ಹೊತ್ತಿ ಉರಿದ ಸರ್ಕಾರಿ ವಾಹನ…

0
89

ಬೆಂಗಳೂರು ಗ್ರಾಮಾಂತರ/ ದೊಡ್ಡಬಳ್ಳಾಪುರ: ಇಲ್ಲಿನ ತಾಲೂಕು ಕಚೇರಿ ಅವರಣದ ಪಾರ್ಕಿಂಗ್ ಸ್ಥಳದಲ್ಲಿ ಬೆಂಕಿ ಅನಾಹುತ ನಡೆದಿದೆ. ಬೆಂಕಿಯ ಅವಘಡ ದಿಂದ ಉಪವಿಭಾಗಾಧಿಕಾರಿ ಬಳಸುತ್ತಿದ್ದ ಟಾಟಾ ಸುಮೋ ಸುಟ್ಟು ಕರಕಲಾಗಿದೆ.

ಕಳೆದ ಒಂದು ವರ್ಷದಿಂದ ಟಾಟಾ ಸುಮೋ ವಾಹನ ಬಳಕೆಯಲ್ಲಿ ಇರಲಿಲ್ಲ.ಪಾರ್ಕಿಂಗ್ ಸ್ಥಳದಲ್ಲಿ ವಾಹನವನ್ನು ನಿಲ್ಲಿಸಲಾಗಿತ್ತು. ಇಂದು ಬೆಳಗ್ಗೆ 8ರ ಸಮಯದಲ್ಲಿ ಟಾಟಾ ಸುಮೋ ಹೊತ್ತಿ ಉರಿಯುತ್ತಿರುವುದು ಸ್ಥಳೀಯರ ಕಣ್ಣಿಗೆ ಬಿದ್ದಿದೆ. ತಕ್ಷಣವೇ ಬೆಂಕಿ ನಂದಿಸಲು ಮುಂದಾದ ಸ್ಥಳೀಯರು ಟ್ಯಾಂಕರ್ ನೀರಿನಿಂದ ಬೆಂಕಿ ನಂದಿಸವಲ್ಲಿ ಯಶಸ್ವಿ ಯಾಗಿದ್ದಾರೆ. ಅಲ್ಲದೆ ಟಾಟಾ ಸುಮೋ ಪಕ್ಕ ದಲ್ಲಿಯೇ ಇದ್ದು ಕಾರನ್ನು ಬೆಂಕಿಯ ಕೆನ್ನಾಲಿಗೆ ಯಿಂದ ರಕ್ಷಣೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸವಲ್ಲಿ ಯಶಸ್ವಿ ಯಾದರು.
ಅವಘಡಕ್ಕೆ ಕಾರಣವಾಯ್ತಾ ಚಿಂದಿ ಆಯುವ ಹುಡುಗರ ದುಶ್ಚಟ..?
ದೊಡಬಳ್ಳಾಪುರದಲ್ಲಿ ಸೆಲ್ಯೂಷನ್ ಹಾವಳಿ ಜೋರಾಗಿದೆ.ನಶೆಯ ದಾಸರಾಗಿರುವ ಹುಡುಗರು ಸುಲಭವಾಗಿ ಸಿಗುವ ಸೆಲ್ಯೂಷನ್ ಹೊಡೆದು ನಶೆಗೆ ಜಾರುತ್ತಾರೆ.ಸಾಮಾನ್ಯವಾಗಿ ನಿರ್ಜನ ಪ್ರದೇಶದಲ್ಲಿ ಸೆಲ್ಯೂಷನ್ ಹೊಡೆಯುವ ಹುಡುಗರು, ಇಂದು ಶಿವರಾತ್ರಿ ರಜೆ ಇದ್ದ ಕಾರಣದಿಂದ ತಾಲೂಕು ಕಛೇರಿ ಅವರಣದ ಪಾರ್ಕಿಂಗ್ ಸ್ಥಳದಲ್ಲಿ ಸೆಲ್ಯೂಷನ್ ಹೊಡೆಯುತ್ತಿದ್ದರು. ಈ ವೇಳೆ ಬೆಂಕಿ ಟಾಟಾ ಸುಮೋ ವಾಹನಕ್ಕೆ ತಗಲಿದೆ. ಸರ್ಕಾರಿ ವಾಹನ ಹೊತ್ತಿ ಉರಿಯಲು ಪ್ರಾರಂಭಿಸಿದ ತಕ್ಷಣವೇ ಹುಡುಗರು ಸ್ಥಳದಿಂದ ಕಾಲ್ಕಿತ್ತರೆಂದು ಸ್ಥಳೀಯರು ಹೇಳುತ್ತಾರೆ.
ಬೆಂಕಿಯ ಅವಘಡಕ್ಕೆ ಪಾರ್ಕಿಂಗ್ ಸ್ಥಳದಲ್ಲಿದ್ದ ಕಸದ ರಾಶಿಯೇ ಕಾರಣ ಎಂದು ಹೇಳಲಾಗುತ್ತಿದೆ. ಕಸಕ್ಕೆ ಬಿದ್ದ ಬೆಂಕಿಯಿಂದ ಸರ್ಕಾರಿ ವಾಹನಕ್ಕೆ ಬೆಂಕಿ ಬಿದ್ದಿರುವುದ್ದಾಗಿ ಸ್ಥಳೀಯರು ಹೇಳುತ್ತಾರೆ.

LEAVE A REPLY

Please enter your comment!
Please enter your name here