109 ನೇ ಸಲಹಾ ಸಮಿತಿ ಸಭೆ ಸ್ವಾಗತಾರ್ಹ

0
215

109 ನೇ ಸಲಹಾ ಸಮಿತಿ ಸಭೆ ಸ್ವಾಗತಾರ್ಹ-ಬಳ್ಳಾರಿಯಲ್ಲಿ ಡಿ.ಜಿ.ಪುರುಷೋತ್ತಮಗೌಡ ಹೇಳಿಕೆ-ಪುರುಷೋತ್ತಮಗೌಡ ತುಂಗಭದ್ರ ರೈತ ಸಂಘದ ಅಧ್ಯಕ್ಷ-ನೀರು, ವಿದ್ಯುತ್ ರೈತರಿಗೆ ಸಮರ್ಪಕವಾಗಿ ಒದಗಿಸಲು ಆಗ್ರಹ

ಬಳ್ಳಾರಿ /ಬಳ್ಳಾರಿ: ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾದ ನೀರಿನ ಬಳಕೆ ಕುರಿತು ಬೆಂಗಳೂರಿನಲ್ಲಿ ನಡೆದ 109ನೇ ಸಲಹಾ ಸಮಿತಿ ಸಭೆ ಸ್ವಾಗತಾರ್ಹವಾದುದು ಎಂದು ತುಂಗಭದ್ರ ರೈತ ಸಂಘದ ಅಧ್ಯಕ್ಷ ಜಿ.ಪುರುಷೋತ್ತಮಗೌಡ ಹೇಳಿದ್ದಾರೆ.

ಬಳ್ಳಾರಿಯಲ್ಲಿ ಮಾತನಾಡಿದ ಅವರು, ಆಗಸ್ಟ್‌ 29, 2017 ಕ್ಕೆ ಜಲಾಶಯದಲ್ಲಿ 63 ಟಿಎಂಸಿ ನೀರು ಸಂಗ್ರಹ ಗೊಂಡಿದೆ. ಇನ್ನೂ 12 ಟಿಎಂಸಿ ಬರಬಹುದೆಂದು ಅಂದಾಜಿಸಲಾಗಿದೆ. ಒಟ್ಟು 75 ಟಿಎಂಸಿ ನೀರು ಸಂಗ್ರಹಗೊಂಡಲ್ಲಿ 5 ಟಿಎಂಸಿ ನೀರು ನದಿಗೆ ಹರಿದು ಹೋಗುತ್ತದೆ. ಉಳಿದ 70 ಟಿಎಂಸಿ ನೀರಿನಲ್ಲಿ 24 ಟಿಎಂಸಿ ನೀರು ಆಂಧ್ರಪ್ರದೇಶದ ಪಾಲಿಗೆ ಹೋಗುತ್ತದೆ. ಉಳಿವ 46 ಟಿಎಂಸಿ ನೀರಿನಲ್ಲಿ 10 ಟಿಎಂಸಿ ನೀರು ಕುಡಿಯಲು ಕಾದಿಟ್ಟುಕೊಳ್ಳಬೇಕಿದೆ ಎಂದರು.

ಇನ್ನುಳಿದ 36 ಟಿಎಂಸಿ ನೀರಿನಲ್ಲಿ 2 ಟಿಎಂಸಿ ನೀರು ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ಸರಬರಾಜು ಆಗುತ್ತದೆ.‌

34 ಟಿಎಂಸಿ ನೀರಿನಲ್ಲಿ 2 ಟಿಎಂಸಿ ನೀರು ರಾಯ, ಬಸವ ತುರ್ತ ಮತ್ತು ಬೆಲ್ಲ ಕಾಲುವೆಗಳಿಗೆ ಕೃಷಿಗಾಗಿ ಸರಬರಾಜು ಆಗುತ್ತದೆ.

32 ಟಿಎಂಸಿ ನೀರಿನ ಪೈಕಿ 21 ಟಿಎಂಸಿ ನೀರು ಎಡದಂಡೆ ನಾಲೆಗೆ ಆಶ್ರಯಿಸಿರುವ 6.5ಲಕ್ಷ ಹೆಕ್ಟೇರ್ ಕೃಷಿಗಾಗಿ ಹರಿ ಬಿಡಲಾಗುತ್ತದೆ. 11 ಟಿಎಂಸಿ ನೀರಿನ ಪೈಕಿ ಹೆಚ್ ಎಲ್ ಸಿ ಗೆ 6 ಟಿಎಂಸಿ ನೀರು ಹಂಚಿಕೆ ಆಗಲಿದೆ. ಉಳಿದ 5 ಟಿಎಂಸಿ ಪೈಕಿ 1 ಟಿಎಂಸಿ ನೀರು ನದಿಗೆ ಪೂರೈಸಲಿದೆ.
ಬಾಕಿ ಉಳಿದ 4 ಟಿಎಂಸಿ ನೀರಿನಲ್ಲಿ 1200 ಕ್ಯೂಸೆಕ್ ಹೆಚ್ ಎಲ್ ಸಿಗೆ ಮತ್ತು 600 ಕ್ಯೂಸೆಕ್ ನೀರು ಎಲ್ ಎಲ್ ಸಿಗೆ ಪೂರೈಸಲಾಗುತ್ತದೆ ಎಂದರು.

ಈವೇಳೆ ರೈತ ಮುಖಂಡರಾದ ಕರೂರು ರಾಮನಗೌಡ, ಕೊಟ್ರೇಶಗೌಡ, ಪಂಪಾಪತಿ, ಬಸಯ್ಯಸ್ವಾಮಿ, ಸದಾಶಿವ ರೆಡ್ಡಿ, ಬಸವನಗೌಡ, ಡಿ.ಶಿವಯ್ಯ ಇನ್ನಿತರರು ಇದ್ದರು.

 

ಬೈಟ್: ಜಿ.ಪುರುಷೋತ್ತಮಗೌಡ, ಅಧ್ಯಕ್ಷ ರು, ತುಂಗಭದ್ರ ರೈತ ಸಂಘ, ಬಳ್ಳಾರಿ.

LEAVE A REPLY

Please enter your comment!
Please enter your name here