ವಾಸವಿ ಜಯಂತೋತ್ಸವ

1
441

ಬಳ್ಳಾರಿ /ಹೊಸಪೇಟೆ ಮರಿಯಮ್ಮನಹಳ್ಳಿ : ಪಟ್ಟಣದ ಆರ್ಯ ವೈಶ್ಯ ಸಮಾಜದಿಂದ ಇಂದು ತಮ್ಮ ಕುಲದೇವತೆ ವಾಸವಿಮಾತೆಯ ಜಯಂತಿ ಮತ್ತು ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ದ ವಾರ್ಷಿಕೋತ್ಸವ ವನ್ನು ನಗರೇಶ್ವರ ದೇವಸ್ಥಾನ ದಲ್ಲಿ ಶುಕ್ರವಾರ ನಡೆಯಿತು . ಇದರ ಅಂಗವಾಗಿ ಉಭಯ ದೇವರು ಗಳಿಗೆ ಅಭಿಷೇಕ , ಕುಂಕುಮಾರ್ಚನೆ , ಲಲಿತಸಹಸ್ರನಾಮಾವಳಿ , ಸುಮಂಗಲಿಯರಿಂದ ಕಳಸತರವುದು , , ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು . ಅಲ್ಲದೆ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ದ ವಾರ್ಷಿಕೋತ್ಸವ ದ ನಿಮಿತ್ತ ಶ್ರೀ ಲಕ್ಷ್ಮೀನಾರಾಯಣ ಹೋಮ ನಡೆಯಿತು , ಸಂಜೆ ವಾಸವಿ ಕನ್ಯಕಾಪರಮೇಶ್ವರಿ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಯಾಗಿ ನಡೆಯಿತು. ಈ ಸಂದರ್ಭದಲ್ಲಿ ಸಮಾಜದ ಮುಖಂಡ ರಾದ ಎಂ . ವಿಶ್ವ ನಾಥಶೆಟ್ಟಿ , ಎಸ್ . ರಾಮಮೂರ್ತಿ , ಜಿ . ಸತ್ಯನಾರಾಯಣ , ಡಿ . ಶ್ರೀ ನಿವಾಸ ಶೆಟ್ಟಿ , ಐ . ನರಸಿಂಹ ರಾವ್ , ಐ . ವೆಂಕಟರಮಣ , ಕುಪ್ಪಾರಾಘವೇಂದ್ರ , ಜಿ .ವಿ.ರಮೇಶ್ , ವಾಸವಿಯುವಜನಸಂಘ , ವಾಸವಿಮಹಿಳಾ ಸಮಾಜ ಪದಾಧಿಕಾರಿಗಳು ಭಾಗಿಯಾಗಿದ್ದರು .

1 COMMENT

LEAVE A REPLY

Please enter your comment!
Please enter your name here