5 ಲಕ್ಷ ನಿರುದ್ಯೋಗ ಯುವಕರಿಗೆ ತರಬೇತಿ ನೀಡುವ ಗುರಿ : ಎಸಿ ಪ್ರಶಾಂತಕುಮಾರ ಮಿಶ್ರಾ

0
242

ಬಳ್ಳಾರಿ / ಹೊಸಪೇಟೆ. 5 ಲಕ್ಷ ನಿರುದ್ಯೋಗ ಯುವಕರಿಗೆ ತರಬೇತಿ ನೀಡುವ ಗುರಿ : ಎಸಿ ಪ್ರಶಾಂತಕುಮಾರ ಸಪೇಟೆ : ನಿರುದ್ಯೋಗ ಯುವಕ/ಯುವತಿಯರಿಗೆ ಅವರ ವಿದ್ಯಾರ್ಹತೆ ಅನುಗುಣವಾಗಿ ಉದ್ಯೋಗ ನೀಡಲು ಸರ್ಕಾರ ಕೌಶಲ್ಯ ಅಭಿವೃದ್ದಿ ಮೇಳ ಎನ್ನುವ ಮಹತ್ತರ ಯೋಜನೆಯನ್ನು ಜಾರಿಗೆ ತಂದಿದ್ದು, ನಿರುದ್ಯೋಗ ಯುವಕ/ಯುವತಿಯರು ನೊಂದಣಿ ಮಾಡಿಸಿ, ಇದರ ಸದುಪಯೋಗವನ್ನು ಪಡೆಯಬೇಕು ಎಂದು ಉಪವಿಭಾಗಾಧಿಕಾರಿ ಪ್ರಶಾಂತಕುಮಾರ ಮಿಶ್ರಾ ಹೇಳಿದರು.

ನಗರದ ಪಿ.ಬಿ.ಎಸ್.ಶಾಲೆಯ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ “ಕೌಶಲ್ಯಭಿವೃದ್ದಿ ಮೇಳ”ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ವತಿಯಿಂದ ಅವರ ಆಸಕ್ತಿಗೆ ತಕ್ಕಂತೆ ತರಬೇತಿ ನೀಡಲಾಗುವುದು. ಉದ್ಯೋಗಕ್ಕೆ ಅನುಕೂಲವಾಗಲು ರಾಷ್ಟ್ರೀಯ ಹಾಗು ಅಂತರಾಷ್ಟ್ರೀಯ ಮಟ್ಟದಲ್ಲೂ ಸಹ ತರಬೇತಿಯನ್ನು ನೀಡಲಾಗುವುದು. 5ಲಕ್ಷ ನಿರುದ್ಯೋಗಿಗಳಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಆಸಕ್ತ ನಿರುದ್ಯೋಗಿಗಳು ಮೇ.15ರಿಂದ 22ರ ವರೆಗೆ ಉಚಿತ ನೊಂದಣಿ ಮಾಡಿಸಿಕೊಳ್ಳಬಹುದು. ಈಗಾಗಲೇ 14 ಸಾವಿರ ಮಂದಿ ಉದ್ಯೋಗ ಮೇಳದಲ್ಲಿ ಆಯ್ಕೆಯಾಗಿದ್ದಾರೆ. ನೊಂದಣಿ ಮಾಡಿಸಲು ಇಚ್ಚೆವುಳ್ಳವರು ಆಧಾರ್ ಕಾರ್ಡ್ ಹಾಗು ಇ-ಮೇಲ್ ವಿಳಾಸ  ಅಥವಾ ಸೈಬರ್ ಸೆಂಟರ್‌ನಲ್ಲೂ(<http://www.kaushalkar.com>)  ಎಂದರು.

ಜಿ.ಪಂ.ಸದಸ್ಯ ರೇಖಾ ಪ್ರಕಾಶ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎಚ್.ವಿಶ್ವನಾಥ, ತಾ.ಪಂ.ಇ.ಒ.ಕೆ.ವಿ.ಭಾಸ್ಕರ್, ಜಿ.ಪಂ.ಸದಸ್ಯೆ ವೆಂಕಟನಾರಮ್ಮ ಇದ್ದರು.

ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗು ತಾಲೂಕು ಪಂಚಾಯಿತಿ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿದ್ದವು.

LEAVE A REPLY

Please enter your comment!
Please enter your name here