ಹೊಸಪೇಟೆಯಲ್ಲಿ ಬೃಹತ್ ಸ್ವಚ್ಛತಾ ಸಹಿ ಪ್ರತಿಜ್ಞಾ ವಿಧಿ

0
262

ಬಳ್ಳಾರಿ / ಹೊಸಪೇಟೆ: ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಸಿ2ಸಿ ಅಲೈಯನ್ಸ್ ಕ್ಲೀನ್ ಸಿಟಿ ಮೀಷನ್ ನಗರಸಭೆ ಮತ್ತು ಜೆಸಿಐ ಸಹಯೋಗದಲ್ಲಿ ನಮ್ಮ ಹೆಮ್ಮೆ ನಮ್ಮ ಹೊಸಪೇಟೆ ಬೃಹತ್ ಸ್ವಚ್ಛತಾ ಸಹಿ ಪ್ರತಿಜ್ಞಾ ವಿಧಿ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಲಾಯಿತು.

ನಗರದ ರೋಟರಿ ವೃತ್ತದಲ್ಲಿ ಅಳವಡಿಸಲಾಗಿದ್ದ 4 ಅಡಿ ಅಗಲ ಮತ್ತು 100 ಅಡಿ ಉದ್ದದ ಬೋರ್ಡ್ ಮೇಲೆ ಹಸ್ತಾಕ್ಷರ ಬರೆಯುವ ಮೂಲಕ ನಗರಸಭೆ ಅಧ್ಯಕ್ಷ ಅಬ್ದುಲ್ ಖದೀರ್ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ವಿಶ್ವಪ್ರಸಿದ್ಧ ಹಂಪಿ ಹೆಬ್ಬಾಗಿಲು ಎಂದು ಕರೆಯುವ ಐತಿಹಾಸಿಕ ಹೊಸಪೇಟೆ ನಗರದ ಸ್ವಚ್ಛತೆ ಹೊಣೆ ಕೇವಲ ನಗರಸಭೆಗೆ ಮಾತ್ರ ಸೀಮಿತವಾಗಿಲ್ಲ. ನಾಗರಿಕರ ಮೇಲೆಯೂ ಹೊಣೆಗಾರಿಕೆ ಇದೆ. ಹಂಪಿಗೆ ಬೇಟಿ ನೀಡುವ ಸಹಸ್ರಾರು ಪ್ರವಾಸಿಗರು, ಹೊಸಪೇಟೆ ನಗರದ ಮೂಲಕವೇ ತೆರಳುವುದು, ಸೇರಿದಂತೆ ಇಲ್ಲಿಯೇ ವಸತಿ ಗೃಹದಲ್ಲಿ ವಾಸ್ತವ್ಯ ಹೂಡುತ್ತಾರೆ. ನಗರಸಭೆ ಹಾಗೂ ಸಂಘ-ಸಂಸ್ಥೆಗಳೊಂದಿಗೆ ನಾಗರಿಕರು, ಸ್ವಚ್ಛತಾ ಅಭಿಯಾನದಲ್ಲಿ ಕೈ ಜೋಡಿಸಿದಲ್ಲಿ ಮಾತ್ರ ನಗರ ಸ್ವಚ್ಛತೆ ಹಾಗೂ ಸುಂದರ ನಗರವಾಗಿ ರೂಪಗೊಳ್ಳಲು ಸಾಧ್ಯವಾಗಲಿದೆ. ನಾಗರಿಕರು ಈ ವಿನೂತನ ಕಾರ್ಯಕ್ರಮದ ಮೂಲಕ ನಗರ ಸ್ವಚ್ಛತೆ ಕಾಪಾಡಿಕೊಳ್ಳಲು ಪಣ ತೊಡಬೇಕು. ಈ ಮೂಲಕ ಸಹಿ ಸಂಗ್ರಹ ಪ್ರತಿಜ್ಞಾ ವಿಧಿಯಲ್ಲಿ ಪ್ರಮಾಣೀಕರಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಮುಖಮಡರಾದ ಧರ್ಮೆಂದ್ರ ಸಿಂಗ್, ಸಂದಿಪ್ ಸಿಂಗ್, ನಗರ ಸಭೆ ಸದ್ಯಸರಾದ ಚಂದ್ರಶೇಖರ್ ಕಾಮತ್,ರೂಪೇಶ ಕುಮಾರ್, ನಗರಸಭೆ ಪರಿಸರ ಅಭಿಯಂತರಾದ ಶಿಲ್ಪಶ್ರೀ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸುಬ್ಬಣ್ಣ  ಕಾರ್ಯಕ್ರಮ ಪ್ರಾಯೋಜಕ ಮುನೀರ್ ಗ್ರೂಪ್ ವ್ಯವಸ್ಥಾಪಕ ಸೈಯದ್ ನಾಜಿಮುದ್ದಿನ್, ಬಿಜೆಸ್ ಟಯೋಟ ಶೋರೂಮ್ ವ್ಯವಸ್ಥಾಪಕ ಬಿ ಎಸ್ ಜಯರಾಜ್ ಸಿಂಗ್ ಸಿ2ಸಿ ಅಲೈಯನ್ಸ್  ಶಶಿಧರ, ಜೆಸಿಐ ಅಧ್ಯಕ್ಷೆ ನೀಲಾಮಂಬಿಕಾ, ಚೆಮಂಬರ್ಸ್‌ ಆಫ್ ಕಾರ್ಮಸ್ ಅಶ್ವೀನ್ ಕೋತಂಬರಿ ಇತರರು ಇದ್ದರು.

LEAVE A REPLY

Please enter your comment!
Please enter your name here