ನಗರಸಭೆ ಆಢಳಿತದ ಮೇಲೆ ನಂಬಿಕೆ ಕಳೆದುಕೊಂಡ ನಾಗರೀಕರು.

0
285

ದೊಡ್ಡಬಳ್ಳಾಪುರ:ನಗರದ ಕನ್ನಡ ಜಾಗೃತಭವನದಲ್ಲಿ ನಡೆದ 2017-18 ರ ಸಾಲಿನ ಕರಡು ಆಯ-ವ್ಯಯ ಅಂದಾಜು ಘೋಷ್ವಾರೆಯ ಸಾರ್ವಜನಿಕ ಸಮಾಲೋಚನೆ ಸಭೆಯನ್ನು ಕರೆಯಲಾಗಿತ್ತು. ಸಭೆಮಾತ್ರ ನೆಪಮಾತ್ರಕ್ಕೆ ಮಾಡಿದಂತಿತ್ತು. ಖಾಲಿ ಖಾಲಿ ಚೇರು ನಗರಸಭೆ ಅಧಿಕಾರಿಗಳು,ನಗರಸಭಾ ಅಧ್ಯಕ್ಷ ಮುದ್ದಪ್ಪ,ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲೇಶ್ ಉಪಾಧ್ಯಕ್ಷೆ ಜಯಲಕ್ಷ್ಮಿ ಸೇರಿದಂತೆ ಬೆರಳೆಣಿಕೆಯಷ್ಟು ನಗರ ಸಭಾ ಸದಸ್ಯರುನ್ನು ಬಿಟ್ಟರೆ ಸಾರ್ವಜನಿಕರು ಒಂದಿಷ್ಟುಜನ ಮಾತ್ರ ಭಾಗವಹಿಸಿದ್ದು ಕಂಡುಬಂತು. ಒಂದಿಷ್ಟು ಜನ ನಾಗರೀಕರನ್ನು ಈ ವಿಚಾರವಾಗಿ ಮಾತನಾಡಿಸಿದಾಗ ಅಯ್ಯೋ..ಬಿಡಿ ಸ್ವಾಮಿ ಉದ್ದುದ್ದ ಬಾಷಣ ಮಾಡೋರು ಊರುದ್ಧಾರಮಾಡ್ತಾರಾ? ಮಾಡೋ ಕೆಲಸಬಿಟ್ಟು ಅವರ ಬುರುಡೇ ಪುರಾಣ ಕೇಳೋ ಪುರುಸೊತ್ತೂ ನಮಗಿಲ್ಲಾ ಅಂತಾರಲ್ಲಾ? ಏನಿದರ ಅರ್ಥ ಅಂದರೆ ನಗರಸಭೆಯ ಆಢಳಿತದ ಮೇಲೆ ಇವರಿಗೆ ಯಾವೊತ್ತೋ ನಂಬಿಕೆ ಹೋಗಿದೆ ಅವರು ಮಾಡೊ ಕೆಲ್ಸಾ ಅಷ್ಟರಲ್ಲೇ ಇದೆ. ನೆಪಕ್ಕೆ ಇದೊಂದು ಬಡ್ಜೆಟ್ ಮೀಟಿಂಗು ರಾಮನ ಲೆಕ್ಕ ಕೃಷ್ಣನ ಲೆಕ್ಕಹೇಳಿ ನಮ್ಮ ಟೈಮ್ ವೇಷ್ಟ್ ಮಾಡ್ತಾರೆ ಬಿಟ್ರೆ ಇನ್ನೇನು ಕಿಸಿತಾರೆ? ಅಂಥ ವ್ಯಂಗ್ಯಮಾಡ್ತಾರೆ. ಇರೋದನ್ನ ನಿರ್ವಹಣೆ ಮಾಡೋದು ಬಿಟ್ಟು ಇಲ್ದೇ ಇರೋ ಹೊಸಕೆಲ್ಸಾ ಹುಡಿಕಿ,ಹುಡಿಕಿ ಲಕ್ಷ,ಲಕ್ಷ ಖರ್ಚು ಮಾಡಿ ಏನೇನೋ ಮಾಡ್ತೀವಿ ಅಂತಾರೆ ಅಷ್ಟೆ. ಎಲ್ಲಾ ಕಮಾಯಿ ಕಾನ್ಸೆಪ್ಟ್ ಗಳೆ ಅಂತಾರೆ.
ಅಧಿಕಾರಿಗಳ ಮತ್ತು ಜನಪ್ರತಿನಿಧಗಳ ಎಲ್ಲಾ ಲೆಕ್ಕಾಚಾರದ ವಿಚಾರ ದೊಡ್ಡಬಳ್ಳಾಪುರದ ಜನತೆಗೆ ಗೊತ್ತಿದೆ ಅನ್ನೋದ್ರಲ್ಲಿ ಸಂಧೇಹ ವಿಲ್ಲಬಿಡಿ.

ನಾವು ದುಡಿದು ತಿನ್ನೋ ಜನಾ ಸ್ವಾಮಿ ಕಾಲಹರಣ ಮಾಡಲ್ಲ, ಸಂಬಳ ಪಡೆಯೋ ಅಧಿಕಾರಿಗಳಂತೆ, ಉದ್ದುದ್ದ ಭಾಷಣ ಮಾಡೋ ರಾಜಕಾರಣಿಗಳ ತರಹ ಅಂತಾರಲ್ಲಾ.

ಎಷ್ಟಾದರೂ ನಮ್ಮೂರಿನ ಜನ ಬುದ್ದಿವಂತರಲ್ಲವೇ?

LEAVE A REPLY

Please enter your comment!
Please enter your name here