ಹೈಕೋರ್ಟ್ ಆದೇಶ ಪಾಲನೆ ಮಾಡುವಲ್ಲಿ ಎಡವಿದ ಪ್ರಾಧಿಕಾರದ ಅಧಿಕಾರಿಗಳು

0
316

ಬಳ್ಳಾರಿ /ಹೊಸಪೇಟೆ: ಹಂಪಿ ಪ್ರದೇಶದ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಬೆಂಗಳೂರಿನ ಹೈಕೋರ್ಟ್ ನೀಡಿದ ಆದೇಶವನ್ನು ಪಾಲನೆ ಮಾಡುವಲ್ಲಿ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಎಡವಿದ್ದಾರೆ.

ಶ್ರೀ ಕೊಟ್ಟೂರುಸ್ವಾಮಿ ಮಠ ಹಾಗೂ ಸಿಂಧನೂರಿನ ಒಳಬಳ್ಳಾರಿಯ ವಿರಕ್ತಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸೇರಿದಂತೆ ರಾಯಚೂರು ಜಿಲ್ಲೆಯ ಮಠಾಧೀಶರು ಹಂಪಿ ಪ್ರದೇಶದಲ್ಲಿನ ಅಕ್ರಮ ಕಟ್ಟಡ ತೆರವಿಗೆ  ನ್ಯಾಯಾಲಯದ ಮೊರೆ ಹೋಗಿದ್ದರು. 2016ರ ಜನವರಿಯಲ್ಲೆ ಬೆಂಗಳೂರಿನ ಹೈಕೋರ್ಟ್ ಅಕ್ರಮ ಕಟ್ಟಡ ತೆರವಿಗೆ ಆದೇಶಿಸಿದೆ. ಆದರೂ ಆದೇಶ ಪಾಲನೆ ಮಾಡಲಾಗಿಲ್ಲ.

ಜೂನ್ 29ರೊಳಗೆ ಹಂಪಿಯಲ್ಲಿ ಅಕ್ರಮ ಕಟ್ಟಡಗಳ ತೆರವಿಗೆ ಜೂ.14ರಂದು ನ್ಯಾಯಾಲಯ ಮತ್ತೊಮ್ಮೆ ನಿರ್ದೇಶ ನೀಡಿದೆ. ಈಗ ಅಧಿಕಾರಿಗಳು ತೆರವಿಗೆ ಕಸರತ್ತು ನಡೆಸಿದಲ್ಲದೇ, ಹೊಸದಾಗಿ ಅಫಿಡಾವಿಟ್ ಸಲ್ಲಿಸಲು ತಯಾರಿ ನಡೆಸಿದ್ದಾರೆ.

ಈಗಾಗಲೇ ಮಠಾಧೀಶರು ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದು, ಜೂನ್ 29ರೊಳಗೆ ಅಕ್ರಮ ಕಟ್ಟಡಗಳ ತೆರವುಗೊಳಿಸಲು ಜೂ.14ರಂದು ನ್ಯಾಯಾಲಯ ಮತ್ತೊಮ್ಮೆ ನಿರ್ದೇಶ ನೀಡಿದೆ.   ಜೂ.29ರೊಳಗೆ ನ್ಯಾಯಾಲಯಕ್ಕೆ ಹೊಸದಾಗಿ ಅಫಿಡಾವಿಟ್ ಸಲ್ಲಿಸಲು ತಯಾರಿ ನಡೆಸಿದ್ದಾರೆ.

ಕಳೆದ ವರ್ಷ ಕೊಪ್ಪಳ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಹಂಪಿಯ ವಿರೂಪುರಗಡ್ಡೆ ಪ್ರದೇಶದಲ್ಲಿ ತಲೆ ಎತ್ತಿದ್ದ ಅಕ್ರಮ ಕಟ್ಟಡ ತೆರಿವಿಗೆ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಕ್ರಮ ಕೈಗೊಂಡು, ಕೆಲವಾರು ಅಕ್ರಮ ಕಟ್ಟಡ ತೆರವುಗೊಳಿಸಿ, ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದರು. ಆದರೂ, ಈ ಭಾಗದಲ್ಲಿ ಹಲವಾರು ಅಕ್ರಮ ಕಟ್ಟಡಗಳಿದ್ದು, ಅವುಗಳನ್ನು ಉಳಿಸಿಕೊಳ್ಳಲು ಕೆಲವರು, ಸುಪ್ರಿಂಕೋರ್ಟು ಹಾಗೂ ಹೈಕೋರ್ಟುನಲ್ಲಿ ದಾವೆ ಹೂಡಿದ್ದು, ಈ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. ವಿಚಾರಣೆ ಪೂರ್ಣಗೊಂಡ ಬಳಿಕ ಮತ್ತೊಮ್ಮೆ ವಿರೂಪುರ ಗಡ್ಡೆ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಚರಣೆ ನಡೆಯಲಿದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀ ಕೊಟ್ಟೂರುಸ್ವಾಮಿ ಮಠ ಹಾಗೂ ಸಿಂಧನೂರಿನ ಒಳಬಳ್ಳಾರಿಯ ವಿರಕ್ತಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸೇರಿದಂತೆ ರಾಯಚೂರು ಜಿಲ್ಲೆಯ ಮಠಾಧೀಶರು ಹಂಪಿ ಪ್ರದೇಶದಲ್ಲಿನ ಅಕ್ರಮ ಕಟ್ಟಡ ತೆರವಿಗೆ ನ್ಯಾಯಾಲಯದ ಮೊರೆ ಹೋಗಿದ್ದರು. 2016ರ ಜನವರಿಯಲ್ಲೆ ಬೆಂಗಳೂರಿನ ಹೈಕೋರ್ಟ್ ಅಕ್ರಮ ಕಟ್ಟಡ ತೆರವಿಗೆ ಆದೇಶ ನೀಡಿತ್ತು. ತೆರುವು ಕಾರ್ಯ ವಿಳಂಬವಾದ ಕುರಿತು ಸಮಗ್ರವಾದ ವರದಿಯನ್ನು ಹೈಕೋರ್ಟುಗೆ ಸಲ್ಲಿಸಲಾಗುವುದು. ಪುನಃ ನ್ಯಾಯಾಲಯದ ಆದೇಶದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಎಂದು ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ  ಆಯುಕ್ತ ಪ್ರಶಾಂತ ಕುಮಾರ ಮಿಶ್ರಾ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here