ಕೆರೆಯ ಹೂಳೆತ್ತುವಂತೆ ಒತ್ತಾಯ

0
174

ಬಳ್ಳಾರಿ /ಹೊಸಪೇಟೆ : ತಾಲೂಕಿನ ಕಮಲಾಪುರ ಪಟ್ಟಣದಲ್ಲಿರುವ ಕೆರೆಯ ಹೂಳನ್ನು ಎತ್ತುವಂತೆ ಒತ್ತಾಯಿಸಿ ಹುಚ್ಚವ್ವನಹಳ್ಳಿ ಮಂಜುನಾಥ ಬಣದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಕಾರ್ಯಕರ್ತರು ಸಹಾಯಕ ಆಯುಕ್ತ ಪ್ರಶಾಂತಕುಮಾರ್ ಮಿಶ್ರಾ ಅವರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.

ನಂತರ ಜಿಲ್ಲಾಧ್ಯಕ್ಷ ದೇವರಮನಿ ಮಹೇಶ ಮಾತನಾಡಿ, ತಾಲೂಕಿನ ಕಮಲಾಪುರ ಕೆರೆಯಲ್ಲಿ ಅಂದಾಜು 7-8 ಟಿಎಂಸಿ ನೀರಿನ ಸಾಮಾಥ್ರ್ಯ ಹೊಂದಿದ್ದ ಕೆರೆಯು ಇಂದು ಹೂಳು ತುಂಬಿದ್ದರಿಂದ 4 ಟಿಎಂಸಿ ಸಾಮಾಥ್ರ್ಯ ಹೊಂದಿದೆ. ಇದರಿಂದ ಕೆರೆಯ ನೀರನ್ನೇ ನೆಚ್ಚಿಕೊಂಡಿದ್ದ ಕಡೇ ಭಾಗದ ರೈತರ ಪರಿಸ್ಥಿತಿ ಸಂಕಷ್ಟದಲ್ಲಿದೆ. ಸುಮಾರು 2600 ರಿಂದ 2800 ಎಕರೆ ಪ್ರದೇಶಕ್ಕೆ ಪೂರೈಕೆಯಾಗುತ್ತಿದ್ದ ನೀರು ಹೂಳು ತುಂಬಿದ್ದರಿಂದ ಪೂರೈಕೆಯಾಗದೇ ರೈತರಿಗೆ ತುಂಬಾ ಸಮಸ್ಯೆಯಾಗಿದೆ. ಕೂಡಲೇ ಸರ್ಕಾರ ಹಾಗು ಜಿಲ್ಲಾಡಳಿತ ಕ್ರಮ ಕೈಗೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.ರೈತ ಮುಖಂಡರಾದ ಎಂ.ಪ್ರಕಾಶ್, ಎನ್.ವೆಂಕಟೇಶ್ ಇದ್ದರು.

LEAVE A REPLY

Please enter your comment!
Please enter your name here