ಕೋಲಾರದಲ್ಲಿ ಬಳ್ಳಾರಿ ಗಾಲಿ..

0
266

ಕೋಲಾರ: ಮಾಜಿ ಸಚಿವ ಗಾಲಿ ಜರ್ನಾಧನ ರೆಡ್ಡಿ ಬೇಟಿ ಜಿಲ್ಲೆಯ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಕುರುಡುಮಲೆ ವಿನಾನಾಯಕ ದೇವಾಲಯಕ್ಕೆ ಬೇಟಿ ರಾಜ್ಯರಾಜಕಾರಣಕ್ಕೆ ಬರುವುದು ಪಕ್ಷದ ಮುಖಂಡರಿಗೆ ಬಿಟ್ಟಿದ್ದು

ಕೋಲಾರ ಜಿಲ್ಲೆಯಿಂದ ಸ್ಪರ್ಧಿಸುವ ಇಂಗಿತ ನಿರಾಕರಣೆ
ಆರೋಪ ಮುಕ್ತವಾಗುತ್ತಿರುವ ಹಂತದಲ್ಲಿ ಮೋದಿಗೆ ಹಣ ಕೊಟ್ಟ ವದಂತಿ ನನ್ನ ಮೇಲಿನ ಆರೋಪದಿಂದ ಮುಕ್ತ ಸಹಿಸದ ವಿರೋಧಿಗಳ ಕುತಂತ್ರ ರಾಜ್ಯ ಬಿಜೆಪಿ ಯಲ್ಲಿ ಕಲಹ ಬಗ್ಗೆ ನಾನು ಪ್ರತಿಕ್ರೀಯೆ ನೀಡುವುದಿಲ್ಲ.

ಬಿಜೆಪಿ ಮಾಜಿ ಸಚಿವ ಗಾಲಿ ಜರ್ನಾಧನ ರೆಡ್ಡಿ ಕೋಲಾರಕ್ಕೆ ಬೇಟಿ ನೀಡಿದ್ದರು. ಜಿಲ್ಲೆಯ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಹಾಗೂ ಮುಳಬಾಗಿಲು ತಾಲ್ಲೂಕು ಕಗ್ಗನಹಳ್ಳಿ ಗ್ರಾಮದಲ್ಲಿ ದೇವತಾ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು,ನಂತರ ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆಸಿ ರೆಡ್ಡಿ ಅವರ ಜನ್ಮ ದಿನ ಅಂಗವಾಗಿ ಅವರ ಸಮಾಧಿ ಬಳಿ ತೆರಳಿ ನಮನ ಸಲ್ಲಿಸುವ ಕಾರ್ಯಕ್ರಗಳಲ್ಲಿ ರೆಡ್ಡಿ ಬಾಗಿಯಾಗಲ ಜಿಲ್ಲೆಗೆ ಆಗಮಿಸಿದ್ದರು.
ಜಿಲ್ಲೆಗೆ ಕಾಲಿಟ್ಟ ಮೊದಲು ಕುರುಡುಮಲೆ ಶ್ರೀ ವಿನಾಯಕ ದೇವಾಲಯಕ್ಕೆ ಬೇಟಿ ನಿಡಿ ದೇವರಿಗೆ ನಮಸ್ಕಾರ ಮಾಡಿ ಗುಡಿಯನ್ನು ಪ್ರದಕ್ಷಣೆ ಮಾಡಿದರು.ಇದೇ ವೇಳೆ ಮಾತನಾಡಿದ ರೆಡ್ಡಿ ತಾನು ರಾಜ್ಯರಾಜಕಾರಣಕ್ಕೆ ಬರುವುದು ಪಕ್ಷದ ಮುಖಂಡರಿಗೆ ಬಿಟ್ಟಿದ್ದು, ನಾನು ಪಕ್ಷದ ನಿಷ್ಟವಂತ ಕಾರ್ಯಕರ್ತ.ಮುಂಬರುವ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯಲ್ಲಿ ಸ್ಪರ್ಧೇ ಮಾಡುವ ಇಂಗಿತವನ್ನು ರೆಡ್ಡಿ ನಿರಾಕರಣೆ ಮಾಡಿದ್ದಾರೆ. ಅಲ್ಲದೆ ಮೋದಿಗೆ ರೆಡ್ಡಿ ಐದು ನೂರು ಕೋಟಿ ನೀಡಿದ್ದಾರೆ ಎಂದು ದೂರಿದ ಕುಮಾರಸ್ವಾಮಿ ಮಾತಿಗೆ ರೆಡ್ಡಿ ತಿರುಗೇಟು ನೀಡಿದ್ದಾರೆ. ಕಳಂಕದಿಂದ ಮುಕ್ತನಾಗುತ್ತಿದ್ದೇನೆ. ನನ್ನ ಒಂದು ಸಾವಿರ ಕೋಟಿ ಆಸ್ತಿ ಮೌಲ್ಯ ಮತ್ತೇ ವಾಪಸ್ಸು ಆಗುತ್ತಿದೆ.ಇದನ್ನು ಸಹಿಸದ ಕೆಲ ವಿರೋಧಿಗಳು ಈ ರೀತಿ ಹೇಳಿಕೆ ನೀಡುತ್ತಾ ಕುತಂತ್ರ ಮಾಡುತ್ತಿದ್ದಾರೆ. ಇನ್ನೂ ರಾಜ್ಯ ಬಿಜೆಪಿ ಅಂತರಿಕ ಕಲಹದ ಬಗ್ಗೆ ತಾನೂ ಪ್ರತಿಕ್ರೀಯೆ ನೀಡುವುದಿಲ್ಲ ಎಂದು ಹೇಳಿದರು.

LEAVE A REPLY

Please enter your comment!
Please enter your name here