ಉಚಿತ ಬೇಸಿಗೆ ಶಿಬಿರ

0
213

ಚಿಕ್ಕಬಳ್ಳಾಪುರ /ಶಿಡ್ಲಘಟ್ಟ : ನಗರದ ನೆಹರೂ ಕ್ರೀಡಾಂಗಣದಲ್ಲಿ ಭಗತ್ ಸಿಂಗ್ ಅಥ್ಲೆಟಿಕ್ ಅಸೋಸಿಯೇಷನ್ ಮತ್ತು ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಚಿಕ್ಕಬಳ್ಳಾಪುರ ಇವರ ಸಂಯುಕ್ತ ಆಶ್ರಯದಲ್ಲಿ ೨೦ ದಿನಗಳ ಉಚಿತ ಬೇಸಿಗೆ ಶಿಬಿರವನ್ನು ನೆಡೆಯುತ್ತಿದ್ದು,

ಪ್ರತಿದಿನ ಸಂಜೆ ೫ ಗಂಟೆಯಿಂದ ನಡೆಯುವಂತಹ ಈ ಶಿಬಿರದಲ್ಲಿ ಮಕ್ಕಳಿಗೆ ನಾನಾ ಕ್ರೀಡಾ ಚಟುವಟಿಕೆಗಳನ್ನು ನಾಲ್ಕು ಉತ್ತಮ ಕೋಚರ್ ಗಳ ಸಹಾಯದಿಂದ  ಹೇಳಿಕೊಡುವುದರೊಂದಿಗೆ ಬೆಳೆಯುವ ಮತ್ತು ಕಲಿಯುವ ಎರಡು ಗಂಟೆ ಕಬ್ಬಡಿ, ಖೋಖೊ, ಓಟ,ವಾಲಿಬಾಲ್, ಎತ್ತರ ಜಿಗಿತ, ಉದ್ದಜಿಗಿತ, ಇನ್ನಿತರ ಕ್ರೀಡೆಗಳನ್ನು ಮಕ್ಕಳಿಗೆ ಕಲಿಸಲಾಗುತ್ತಿದೆ.
100 ಕ್ಕೂ ಹೆಚ್ಚು ಮಕ್ಕಳು ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಕ್ರೀಡಾ ಪಟು ಜಯಂತಿ ಗ್ರಾಮ ನಾರಾಯಣಸ್ವಾಮಿ ಹೇಳಿದರು.

LEAVE A REPLY

Please enter your comment!
Please enter your name here