ವೃದ್ದನ ಮೇಲೆ ದರ್ಪತೋರಿದನೇ ಪೊಲೀಸಪ್ಪ?

1
714

ಚಿಕ್ಕಬಳ್ಳಾಪುರ/ಚಿಂತಾಮಣಿ: ನಗರದ ಚೇಳೂರ್ ವೃತ್ತದಲ್ಲಿ ಬುದ್ದಿಮಾತು ಹೇಳಿದ ವೃದ್ದನ ಮೇಲೆ ಹಲ್ಲೆ ಮಾಡಿದ ಪೊಲೀಸಪ್ಪ,.

ಚೇಳೂರ್ ವೃತ್ತದಲ್ಲಿ ಟ್ರಾಫಿಕ್ ಜಾಮ್ ಆಗಿ ದ್ವಿಚಕ್ರ ವಾಹನ ಒಂದು ಸಿಗ್ನಲ್ ಜಂಪ್ಆಗಿ ಮುಂದೆ ಬಂದಕಾರಣ ಹೆಡ್ ಕಾಂಸ್ಟೇಬಲ್ ಕೃಷ್ಣಪ್ಪ ವಾಹನ ನಿಲ್ಲಿಸಿ ಗುರಾಯಿಸಿ ನೋಡಿದಾಗ ವಾಹನ ಸವಾರ ಶಂಕರ್40 ವರ್ಷ ವಾಹನದ ಕೀ ತಗೆಯುವಾಗ ಮಾತಿನ ಚಕ್ಕಮಾಕ್ಕಿ ಯಿಂದ ಬಹಳ ಟ್ರಾಫಿಕ್ ಆಗಿದ್ದರಿಂದ ಕೈಂ ಸಬ್ ಇನ್ಸ್‌ಪೆಕ್ಟರ್ ನರಸಿಂಹ ಮೂರ್ತಿ ಸ್ಥಳಕ್ಕೆ ಧಾವಿಸಿ ನೋಡಿದಾಗ ವಾಹನ ಸವಾರಿಗೆ ಮತ್ತು ಹೆಡ್ ಕಾಸ್ಟೇಬಲ್ ಕೃಷ್ಣಪ್ಪ ಅವರಿಗೆ ಮಾತಿನ ಚಕಮುಕಿ ಆಗುತ್ತಿತ್ತು .
ಅಲ್ಲಿ ನಿಂತಿದ್ದ ವಿನೋಬ ಕಾಲೋನಿಯ ನಾರಾಯಣಪ್ಪ 70 ವರ್ಷ ವಯಸ್ಸಿನ ವೃದ್ದ ಬುದ್ದಿಮಾತು ಹೇಳಿದ್ದಕ್ಕೆ ಹಿರಿಯರೆಂಬ ಸೌಜನ್ಯ ವನ್ನೂ ಮರೆತು ಕಪಾಲಕ್ಕೆ ಹೊಡೆದು ಹಲ್ಲೆಮಾಡಿದ ಕ್ರೈಂ ಸಬ್ ಇನ್ಸ್‌ಪೆಕ್ಟರ್ ನರಸಿಂಹ ಮೂರ್ತಿಯ ದೌರ್ಜನ್ಯವನ್ನು ಖಂಡಿಸುತ್ತಿ ರುವ ದಲಿತ ಸಂಘಟನೆಗಳು ಹಾರ್ಟ್ಪ್ ಪೇಷೆಂಟ್ ಎಂದು ಸ್ಥಳೀಯರು ಇನ್ಸೆಪೆಕ್ಟರ್ ಗಮನಕ್ಜೆ ತಂದರೂ ಲೆಕ್ಕಿಸದೆ ಏಕಾಏಕಿ ಹಲ್ಲೆಮಾಡಿದ ಪೊಲೀಸರನ್ನು ಈ ಕೂಡಲೇ ಎತ್ತಂಗಡಿ ಮಾಡುವಂತೆ ಒತ್ತಯಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇಲ್ಲವಾದಲ್ಲಿ ಪ್ರತಿಭಟನೆಗೂ ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ.

1 COMMENT

LEAVE A REPLY

Please enter your comment!
Please enter your name here