ಹೆರಿಗೆ ಆಸ್ಪತ್ರೆಯಲ್ಲಿ ಮಹಿಳೆ‌ ಸಾವು…

0
178

ಬಳ್ಳಾರಿ :ವಿಮ್ಸ್‌ನ‌ ಹೆರಿಗೆ ಆಸ್ಪತ್ರೆಯಲ್ಲಿ ಮಹಿಳೆ‌ ಸಾವು-ಅನುರಾಧಾ(ಪಾರ್ವತಿ) ಮೃತ‌ ಮಹಿಳೆ-ಕಂಪ್ಲಿಯ ಶರಣಪ್ಪ ಅವರ ಪತ್ನಿ ಪಾರ್ವತಿ-ಎರಡನೇ ಹೆರಿಗೆಗಾಗಿ ವಿಮ್ಸ್ ಆಸ್ಪತ್ರೆಗೆ ಬೆಳಿಗ್ಗೆ 6 ಗಂಟೆಗೆ ದಾಖಲಿಸಿದ್ದರು-ಶಸ್ತ್ರಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟ ಬಾಣಂತಿ ಸಾವು

ಅಪಾರ ಪ್ರಮಾಣದ ರಕ್ತಸ್ರಾವ ಆಗಿ ಸಾವು-ಪೋಷಕರ ಆರೋಪ-ದುಃಖದ ಮಡುವಿನಲ್ಲಿ ಕುಟುಂಬ ವರ್ಗ-ಕೆಲಹೊತ್ತು ಆಸ್ಪತ್ರೆಯಲ್ಲಿ ಸೂಕ್ಷ್ಮ ವಾತಾವರಣ ಕಂಡು ಬಂದಿತ್ತು

 

ಬಳ್ಳಾರಿಯ ಪ್ರತಿಷ್ಠಿತ ವಿಮ್ಸ್ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ಹೆರಿಗೆಗಾಗಿ ದಾಖಲಾಗಿದ್ದ ಮಹಿಳೆಯೋರ್ವರು ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ ಕೆಲವೇ ಗಂಟೆಗಳಲ್ಲಿ ಮೃತ ಪಟ್ಟ ಘಟನೆ ನಡೆದಿದೆ.
ಮೃತ ಬಾಣಂತಿ ಅನುರಾಧಾ ಆಲಿಯಾಸ್ ಪಾರ್ವತಿ(೩೦) ಎಂದು ಹೇಳಲಾಗಿದೆ. ಮೂಲತಃ ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮದ ಪಾರ್ವತಿ ಕಂಪ್ಲಿಯ ಜಿಂದಾಲ್ ಉದ್ಯೋಗಿ ಶರಣಪ್ಪ ಅವರೊಂದಿಗೆ ಮದುವೆಯಾಗಿ ಮೊದಲ ಹೆರಿಗೆ ಸುಸೂತ್ರವಾಗಿ ನಡೆದಿತ್ತು. ಎರಡನೇ ಹೆರಿಗೆಗೆಂದು ಇಂದು ಮುಂಜಾನೆ 6 ಗಂಟೆಗೆ ವಿಮ್ಸ್ ನ ಹೆರಿಗೆ ವಿಭಾಗದಲ್ಲಿ ದಾಖಲಿಸಲಾಗಿತ್ತು. ಬೆಳಿಗ್ಗೆ ೯-೩೦ ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಪಾರ್ವತಿ ಮಧ್ಯಾಹ್ನ ವಿಪರೀತ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ ಎಂದು ಮೃತಳ ಕುಟುಂಬದ ಸದಸ್ಯರು ಹೇಳಿದ್ದಾರೆ.
ವಿಮ್ಸ್ ವೈದ್ಯರು ಹೇಳೋ ಪ್ರಕಾರ ಡಿಸ್ಸೆಮಿನೇಟೆಡ್ ಇಂಟ್ರಾವ್ಯಾಸ್ಕುಲರ್ ಕಾಗ್ಯುಲೇಷನ್ ನಿಂದ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಮೃತಳ ಸಂಬಂಧಿಕರು ಹೇಳೋ ಪ್ರಕಾರ ಹೆರಿಗೆ ಆದ ಬಳಿಕ ಯಾವ ವೈದ್ಯರೂ ಇತ್ತ ಸುಳಿಯಲಿಲ್ಲ. ಶುಶ್ರೂಷಕರಿಗೆ ಹೇಳಿದರೂ ಚಿಕಿತ್ಸೆ ನೀಡಲಿಲ್ಲ. ಇದ್ರಿಂದಾಗಿ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ.
ಬಾಣಂತಿ ಮೃತಗೊಂಡ‌ ಹಿನ್ನೆಲೆಯಲ್ಲಿ ಹೆರಿಗೆ ಆಸ್ಪತ್ರೆ ಬಳಿ ಕೆಲಹೊತ್ತು ಪೋಷಕರು ವೈದ್ಯರ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಸೂಕ್ಷ್ಮ ವಾತಾವರಣ ಏರ್ಪಟ್ಟಿತ್ತು.
ಒಟ್ನಲ್ಲಿ, ವಿಮ್ಸ್ ಆಸ್ಪತ್ರೆ ದಿನೇ ದಿನೇ ಸಾರ್ವಜನಿಕರ ವಿಶ್ವಾಸ ಕಳೆದುಕೊಳ್ಳುತ್ತಿದೆ.

LEAVE A REPLY

Please enter your comment!
Please enter your name here