.

 

ಕಾರ್ಯಾಚರಣೆ ವೇಳೆ 9 ದರೋಡೆಕೋರರನ್ನು ಬಂಡಿಸಿದ್ದಾರೆ.

ಬೆಂಗಳೂರಿನ ವಿವೇಕನಗರದ ವಿನೋದ್ ಕುಮಾರ್ (34), ರಾಜಶೇಖರ(28), ಜಾನ್ ಪಾಲ್(29)
ಕೋರಮಂಗಲದ ಶಶಿಕುಮಾರ್(34), ಉದಯ್ ಕುಮಾರ್(23) ಸುಧಾಕರ್(23)
ದೇವರ ಚಿಕ್ಕನಹಳ್ಳಿಯ ಮಂಜುನಾಥ್(26)
ಸಿವಿ ರಾಮನ್ ನಗರದ ಮಣಿಕಂಠ (30)
ಹೊಸಕೋಟೆ ತಾಲೂಕು ಚೊಕ್ಕಹಳ್ಳಿಯ ಪ್ರಮೋದ್(30), ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳಿಂದ 1 ಏರ್ ಪಿಸ್ತೂಲ್, ಒಂದು ಬೈಕ್, 3 ಕಬ್ಬಿಣದ ಲಾಂಗ್, 2 ಮಚ್ಚು, 1 ಬಟನ್ ಚಾಕು, 1 ದೊಣ್ಣೆ, 2 ಕಾರದ ಪುಡಿ ಪಾಕೆಟ್ ಸೇರಿದಂತೆ ವಿವಿಧ ರೀತಿಯ 5 ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸದರಿ ಆರೋಪಿಗಳು ಹೊಸಕೋಟೆ ಪೊಲೀಸ್ ಠಾಣೆಯ 3 ಪ್ರಕರಣಗಳಲ್ಲಿ ಬಾಗಿಯಾಗಿದ್ದರು ಎನ್ನಲಾಗಿದೆ.

ಹೊಸಕೋಟೆ ವೃತ್ತ ನಿರೀಕ್ಷಕ ಅಶ್ವಥ್ ನಾರಾಯಣ್, ಪಿಎಸ್ಸೈಗಳಾದ ರಂಗಸ್ವಾಮಿ, ಶಿವಪ್ರಕಾಶ್ ಸೇರಿದಂತೆ 10 ಪೊಲೀಸ್ ಪೇದೆಗಳ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here