ಕೆಸಿಆರ್ ಜನ್ಮ ದಿನಾಚರಣೆ

0
215

ಕೋಲಾರ : ಕೆ ಸಿ ರೆಡ್ಡಿ ಸರೋಜಮ್ಮ ವೆಲ್ಫೇರ್ ಫೌಂಡೇಶನ್ ವತಿಯಿಂದ ಕರ್ನಾಟಕದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿರವರ ೧೧೬ನೇ ಜನ್ಮ ದಿನಾಚರಣೆ ಆಚರಿಸುತ್ತಿರುವ ಬಗ್ಗೆ. ವಿಧಾನಸೌಧದ ನಿರ್ಮಾಣಕ್ಕೆ ಮೊದಲ ಹೆಜ್ಜೆಯಿಟ್ಟ, ಮೈಸೂರು ಚಲೋ ಸತ್ಯಾಗ್ರಹ ಮಾಡಿ ಕರ್ನಾಟಕಕ್ಕೆ ರಾಜಮನೆತನದ ಆಡಳಿತಾಧಿಕಾರ ಅಂತ್ಯಗೊಳಿಸಿ ,ಪ್ರಜಾಸತ್ತಾತ್ಮಕ ರಾಜ್ಯವನ್ನಾಗಿಸಲು ಶ್ರಮಿಸಿದ ವ್ಯಕ್ತಿ ಕೆ.ಸಿ.ರೆಡ್ಡಿ ರವರು. ಅಂತಹ ವ್ಯಕ್ತಿಯ ಪುತ್ಥಳಿ ಸಹಾ ಇದುವರೆಗೂ ನಿರ್ಮಾಣ ಮಾಡುವ ಕುರಿತಾಗಲಿ,ಅವರ ಸಮಾಧಿ ಅಭಿವೃದ್ಧಿ ಪಡಿಸುವ ಕ್ರಮಕ್ಕಾಗಲಿ ಇದುವರೆಗೂ ಯಾವುದೇ ಸರ್ಕಾರಗಳು ಮುಂದಾಗಿಲ್ಲ.ತಮ್ಮ ಸ್ವಂತ ದುಡಿಮೆಯ ಹಣದಲ್ಲಿ ಕೆ.ಸಿ.ರೆಡ್ಡಿಸರೋಜಮ್ಮ ಹೆಸರಿನಲ್ಲಿ ಸಮಾಧಿಯ ಪಕ್ಕದಲ್ಲೇ ಗ್ರಂಥಾಲಯ ಸ್ಥಾಪಿಸಿ,ಸುಮಾರು ೭.೫ ಲಕ್ಷ ರೂ. ಮೌಲ್ಯದ ಪುಸ್ತಕ ಸಾಮಗ್ರಿಗಳು, ತಂತ್ರಜ್ಞಾನ ವ್ಯವಸ್ಥೆ ಮುಂತಾದ ಎಲ್ಲ ವಿದ್ಯಾರ್ಥಿಗಳಿಗೂ ಅನುಕೂಲ ವಾಗುವಂತೆ ಮಾಡಿದ್ದೇವೆ.ಇನ್ನು ಹೆಚ್ಚಿನ ಪುಸ್ತಕಗಳು ಬೇಕಾದಲ್ಲಿ ಒದಗಿಸುತ್ತೇನೆ ಎಂದು ಕೆ.ಸಿ.ರೆಡ್ಡಿರವರ ಮೊಮ್ಮಗಳು ವಸಂತಕವಿತಾ ತಿಳಿಸಿದರು. ಈ ಸಂದರ್ಭದಲ್ಲಿ ಟ್ರಸ್ಟಿನ ಸದಸ್ಯೆ ರಾಜಮ್ಮ, ಮಾಧುರಿ,ನಡುಪಲ್ಲಿ ಕೃಷ್ಣಮೂರ್ತಿ ಹಾಜರಿದ್ದರು.

LEAVE A REPLY

Please enter your comment!
Please enter your name here