ಕೆರೆಯ ಹೂಳೆತ್ತಲು ರೈತರಿಗೆ ಅವಕಾಶ.

0
258

⁠⁠⁠ಬಳ್ಳಾರಿ /ಹೊಸಪೇಟೆ :ಕಮಲಾಪುರ ಕೆರೆಯ ಹೂಳೆತ್ತಲು ರೈತರಿಗೆ ಅವಕಾಶ:ಜಿಲ್ಲಾಧಿಕಾರಿ ರಾಮಪ್ರಸಾತ್ ಮನೋಹರ

ಹೊಸಪೇಟೆ: ವಿಜಯನಗರ ಅರಸರ ಕಾಲದ ಐತಿಹಾಸಿಕ ಕಮಲಾಪುರ ಕೆರೆಯಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿದ್ದು, ಕೆರೆಯಲ್ಲಿ ತುಂಬಿರುವ ಹೂಳೆತ್ತಲು ರೈತರು ಮುಂದೆ ಬಂದಲ್ಲಿ ಅವರಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ರಾಮಪ್ರಸಾತ್ ಮನೋಹರ್ ತಿಳಿಸಿದರು.

ನಗರಸಭೆ ವಿಶೇಷ ಸಮಾನ್ಯ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆರೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೂಳು ತುಂಬಿದೆ. ರೈತರು ಹೂಳೆತ್ತಲು ಮುಂದೆ ಬಂದರೆ ಅವಕಾಶ ನೀಡಲಾಗುವುದು. ಆದರೆ, ಎಲ್ಲಿಂದರಲ್ಲಿ ಅವೈಜ್ಞಾನಿಕವಾಗಿ ಹೂಳೆತ್ತಲು ಅವಕಾಶವಿಲ್ಲ. ವೈಜ್ಞಾನಿಕವಾಗಿ ಹೂಳೆತ್ತಲು ಅವಕಾಶ ನೀಡಲಾಗುವುದು ಎಂದರು.

ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹ ಸಾಮಾರ್ಥ್ಯ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು, ಜಲಾಶಯದಲ್ಲಿ ಸಂಗ್ರಹ ಇರುವ ಹೂಳೆತ್ತಲು ಜಿಲ್ಲೆಯ ರೈತರು ಮುಂದೆ ಬಂದಿದ್ದು, ಹೂಳೆತ್ತಲು ಜಿಲ್ಲಾಡಳಿತ ಅವಕಾಶ ಕಲ್ಪಿಸಲಿದೆ.

ಇನ್ನೇನು ಮಳೆಗಾಲ ಆರಂಭದ ದಿನಗಳು ಹತ್ತಿರ ಇರುವುದರಿಂದ ಮೇ ತಿಂಗಳಲ್ಲಿ ಹೂಳೆತ್ತಲು ಮಾತ್ರ ಸಮಯ ಉಳಿದಿದೆ ಎಂದರು. ಈ ವೇಳೆಯಲ್ಲಿ ಹೂಳೆತ್ತುವುದು ಸುಲಭವಾಗಲಿದೆ ಎಂದರು.

ಮನವಿ: ನೀರಿಲ್ಲದೇ ಬೆಳೆಗಳು ಒಣಗುತ್ತಿದ್ದು, ರಾಯ,ಬಸವ ಕಾಲುವೆಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಜಿಲ್ಲಾಧಿಕಾರಿ ರಾಮಪ್ರಸಾತ್ ಮನೋಹರ ಇವರಿಗೆ ಹೊಸಪೇಟೆ ರೈತ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹಾಗೂ ಶಾಸಕ ಆನಂದಸಿಂಗ್ ಅವರು, ನೀರಾವರಿ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಆನಂದಸಿಂಗ್, ನಗರಸಭೆ ಅಧ್ಯಕ್ಷ ಅಬ್ದುಲ್ ಖದೀರ್ ಉಪಾಧ್ಯಕ್ಷೆ ಸುಮಂಗಳಮ್ಮ ಉಪವಿಭಾಗಾಧಿಕಾರಿ ಪ್ರಶಾಂತ್ ಕುಮಾರ ಮಿಶ್ರಾ ಹಾಗೂ ತಹಶೀಲ್ದಾರ ಎಚ್.ವಿಶ್ವನಾಥ ರೈತ ಮುಖಂಡರಾದ ಗೋಸಲ ಭರ‌್ಮಪ್ಪ, ಜಿ.ಕೆ.ಹನುಮಂತಪ್ಪ, ಬಿಸಾಟಿ ಸತ್ಯನಾರಾಯಣ ಸೇರಿದಂತೆ ಇತರರು ಇದ್ದರು.

LEAVE A REPLY

Please enter your comment!
Please enter your name here