ಸರ್ಕಾರಿ ಆಸ್ಪತ್ರೆಗಳ ಕರ್ಮಕಾಂಡ…

0
185

ಮಂಡ್ಯ/ ಮಳವಳ್ಳಿ: ಸರ್ಕಾರಿ ಕೆಲಸ ದೇವರ ಕೆಲಸ ಎನ್ನುತ್ತಾರೆ ಸರ್ಕಾರಿ ಸೇವೆಯಲ್ಲಿರುವ ಮಂದಿ ಮೊದಲು ನಮ್ಮ ಕೆಲಸ ನಂತರ ಬೇರೆಯವರ ಕೆಲಸ ಎನ್ನುವ ರೀತಿ ವರ್ತಿಸುತ್ತಾರೆ ಎಷ್ಟು ಸತ್ಯ ಅನ್ನುವುದಕ್ಕೆ ಇಂದು ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಗ್ರಾಮದ ಸರ್ಕಾರಿ ಆಸ್ವತ್ರೆಯ ಸಿಬ್ಬಂದಿಯ ಹಾಗೂ ವೈದ್ಯರೇ ಸಾಕ್ಷಿ.ವೈದ್ಯರು, ದಾದಿಯರಿಲ್ಲದೆ ಸುಮಾರು 50 ನಿಮಿಷಗಳ ಕಾಲ ಆಸ್ವತ್ರೆಯ ಮುಂಭಾಗ ಕುಳಿತು ಗರ್ಭಿಣಿ ಹೆಂಗಸಿನ ನರಳಾಟ ಹೇಳತೀರಾಗಿದೆ.ಮಂಡ್ಯದ ಮಳವಳ್ಳಿ ತಾಲೂಕಿನ, ಬೆಳಕವಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಘಟನೆ. ನಡೆದಿದೆ. ಇನ್ನೂ ಮುಖ್ಯ ವಾಗಿ ಸರ್ಕಾರಿ ಆಸ್ವತ್ರೆಗಳಲ್ಲಿ 108 ಇದ್ದೇ ಇರುತ್ತದೆ . ಇಲ್ಲಿ ಇದ್ದರೂ ಇಲ್ಲದ್ದಂತೆ ಇದನ್ನು ಪ್ರಶ್ನಿಸಿದರೆ ಆ್ಯಂಬುಲೆನ್ಸ್ ಕೆಟ್ಟುಹೋಗಿದೆ ಎಂಬ ಹಾರಿಕೆಯ ಉತ್ತರ ವನ್ನು ಇಲ್ಲಿನ ಸಿಬ್ಬಂದಿ ಉತ್ತರ ಕೇಳಿ ಬರುತದೆ.ಗರ್ಭಿಣಿಯ ಜೊತೆಗೆ ಕಣ್ಣೀರು ಹಾಕುತ್ತ ಕುಟುಂಬದವರ ರೋಧನ ಹೇಳ ತೀರಾ ಸಾಗಿತ್ತು.ಬೆಳಕವಾಡಿ ಗ್ರಾಮದ ಚಿಕ್ಕಗಾಣಿಗರ ಬೀದಿಯ ಮಂಜು ಪತ್ನಿ ರತ್ನಳ ನರಳಾಟ ಮುಗಿಲು ಮುಟ್ಟಿದ್ದರೂ ಆ್ಯಂಬುಲೆನ್ಸ್ ಯನ್ನು ಬೇರೆ ಕಡೆಯಿಂದ ಕರೆಯಿಸುವ ವ್ಯವಸ್ಥೆ ಮಾಡಿದ ಬಗ್ಗೆ ಹೆರಿಗೆ ನೋವಿನ ನರಳಾಟ ಮಾಡುತ್ತಿದ್ದ ಬಗ್ಗೆ ಸಾರ್ವಜನಿಕ ರು ಆಕ್ರೋಶ ವ್ಯಕ್ತಪಡಿಸಿದರು. ಈ ಆಸ್ವತ್ರೆ ಹೇಳುವುದಕ್ಕೆ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ.ಈ ಘಟನೆಯಿಂದ ಬೆಳಕಿಗೆ ಬಂದ ಬೆಳಕವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅವ್ಯವಸ್ಥೆ ಬೆಳಕಿಗೆ ಬಂದಿದೆ. ನಂತರ ಕೊನೆಗೂ ಆ್ಯಂಬುಲೆನ್ಸ್ ಬಂದು ಮಳವಳ್ಳಿ ಸಾರ್ವಜನಿಕ ಆಸ್ವತ್ರೆಗೆ ಗರ್ಭಣಿಯನ್ನು ಕರೆದುಕೊಂಡು ಹೋಯಿತು ಅಲ್ಲಿ ಸಹಜ ಹೆರಿಗೆಯಾಗಿ ಗಂಡು ಮಗುವನ್ನು ರತ್ಮಮ್ಮ ಜನ್ಮ ನೀಡಿದ್ದಾಳೆ. ಇನ್ನೂ ಇಂತಹ ಕೆಲಸಗಳನ್ನು ತುರ್ತುಯಾಗಿ ನಿರ್ವಹಿಸಬೇಕು ಎಂದು ರತ್ಮಮ್ಮಳ ತಾಯಿ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here