ಹಮಾಲಿ ಕಾರ್ಮಿಕರಿಗೆ ಸನ್ಮಾನ..!

0
228

ಭಗತ್‌ಸಿಂಗ್ 110 ನೇ ಜನ್ಮದಿನಾಚರಣೆ: ಹಮಾಲಿ ಕಾರ್ಮಿಕರಿಗೆ ಸನ್ಮಾನ

ಬಳ್ಳಾರಿ/ಹೊಸಪೇಟೆ:ದೇಶದ ಸ್ವಾಂತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನು ಸಮರ್ಪಣೆ ಮಾಡಿದ ಭಗತ್‌ಸಿಂಗ್, ದೇಶಪ್ರೇಮವನ್ನು ವಿಶ್ವಕ್ಕೆ ಸಾರಿದ ಮಹಾನ್ ಕ್ರಾಂತಿಕಾರಿಯಾಗಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಪಕ್ಷದ ಫ್ರೊಫೆಸೆನಲ್ ಸೆಲ್‌ನ ಹೈದ್ರಾಬಾದ್ ಕರ್ನಾಟಕ ಉಸ್ತುವಾರಿ ಹೆಚ್.ಎನ್.ಎಫ್. ಮಹಮ್ಮದ ಇಮಾಮ್ ನಿಯಾಜಿ ಹೇಳಿದರು.

ನಗರದಲ್ಲಿ ಭಗತ್‌ಸಿಂಗ್ ಯುತ್ ಸಮಿತಿ ವತಿಯಿಂದ ಕ್ರಾಂತಿಕಾರಿ ಭಗತ್ ಸಿಂಗ್ ಅವರ 110 ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ದೇಶಕ್ಕಾಗಿ ತನ್ನ ಪ್ರಾಣವನ್ನು ಸಮರ್ಪಣೆ ಮಾಡಿದ ಭಗತ್‌ಸಿಂಗ್‌ರಂತಹ ವಹಾನ್ ದೇಶಭಕ್ತರ ಹಾಗೂ ಹೋರಾಟಗಾರರ ತ್ಯಾಗ, ಶ್ರಮ ಬಲಿದಾನದ ಫಲವಾಗಿ ದೇಶ ಸ್ವಾತಂತ್ರ್ಯ ಕಂಡು ನಾವೆಲ್ಲರೂ ಸುಭದ್ರವಾಗಿದ್ದೇವೆ ಎಂದರು.ಹಂಪಿ ಜಿಲ್ಲಾ ಪಂಚಾಯ್ತಿ ಸದಸ್ಯ ಪ್ರವೀಣ ಸಿಂಗ್ ಮಾತನಾಡಿ, ಭಗತ್ ಸಿಂಗರವರು ದೇಶಕ್ಕೆ  ಸ್ವಾತಂತ್ರ ತಂದುಕೊಡುವ ಜೊತೆಯಲ್ಲಿಯೇ ರೈತರ, ಶೋಷಿತರ ಹಾಗೂ ದುಡಿಯುವ ಶ್ರಮಿಕ ವರ್ಗದವರ ಸರ್ವಾಂಗೀಣ ಏಳ್ಗೆಯನ್ನು ಕನಸು ಕಂಡಿದ್ದರು ಎಂದು ಹೇಳಿದರು.

ಬಿ.ಜೆ.ಪಿ. ಮುಖಂಡ ಹಾಗು ಮಾಜಿ ಶಾಸಕ ರತನ್ ಸಿಂಗ್ ಮಾತನಾಡಿ, ಭಗತ್ ಸಿಂಗ್ ಅವರು, ಜೀವನ ಆದರ್ಶ, ಸಿದ್ದಾಂತ, ಮೌಲ್ಯಗಳು ಇಂದಿನ ಜನಪ್ರತಿ ನಿಧಿಗಳು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಕನಸ್ಸು ನನಸಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಬಿ.ಜೆ.ಪಿ. ಮುಖಂಡ ದರ್ಮೇಂದ್ರ ಸಿಂಗ್, ಪಂತರ್ ಜಯಂತ್, ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಧರ್ ನಾಯ್ಡು, ವಕೀಲ ವೆಂಕಟೇಶ, ರೈತ ಮುಖಂಡರಾದ ಖಾಜಾ ಹುಸೇನ ನಿಯಾಜಿ, ನಗರಸಭೆ ಸದಸ್ಯರಾದ ರಾಮಕೃಷ್ಣ, ಶಿನಪ್ಪ, ಹಾಗೂ ಭಗತ್‌ಸಿಂಗ್ ಯೂತ್ ಪದಾಧಿಕಾರಿಗಳು ಯೋಹಾನ್, ಬುಡೇನ್ ಸಾಬ್,ವಿರೂಪಾಕ್ಷ, ಶ್ರೀಕಾಂತ್ ಹಾಗು ಜಾವೀದ್ ಇತರರು ಹಾಜರಿದ್ದರು. ಈ ವೇಳೆ ಹಮಾಲಿ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here