ಹೆಬ್ಬಾವು ಪ್ರತ್ಯಕ್ಷ-ಕಾಡಿಗೆ ಬಿಟ್ಟ ಉರಗಪ್ರೇಮಿಗಳು.

0
226

ಬಳ್ಳಾರಿ/ಹೊಸಪೇಟೆ; ತಾಲ್ಲೂಕಿನ ಕಮಲಾಪುರದಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ನೌಕರರ ವಸತಿ ಗೃಹದ ಆವರಣದಲ್ಲಿ ಪ್ರತ್ಯಕ್ಷವಾಗಿದ್ದ ಬಾರಿ ಗಾತ್ರದ ಹೆಬ್ಬಾವನ್ನು ಉರಗಪ್ರೇಮಿ ಪಂಪಯ್ಯ ಸ್ವಾಮಿ ಹಾಗೂ ಸ್ನೇಕ್ ಅಸ್ಲಾಮ್ ಶುಕ್ರವಾರ ಸೆರೆ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಕಮಲಾಪುರದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್ ಬಳಿ ಇರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ನೌಕರರ ವಸತಿ ಗೃಹದ ಆವರಣದಲ್ಲಿ ಕಾಣಿಸಿಕೊಂಡ ಸುಮಾರು ಐದಾರು ಅಡಿ ಉದ್ದದ ಬಾರಿ ಗಾತ್ರದ ಹಾವು ವಸತಿಗೃಹದ ವಾಸಿಗಳಲ್ಲಿ ಆತಂಕ ಸೃಷ್ಠಿ ಮಾಡಿತ್ತು.

ಸುಮಾರು ಹೊತ್ತು ಕಾಲ ಕಲ್ಲಿನ ಪೊಟರೆಯೊಳಗೆ ಅಡಗಿ ಕುಳಿತ್ತಿದ್ದ ಹಾವನ್ನು ಸೆರೆ ಹಿಡಿಯಲು ಉರಗಪ್ರೇಮಿ ಪಂಪಯ್ಯ ಸ್ವಾಮಿ ಹಾಗೂ ಸ್ನೇಕ್ ಅಸ್ಲಾಮ್ ಅವರನ್ನು ಕರೆ ಮಾಡಿದ್ದು, ಕೂಡಲೇ ಉರಗಪ್ರೇಮಿ ಇಬ್ಬರು ಹಾವನ್ನು ಸೆರೆ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

LEAVE A REPLY

Please enter your comment!
Please enter your name here