ತಟ್ಟೆ,ಲೋಟ ವಿತರಣಾ ಕಾರ್ಯಕ್ರಮ

0
156

ಮಂಡ್ಯ/ಮಳವಳ್ಳಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಂಗಾಬೀದಿ ಶಾಲಾಮಕ್ಕಳಿಗೆ ಶ್ರೀ ಬಂಡೂರು ಆಟೋ ಚಾಲಕ /ಮಾಲೀಕರ ಸಂಘದವತಿಯಿಂದ. ಉಚಿತ ತಟ್ಟೆ ಹಾಗೂ ಲೋಟ ವಿತರಣಾ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮ ವನ್ನು ಪುರಸಭಾ ಸದಸ್ಯ ಗಂಗರಾಜೇಆರಸು ಉದ್ಘಾಟಿಸಿ ಮಾತನಾಡಿ, ಖಾಸಗಿ ಶಾಲೆಗೆ ಹೋಗದಂತೆ ಪೋಷಕರನ್ನು ಮನವೋಲಿಸಬೇಕು, ಇದಕ್ಕೆ ಶಿಕ್ಷಕರು ಸಹ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ತಿಳಿಸಿದರು. ನಾವು ನಿಮ್ಮೊಂದಿಗೆ ಸಹಕಾರ ನೀಡುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಜರ್ನಾದನಸ್ವಾಮಿ, ಬಂಡೂರು ಆಟೋ ಚಾಲಕ/ಮಾಲೀಕ ಸಂಘ ಅಧ್ಯಕ್ಷ ಉಮೇಶ್, ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ರವಿಕುಮಾರ, ಮುಖ್ಯಶಿಕ್ಷಕ ನಾಗರಾಜು ,ಹಾಗೂ ಶಾಲಾ ಸಿಬ್ಬಂದಿ ಹಾಜರಿದ್ದರು

LEAVE A REPLY

Please enter your comment!
Please enter your name here