ಭಗವದ್ ಗೀತಾ

0
475

ಶ್ರೇಷ್ಠರಾಗೋಣ

ಮಾನ್ಯರೇ

ಭಗವದ್ಗೀತೆಯನ್ನು ಪ್ರೀತಿಯಿಂದ ಓದಿ, ಮನನ ಮಾಡಿ ಆಗ ದುಃಖದಿಂದ ಪಾರಾಗುವಿರಿ. ನಮ್ಮೇಲ್ಲಾ ಸಮಸ್ಯೆಗಳಿಗೆ ಭಗವದ್ಗೀತೆಯೇ ಪರಿಹಾರ. ಇದು ಒಂದು ಜನಾಂಗದಲ್ಲ. ಇಡೀ ಮಾನವ ಕುಲಕ್ಕೆ ಸೇರಿದ್ದು. ಅನೇಕ ಮಹಾತ್ಮರು ಗೀತೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸುಖ, ಶಾಂತಿ, ಸಮಾಧಾನವನ್ನು ಪಡೆದಿದ್ದಾರೆ.

ಸಹ್ರದಯರೇ ಮಾನವನದು ದೇಹವಲ್ಲ ಅದು ಆತ್ಮ. ನಾವು ಅನುಭವಿಸುವ ಎಲ್ಲಾ ದುಃಖ ದೇಹಕ್ಕೆ ಸಂಭಂದಿಸಿದು, ಆತ್ಮದಲ್ಲೇ ಮನಸನ್ನು ಸ್ಥಿರಗೊಳಿದರೆ ಎಲ್ಲಾ ದುಃಖದಿಂದ ಪಾರಾಗಬಹುದು.ಗೀತೆಯನ್ನು ಸರಿಯಾಗಿ ಮನನ ಮಾಡಿಕೊಂಡಲ್ಲಿ, ಯಶಸ್ಸು, ಕೀರ್ತಿ ಮತ್ತು ಸಂಪತ್ತನ್ನು ಪಡೆಯಬಹುದು. ಇಳಿ ವಯಸ್ಸಿನಲ್ಲಿ ವೈರಾಗ್ಯವ‌ನ್ನು ತಾಳಬಹುದು.

ನೀವು ಏಕಾಂಗಿಯೆಂದು ತಿಳಿಯಬೇಡಿರಿ. ನಿಮ್ಮ ಶ್ರೇಯಸ್ಸನ್ನು ಬಯಸುವ ಸಜ್ಜನರು ಬಹಳಷ್ಟಿದ್ದಾರೆ. ನಮ್ಮ ವೇದಿಕೆಯ ಈ ಪ್ರಯತ್ನವೇ ಅದರ ಪ್ರತೀಕ. ನಾವು ನಮ್ಮನ್ನು ಪ್ರೀತಿಸುವಂತೆ ಇತರರನ್ನು ಪ್ರೀತಿಸಬೇಕಿದೆ. ಮಾಧ್ಯಮಗಳಲ್ಲಿ ಬರುವ ಕೆಟ್ಟ ವಿಚಾರಗಳ, ಅತ್ಯಾಚಾರಗಳ ಬಗ್ಗೆ ಓದುವುದನ್ನು ಬಿಟ್ಟು ದಿನದ ಪ್ರಾರಂಭ ಭಗವದ್ಗೀತೆಯ ಅಧ್ಯಯನದಲ್ಲಿ ಆರಂಭವಾಗಲಿ. ಇದು ನಮ್ಮ ಮೆದುಳಿಗೆ ಸ್ಪೂರ್ತಿಯ ಆಹಾರ. ನಾವೇಲ್ಲರು ಸಾಧ್ಯವಾದಷ್ಟು ಸಾತ್ವಿಕ ಆಹಾರವನ್ನು ಉಪಯೋಗಿಸುವ ಪ್ರಯತ್ನ ಮಾಡೋಣ.
ನಮ್ಮೇಲ್ಲರ ಬಾಳು ಸಂತೋಷದಿಂದ ಕೂಡಿರಲಿ ಹಾಗೂ ನಮ್ಮ ಸುತ್ತ ಮುತ್ತ ಇರುವವರಿಗೂ ಸಂತೋಷ ನೀಡೋಣ. ಉದ್ವೇಗ ರಹಿತನಾಗಿ, ಆರೋಗ್ಯವಂತರಾಗಿ ಬಾಳೋಣ. ಈ ಜಗತ್ತು ಇನ್ನೂ ಉತ್ತಮ ತಾಣವಾಗಲಿ. ನಮ್ಮ ಹಿರಿಯರು ಮತ್ತು ಮಕ್ಕಳು ನಮ್ಮ ಶ್ರೇಷ್ಠತೆಗೆ ಹೆಮ್ಮೆ ಪಡುವಂತಾಗಲಿ. ನಮ್ಮ ಅಸಾಧಾರಣ ವ್ಯಕ್ತಿತ್ವವನ್ನು ಅವರು ಪ್ರೀತಿಯಿಂದ ಅನುಸರಿಸುವಂತಾಗಲಿ.

ಓಂಕಾರ ಸ್ವರೂಪಿಣಿ ಮಹಾ ಸರಸ್ವತಿ ನಮಗೆಲ್ಲರಿಗೂ ಸನ್ಮಂಗಲವನ್ನು ಉಂಟು ಮಾಡಲಿ. ನಾವೇಲ್ಲರೂ ಜೋತೆಗೂಡಿ ಇಂದಿನಿಂದ ಮುಂದುವರಿಯೋಣ. ನಮ್ಮವರೇಲ್ಲರನ್ನು ಆದರ್ಶ ಜೀವನಕ್ಕೆ ಪ್ರೇರೇಪಿಸೋಣ. ಭಗವದ್ಗೀತೆ ಒಂದು ಪುಸ್ತಕವಲ್ಲ, ಅದೊಂದು ಶಕ್ತಿವೆಂಬುದನ್ನು ಮರೆಯದೀರೋಣ.

ನಮ್ಮ ಕಲಿಕೆ ಈ ಕ್ಷಣದಿಂದಲೇ ಪ್ರಾರಂಭವಾಗಲಿದೆ. ನಾಳೆಯಿಂದ ಮುಂಜಾನೆ ಎದ್ದ ತಕ್ಷಣ ಓದುವ ಅಭ್ಯಾಸ ಮಾಡಿಕೋಳ್ಳೋಣ .

ಸಜ್ಜನರೇ , ಯಾವುದೋ ಪುಣ್ಯದ ಕಾರಣದಿಂದ ನಮಗೋಂದು ಸೌಭಾಗ್ಯ ದೊರಕಿದೆ ಸದುಪಯೋಗ ಪಡಿಸಿಕಳ್ಳೋಣ.

ಸರ್ವರಿಗೂ ಶುಭವಾಗಲಿ.


?ಅಧ್ಯಾಯ – 01? ?ಶ್ಲೋಕ – 01?

ಧೃತರಾಷ್ಟ್ರ ಉವಾಚ ।
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ    ।
ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ    ॥೧॥

ಧೃತರಾಷ್ಟ್ರ ಉವಾಚ- ಧೃತರಾಷ್ಟ್ರ ಕೇಳಿದನು:
ಧರ್ಮಕ್ಷೇತ್ರೇ ಕುರುಕ್ಷೇತ್ರೇ  ಸಮವೇತಾಃ ಯುಯುತ್ಸವಃ
ಮಾಮಕಾಃ ಪಾಂಡವಾಃ  ಚ ಏವ ಕಿಮ್ ಅಕುರ್ವತ ಸಂಜಯ –

ಧರ್ಮದ ತಾಣವಾದ ಕುರುಕ್ಷೇತ್ರದಲ್ಲಿ ಯುದ್ಧದ ಬಯಕೆಯಿಂದ ನೆರೆದ ನನ್ನವರು ಮತ್ತು ಪಾಂಡವರು ಏನು ಮಾಡಿದರು ಸಂಜಯನೆ ?

ಈ ಹಿಂದೆ ಹೇಳಿದಂತೆ ಕುರುಡ ಧೃತರಾಷ್ಟ್ರನ ಪ್ರಶ್ನೆ ‘ಜೀವದ’  ಕುರುಡು ಪ್ರಶ್ನೆ ಕೂಡಾ ಹೌದು. ನಾವು ಎಷ್ಟು ಕುರುಡರು ಎಂದರೆ ನಮಗೆ ಏನೂ ಗೊತ್ತಿಲ್ಲ ಎನ್ನುವ ವಿಷಯ ಕೂಡಾ ನಮಗೆ ಗೊತ್ತಿಲ್ಲ!   ಆದ್ದರಿಂದ ಗೀತೆ ಧೃತರಾಷ್ಟ್ರನ ಪ್ರಶ್ನೆಯಿಂದಲೇ ಆರಂಭವಾಗುತ್ತದೆ.

ಕಣ್ಣು ಕಾಣದ ಧೃತರಾಷ್ಟ್ರ ದೂರದರ್ಶನ ಹಾಗು ದೂರಶ್ರವಣ ಶಕ್ತಿಯನ್ನು ವ್ಯಾಸರಿಂದ ಪಡೆದ ಸಂಜಯನಲ್ಲಿ ಹಾಕಿದ ಪ್ರಶ್ನೆಯೇ ಗೀತೆಯ ಮೊದಲ ಶ್ಲೋಕ.

ಪರಶುರಾಮನಿಂದ ಸಮಂತಪಂಚಕ (ಸುತ್ತಲೂ ಐದು ಸರೋಹರ) ನಿರ್ಮಿಸಲ್ಪಟ್ಟು  ಧರ್ಮಕ್ಷೇತ್ರ ಎನಿಸಿದ್ದ ಈ ಯುದ್ಧ ಭೂಮಿ,  ಆನಂತರ ‘ಕುರು’ ಎನ್ನುವ ರಾಜನ ಕಾಲದಲ್ಲಿ  ಪರಮ ಧಾರ್ಮಿಕಕ್ಷೇತ್ರವಾಗಿ ಕುರುಕ್ಷೇತ್ರವಾಯಿತು. ಇದನ್ನೇ ಇಲ್ಲಿ  “ಧರ್ಮಕ್ಷೇತ್ರೇ ಕುರುಕ್ಷೇತ್ರೇ” ಎಂದು ಸಂಬೋಧಿಸಿದ್ದಾರೆ.

ನಮ್ಮ ಹೃದಯ-ಧರ್ಮಕ್ಷೇತ್ರ. ಯಾವುದು ಧರ್ಮ, ಯಾವುದು ಅಧರ್ಮ  ಎಂದು ತೀರ್ಮಾನ ಮಾಡುವ ಮನಸ್ಸು(Mind)-ಕುರುಕ್ಷೇತ್ರ(ಕರ್ಮಕ್ಷೇತ್ರ). ಮನಸ್ಸಿನ ಸಂಘರ್ಷಣೆಯೇ ಮಹಾಭಾರತ ಯುದ್ಧ.

ಇಲ್ಲಿ ಕುರುಡ ಧೃತರಾಷ್ಟ್ರ ಸಂಜಯನಲ್ಲಿ  ಕೇಳುತ್ತಾನೆ “ಹೋರಾಟ ಬಯಸಿ ಎದುರುಬದುರಾದ  ‘ನನ್ನವರು’ ಮತ್ತು ‘ಪಾಂಡವರು’ ಏನು ಮಾಡಿದರು?” ಎಂದು. ಇಲ್ಲಿ ‘ನನ್ನವರು ಮತ್ತುಪಾಂಡವರು’  ಎಂದು ಸಂಬೋಧಿಸುವುದರ ಮೂಲಕ ಆಳುವ ದೊರೆಯಾಗಿದ್ದ ಧೃತರಾಷ್ಟ್ರ  ತನ್ನಲ್ಲಿರುವ ದೌರ್ಬಲ್ಯವನ್ನು ವ್ಯಕ್ತಪಡಿಸುತ್ತಿರುವುದು ಈ ಶ್ಲೋಕದಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತದೆ.

LEAVE A REPLY

Please enter your comment!
Please enter your name here