11 ನೇ ದಿನಕ್ಕೆ ಕಾಲಿಟ್ಟ ಅಂಚೆ ನೌಕರರ ಮುಷ್ಕರ

0
65

ಮಂಡ್ಯ/ಮಳವಳ್ಳಿ : ಗ್ರಾಮೀಣ ಅಂಚೆ ನೌಕರರ ಸಂಘ ವತಿಯಿಂದ. 7 ನೇ ವೇತನ ಆಯೋಗ ಹಾಗೂ ಕಮಲೇಶ ಚಂದ್ರ ವರದಿ ಜಾರಿ ಗೊಳಿಸುವಂತೆ ಒತ್ತಾಯಿಸಿ ಅನಿರ್ದಿಷ್ಟ ಅವಧಿ ಮುಷ್ಕರ 11 ನೇ ದಿನಕ್ಕೆ ಕಾಲಿಟ್ಟಿದೆ. ಮಳವಳ್ಳಿ ಪಟ್ಟಣದ ಅಂಚೆ ಕಚೇರಿ ಮುಂದೆ ತಾಲ್ಲೂಕಿನ ಎಲ್ಲಾ ಗ್ರಾಮೀಣ ಅಂಚೆ ನೌಕರರು ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಕುಮಾರ ಮಾತನಾಡಿ , ಕಳೆದ 11 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು, ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ಇದ್ದು . ಕೂಡಲೇ ಕಮಲೇಶ ಚಂದ್ರ ವರದಿ ಜಾರಿಗೊಳಿಸಬೇಕುಒತ್ತಾಯಿಸಿದರು.

ಜುಲೈ 4 ರಿಂದ ಇಲಾಖೆ ಎಲ್ಲಾ ಸಿಬ್ಬಂದಿಗಳು ಸಹಾ ಹೋರಾಟಕ್ಕೆ ಕೈ ಜೋಡಿಸಲಿದ್ದಾರೆ ಜೊತೆಗೆ ಅಂಚೆ ನೌಕರರ ಕುಟುಂಬವೂ ಸಹ ಪ್ರತಿಭಟನೆಯಲ್ಲಿ ಭಾಗವಹಿಸಲಿದೆ ಎಂದರು. ಸೋಮಶೇಖರ, ಕಾರ್ತಿಕ್, ಮಹೇಶ, ಆರಾದ್ಯ, ಅನುಸೂಯ, ಭಾಗ್ಯಮ್ಮ ಸೇರಿದಂತೆ ಎಲ್ಲಾ ಅಂಚೆ ನೌಕರರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here