2017-18ನೇ ಸಾಲಿನ ಮುಂಗಡ ಆಯ-ವ್ಯಯ ಸಭೆ

0
249

ಬೆಂಗಳೂರು (ಹೊಸಕೋಟೆ): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರಸಭಾ ಕಾರ್ಯಾಲಯದ 17-18ನೇ ಸಾಲಿನ ಬಜೆಟ್ ಕುರಿತು ನಗರಸಭೆ ಅಧ್ಯಕ್ಷರ ನಾರಾಯಣಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯಿತು ಹಾಗೂ ನೂತನ ಸದಸ್ಯರನ್ನು ನೇಮಕ ಮಾಡಲಾಯಿತು.


ನಗರದ ಎಸ್.ಜೆ.ಎಸ್.ಸಮುದಾಯ ಭವನದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಆದಾಯ ಹಾಗೂ ನಗರ ಸಭೆ ಯಲ್ಲಿ ಲಭ್ಯವಿರುವ 7.11 ಕೋಟಿ ಒಳಗೊಂಡಿರುತ್ತದೆ ಒಟ್ಟು 21.88 ಕೋಟಿಗಳಾಗಿರುತ್ತದೆ. ಸದರಿ ಲಭ್ಯವಾಗಿರುವ ವೆಚ್ಚದಲ್ಲಿ ಆಡಳಿತ ಮಂಡಳಿ ವೆಚ್ಚ 18.51 ಲಕ್ಷ, ಕಲ್ಯಾಣಿ ನಿಧಿ ವೆಚ್ಚ 91.37 ಲಕ್ಷ, ಘನತ್ಯಾಜ್ಯ ವೆಚ್ಚ 483 ಲಕ್ಷ, ಉದ್ಯಾನವನ ವೆಚ್ಚ 18.54 ಲಕ್ಷ, ವ್ಯಕ್ತಿಪರ ವೆಚ್ಚ 27.5 ಲಕ್ಷ ವೇತನ ಭತ್ಯೆಗಳು 314 ಲಕ್ಷ , ಬೀದಿದೀಪಗಳ ವೆಚ್ಚ 101.28 ಲಕ್ಷ, ಒಳಚರಂಡಿ ವೆಚ್ಚ 150ಲಕ್ಷ, ನೀರು ಸರಬರಾಜು ಇನ್ನಿತರ ವೆಚ್ಚಗಳನ್ನು ನಗರಸಭೆ ಅಧ್ಯಕ್ಷರು ಮಂಡಿಸಿದರು. ನೂತನ ನಾಮಿನಿ ಸದಸ್ಯರಾಗಿ ನಾರಾಯಣಸ್ವಾಮಿ (ಆಕಾಶ್), ಎಚ್,ಕೆ,ರವೀಂದ್ರ, ಮುಖ್ತಿಯಾರ್ ಅಹಮ್ಮದ್, ವೀರಭದ್ರಪ್ಪ, ದೇವರಾಜು (ಪೈಂಟ್ ರಾಜು) ರವರನ್ನು ಆಯ್ಕೆ ಮಾಡಿದರು.  ಈ ಸಂದರ್ಭದಲ್ಲಿ ನಗರಸಭೆಉಪಾಧ್ಯಕ್ಷೆ ಗಿರಿಜಮ್ಮ, ಸದಸ್ಯರಾದ ಹೇಮಂತ್‍ಕುಮಾರ್, ಗುಲಾಬ್ ಜಾನ್, ಪಾರ್ವತಿಚಂದ್ರಶೇಖರ್, ಸ್ಥಾಯಿ ಸಮಿತಿ ಅದ್ಯಕ್ಷ ಆರ್ಮುಗಂ, ಮಾಜಿ ಅದ್ಯಕ್ಷ ಶಿವನಾಂದ, ಅನೇಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here