ಕೃಷಿಕರ ಸಮಸ್ಯೆಗಳ ಕುರಿತಂತೆ ಸಮಾವೇಶ

0
235

ಬಳ್ಳಾರಿ /ಬಳ್ಳಾರಿ :ಬರಗಾಲದ ದವಡೆಯಿಂದ ರೈತರನ್ನು ವಿಮುಖಗೊಳಿಸಲು ಜುಲೈ 23 ರಂದು ಬಳ್ಳಾರಿಯಲ್ಲಿ ಕೃಷಿಕರ ಸಮಸ್ಯೆಗಳ ಮತ್ತು ಸಹಕಾರ ಕ್ಷೇತ್ರಕ್ಕೆ ಕುರಿತಂತೆ ಒಂದು ದಿನದ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಬಳ್ಳಾರಿಯಲ್ಲಿ ನಮ್ಮೂರು ಟಿ.ವಿ.ನೊಂದಿಗೆ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಸಿದ್ಧರಾಮ‌ಕಲ್ಮಠ ಅವರು, ಒಂದು ದಿನದ ಈ ಸಮಾವೇಶವನ್ನು ರಾಜ್ಯ ಕಸಾಪ ಅಧ್ಯಕ್ಷ ಮನು ಬಳಿಗಾರ್ ಉದ್ಘಾಟಿಸವರು. ಕಾರ್ಮಿಕ ಮುಖಂಡ ಸಿದ್ಧನಗೌಡ ಪಾಟೀಲ್ ಇನ್ನಿತರರು ರೈತರನ್ನುದ್ದೇಶಿಸಿ ಮಾತನಾಡುವರು.
ವಿಶೇಷವಾಗಿ ಕೃಷಿ ಮತ್ತು ಸಹಕಾರ ಕ್ಷೇತ್ರಗಳ ಬಗ್ಗೆ ವಿಚಾರಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಕೃಷಿ ತಜ್ಞರು, ಚಿಂತಕರು, ರೈತ ಹಾಗೂ ಸಹಕಾರಿ ಮುಖಂಡರು ಭಾಗವಹಿಸಿ ರೈತರಿಗೆ ಮಾಹಿತಿ ನೀಡಲಿದ್ದಾರೆ.
ಸಾಲಬಾಧೆಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ರೈತರಿಗೆ ಈ ಸಮಾವೇಶ ಜೀವನೋತ್ಸಾಹ ತುಂಬಲಿದೆ ಎಂದರು. ಬಾದಾಮಿ ಶಿವಲಿಂಗ, ಟಿಎಂ ಪಂಪಾಪತಿ, ಕರಡಕಲ್ ವೀರೇಶ್, ಮಠಂ‌ ಗಿರಿಜಾಪತಿ,  ರಮೇಶ್ಗೌಡ ಪಾಟೀಲ್ ಇನ್ನಿತರರು  ಹಾಜರಿದ್ದರು.

ಬೈಟ್: ಸಿದ್ಧರಾಮ ಕಲ್ಮಠ, ಅಧ್ಯಕ್ಷರು, ಕಸಾಪ, ಬಳ್ಳಾರಿ ಘಟಕ.

LEAVE A REPLY

Please enter your comment!
Please enter your name here