101 ಗಣಪಗಳ ಸಾಮೂಹಿಕ ವಿಸರ್ಜನೆಯ

0
760

ಬೆಂಗಳೂರು/ಕೆಆರ್ ಪುರ: ದಲ್ಲಿ ಇಂದು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಯುವಕರು, ವೃದ್ಧರೆಲ್ಲ ಕುಣಿದು ಕುಪ್ಪಳಿಸಿದರು.
101 ಗಣಪಗಳ ಸಾಮೂಹಿಕ ವಿಸರ್ಜನೆಯ ಕಾರ್ಯಕ್ರಮವನ್ನು ಸ್ಥಳೀಯ ಬಿಜೆಪಿ ಮುಖಂಡ ಮಾಜಿ ಶಾಸಕ ನಂದೀಶ್ ರೆಡ್ಡಿ ಹಾಗೂ ಪಾಲಿಕೆ ಸದಸ್ಯೆ ಪೂರ್ಣಿಮಾ ಶ್ರೀನಿವಾಸ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು .
ಸಾಮೂಹಿಕ ಗಣೇಶ ಮೂರ್ತಿಗಳ ವಿಸರ್ಜನೆ ಸಡಗರ ಸಂಭ್ರಮದಿಂದ ನೆರವೇರಿಸಲಾಯಿತು. ಕೆಆರ್ ಪುರದ ಪ್ರಮುಖ ಬೀದಿಗಳಲ್ಲಿ ಗಣಪತಿ ಬಪ್ಪ ಮೊರ್ಯ. ಜೈಜೈ ಗಣೇಶ. ಸೇರದಂತೆ ಹಲವು ರೀತಿಯ ಸ್ಲೊಗನ್ಸ್ ಹಾಕುತ್ತಾ ಭಕ್ತರು ಶ್ರದ್ದೆಯಿಂದ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಈ ಶುಭ ಸಮಾರಂಭವನ್ನು ಜಾತಿ ಮತದ ಹಂಗು ತೊರೆದು ದೇವರ ಕೃಪೆಗೆ ಪಾತ್ರರಾದರು. ಇನ್ನು ಈ ಗಣೇಶ ಹಬ್ಬದಲ್ಲಿ ವಿಘ್ನ ನಿವಾರಕ ಕ್ಷೇತ್ರದ ವಿಘ್ನಗಳನ್ನು ನಿವಾರಿಸಲಿದ್ದಾನೆಂದು ಮಾಜಿ ಶಾಸಕ ನಂದೀಶ್ ರೆಡ್ಡಿ ಸ್ಥಳೀಯ ಶಾಸಕರ ವಿರುದ್ಧ ಹರಿಹಾಯ್ದರು …

ಬೈಟ್..ನಂದೀಶ್ ರೆಡ್ಡಿ ಮಾಜಿ ಶಾಸಕರು.
ಕ್ಷೇತ್ರದ ಎಲ್ಲಾ ವಾರ್ಡಿನ ಗಣೇಶ ಮೂರ್ತಿಗಳನ್ನು ನಿಗದಿತ ಸಮಯಕ್ಕೆ ತರಲಾಯಿತು. ಪ್ರಮುಖ ಬೀದಿಗಳಲ್ಲಿ ನೂರಾರು ವಾಹನಗಳಲ್ಲಿ ವಿಘ್ನೇಶ್ವರನನ್ನು ಹೊತ್ತು ತಂದ ವಾಹನಗಳಿಂದಾಗಿ ಟ್ರಾಫಿಕ್ ಜಾಮ್ ಸಹ ಆಗಿತ್ತು. ಮೆರವಣಿಗೆ ನಂತರ ಬಸವನಪುರ ಕರೆಯಲ್ಲಿ ಸಾಮೂಹಿಕ ಗಣೇಶನನ್ನು ವಿಸರ್ಜನೆ ಮಾಡಲಾಯಿತು. ಇದೇ ವೇಳೆ ಮಾತನಾಡಿದ ಸ್ಥಳೀಯ ಪಾಲಿಕೆ ಪೂರ್ಣಿಮ ಮಾಲಿನ್ಯ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು ಎಲ್ಲರೂ ಸಹ ಮಣ್ಣಿನ ಗಣಪನ ಮೂರ್ತಿಯನ್ನೇ ಖರೀದಿಸಿ ಪೂಜಿಸಲಾಗಿದೆ. ಇನ್ನು ಹಬ್ಬವನ್ನು ಪಕ್ಷಾತೀತವಾಗಿ ಆಚರಿಸಲಾಗಿದೆ ಎಂದರು.

ಬೈಟ್..ಪೂರ್ಣಿಮ ಪಾಲಿಕೆ ಸದಸ್ಯೆ ಕೆಆರ್ ಪುರ ವಾರ್ಡ್ .

ಒಟ್ಟಾರೆ ಈ ಹಬ್ಬ ನಗರಕ್ಕೆ ಹೆಚ್ಚಿನ ಮೆರುಗು ತಂದುಕೊಟ್ಟಿದ್ದು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಇದೇ ಮೊದಲಬಾರಿಗೆ ಅತಿ ಹೆಚ್ಚು ಮಣ್ಣಿನ ಗಣಪಗಳನ್ನು ಬಳಸಲಾಗಿದೆ..
ಮುಂದಿನ ದಿನಗಳಲ್ಲಿ ಮಣ್ಣಿನ ಮೂರ್ತಿ ಕಡ್ಡಾಯವಾಗಲಿ ನಮ್ಮೆಲ್ಲರ ಆಶಯ.

LEAVE A REPLY

Please enter your comment!
Please enter your name here