68,05 ಲಕ್ಷ .ಉಳಿತಾಯ ಬಜೆಟ್ ಮಂಡನೆ.

0
193

ಬಳ್ಳಾರಿ /ಹೊಸಪೇಟೆ : ಇಲ್ಲಿನ ನಗರಸಭೆಯಲ್ಲಿ ಸೋಮವಾರ 68,05, 809 ರೂ. ಮೊತ್ತದ ಉಳಿತಾಯ ಬಜೆಟ್‌ನ್ನು ನಗರಸಭೆ ಅಧ್ಯಕ್ಷ ಎನ್. ಅಬ್ದುಲ್ ಖದೀರ್ ಮಂಡಿಸಿದರು.

ನಗರಸಭೆಯ ಸಭಾಂಗಣದಲ್ಲಿ ನಡೆದ ಸಾಮಾನ್ಯಸಭೆಯಲ್ಲಿ 2017-18ನೇ ಸಾಲಿನ ಆಯ ವ್ಯಯವನ್ನು ಮಂಡಿಸಿದ ಅವರು, ರಾಜಸ್ವ ಪಾವತಿಗಳು 22,15,30,703 ರೂ. ಹಾಗೂ ಬಂಡವಾಳ ಪಾವತಿಗಳು 17,08,48,562 ರೂ. ಮತ್ತು ಅಸಾಮಾನ್ಯ ಪಾವತಿಗಳು 13,64,46,926 ರೂ. ಆಗಿದೆ. ನಗರಸಭೆಗೆ ಒಟ್ಟು 53,56,32000 ರೂ. ಆದಾಯ ನಿರೀಕ್ಷಿಸಲಾಗಿದ್ದು, ಒಟ್ಟು ಪಾವತಿಗಳು 52,88,26,191 ರೂ. ಆಗಲಿದ್ದು, 68,05,809 ರೂ. ಉಳಿತಾಯವಾಗಲಿದೆ ಎಂದು ಘೋಷಿಸಿದರು.

ಎಸ್‌ಎಫ್‌ಸಿ ವೇತನ ಅನುದಾನಗಳಿಂದ 6,41,21000 ರೂ. ದೊರೆಯಲಿದೆ. ಕಟ್ಟಡಗಳ ಬಾಡಿಗೆ, ವಾಣಿಜ್ಯ ಮಳಿಗೆಗಳಿಂದ 10,00,000 ರೂ.,ಕಟ್ಟಡ ಕಾಯ್ದೆಗೆ ಸಂಬಂಧಿಸಿದ ಶುಲ್ಕಗಳು 90,00,000 ರೂ., ವ್ಯಾಪಾರ ಪರವಾನಗಿ ಶುಲ್ಕಗಳು 26,00,000 ರೂ., ಶ್ರೀರಾಮುಲು ಉದ್ಯಾನ ವನದ ಪ್ರವೇಶ ದರ 6,00,000 ರೂ., ಮುದ್ರಾಂಕ ಶುಲ್ಕ, 15,00,000 ರೂ. ಮತ್ತು ಬ್ಯಾಂಕ್ ಖಾತೆಗಳಿಂದ ಬಂದ ಬಡ್ಡಿ 42,00,000 ರೂ. ಮತ್ತು ಆಸ್ತಿ ತೆರಿಗೆ ಆದಾಯ: ನಿವ್ವಳ 3,70,00,000 ರೂ. ಖಾತಾ ಬದಲಾವಣೆ ಶುಲ್ಕಗಳು 1,15,00,000 ರೂ., ಸ್ವಚ್ಛ ಭಾರತ್ ಮಿಷನ್ 2,50,00,000 ರೂ., ಅಮೃತ ಯೋಜನೆ 31,00,000, ಕೇಂದ್ರ ಹಣಕಾಸು ಆಯೋಗದ (14ನೇ ಹಣಕಾಸು) ಅನುದಾನ 9,54,10,000 ರೂ., ರಾಜ್ಯ ಹಣಕಾಸು ಆಯೋಗದ ಅನುದಾನ 11,90,85,000 ರೂ., ರಾಜ್ಯ ಸರಕಾರದಿಂದ ನಿಶ್ಚಿತ ಉದ್ದೇಶಗಳಿಗಾಗಿ ಬಂದ ಅನುದಾನ 80,00,000 ರೂ., ಎಸ್‌ಎಫ್‌ಸಿ ಕುಡಿವ ನೀರು 40,00,000 ಲಕ್ಷ ರೂ. ಜಮೆಯಾಗಲಿವೆ ಎಂದು ತಿಳಿಸಿದರು.

ವೇತನಗಳು, ಭತ್ಯೆ, ಸೌಲಭ್ಯಗಳಿಗೆ 5,98,21,000 ರೂ. ಪಾವತಿಸಬೇಕಿದೆ. ಕೂಲಿಗಳು, ಸೇವಾಂತ್ಯದ ಹಾಗೂ ಪಿಂಚಣಿ ಸೌಲಭ್ಯಗಳು 55,00,000 ರೂ., ಟೆಂಡರ್ ಜಾಹೀರಾತು ಮತ್ತು ಇತರೆ ಪ್ರಚಾರಕ್ಕೆ 15,00,000, ಇಂಧನಕ್ಕಾಗಿ ಕೆಇಬಿಗೆ 4,42,21,000 ರೂ. ಪಾವತಿ, ದುರಸ್ತಿ ಮತ್ತು ನಿರ್ವಹಣೆ, ಮೂಲಭೂತ ಸೌಕರ್ಯಗಳ ಆಸ್ತಿಗಳು: ಒಳ ಚರಂಡಿ ವ್ಯವಸ್ಥೆ 18,00,000, ಶ್ರೀರಾಮುಲು ಉದ್ಯಾನಕ್ಕೆ 16,00,000 ರೂ., ರಸ್ತೆಗಳು ಕಲ್ಲು ಹಾಸುಗಳು ಮತ್ತು ಪಾದಚಾರಿ ಮಾರ್ಗಗಳು 3,17,08,562 ರೂ., ಮಳೆ ನೀರಿನ ಚರಂಡಿಗಳು, ಸ್ವಚ್ಛ ಭಾರತ್ ಮಿಷನ್: ಶೌಚಾಲಯಗಳು 2,50,00,000 ರೂ. ನೀರು ವಿತರಣಾ ವ್ಯವಸ್ಥೆಗೆ 2,49,86,000 ರೂ., ಒಳ ಚರಂಡಿ ಮಾರ್ಗಗಳಿಗೆ 1,24,93,000 ರೂ., ಉದ್ಯಾನಗಳಿಗೆ 62,46,000, ಪ.ಜಾತಿ, ಪ.ಪಂಗಡ ಶೇ.24.10 ಅಭಿವೃದ್ಧಿ ನಿಧಿಗೆ ಎಸ್‌ಎಫ್‌ಸಿ ಅನುದಾನ 2,86,99,000 ರೂ., ಪ.ಜಾತಿ, ಪ.ಪಂಗಡ ಶೇ.24.10 ಅಭಿವೃದ್ಧಿ ನಿಧಿಗೆ ಎಸ್‌ಎಫ್‌ಸಿ ನಗರಸಭೆ ನಿಧಿ 34,00,000 ರೂ., ಗ್ರಂಥಾಲಯ ಕರ 19,98,000 ರೂ., ಭಿಕ್ಷುಕರ ಕರ 9,99,000 ರೂ., ಕಾರ್ಮಿಕ ಕಲ್ಯಾಣ ಕರ 16,00,000 ರೂ., ಪೌರ ಕಾರ್ಮಿಕರ ವೇತನ ಬಾಕಿ ಮೊತ್ತ ಎಸ್ಕ್ರೋ ಖಾತೆ ಮೂಲಕ ಪಾವತಿಗಾಗಿ ಎಸ್‌ಎಫ್‌ಸಿ-ಮುಕ್ತ ನಿಧಿ ಅನುದಾನದಲ್ಲಿ 1,45,59,926 ರೂ. ಮೀಸಲಿಡಲಾಗಿದೆ ಎಂದರು.

2017-18ನೇ ಸಾಲಿನ ಆಯ-ವ್ಯಯ ಪೈ ನಕ್ಷೆ ನೋಟದ ಪ್ರಕಾರ ಸಾಮಾನ್ಯ ಜಮೆಗಳು ಶೇ.20, ಅನುದಾನಗಳು ಶೇ.26, ಅಸಾಮಾನ್ಯ ಜಮೆಗಳು ಶೇ.3, ರಾಜಸ್ವ ಪಾವತಿಗಳು ಶೇ.21, ಬಂಡವಾಳ ಪಾವತಿಗಳು ಶೇ.16, ಅಸಾಮಾನ್ಯ ಪಾವತಿಗಳು ಶೇ.13, ಉಳಿತಾಯ ಶೇ.1ರಷ್ಟಿದೆ ಎಂದು ಸಭೆಯಲ್ಲಿ ಮಂಡಿಸಿದರು.

ಶ್ರೀರಾಮುಲು ಉದ್ಯಾನದಿಂದ ವಾರ್ಷಿಕ 6ಲಕ್ಷ ರೂ. ಆದಾಯ ಬರುತ್ತಿದ್ದು, ನಿರ್ವಹಣೆ ಜಾಸ್ತಿಯಾಗಿದ್ದು, ಕೂಡಲೇ ಹೊರ ಗುತ್ತಿಗೆ ನೀಡಬೇಕು ಎಂದು ಸದಸ್ಯರು ಆಗ್ರಹಿಸಿದರು.

ಸದಸ್ಯ ಚಿದಾನಂದ್ ಮಾತನಾಡಿ, ನಗರಸಭೆಗೆ ಸಂಬಂಧಿಸಿದ ನ್ಯಾಯಾಲಯದಲ್ಲಿನ ಮೊಕದ್ದಮೆಗಳಿಗೆ ಹೆಚ್ಚಿನ ಹಣ ವ್ಯಯ ಮಾಡಲಾಗುತ್ತಿದೆ. ಇದುವರೆಗೆ ನಗರಸಭೆ ಯಾವುದೇ ವ್ಯಾಜ್ಯದಲ್ಲಿ ಗೆಲುವು ಕಂಡಿಲ್ಲ. ಆದ್ದರಿಂದ ವಕೀಲರನ್ನು ನಗರಸಭೆ ಬದಲಿಸಿಕೊಳ್ಳಬೇಕು. ಆದಷ್ಟು ನ್ಯಾಯಾಲಯದಲ್ಲಿನ ವ್ಯಾಜ್ಯಗಳನ್ನು ತ್ವರಿತ ಬಗೆಹರಿಸಿಕೊಳ್ಳಬೇಕು. ನಗರಸಭೆಯ ಆಸ್ತಿಯನ್ನು ಉಳಿಸಬೇಕು. ಉತ್ತಮ ವಕೀಲರನ್ನು ನೇಮಿಸಬೇಕು ಎಂದರು.

ಸದಸ್ಯ ಗೋವಿಂದರಾಜ್ ಮಾತನಾಡಿ, ಸಾಮಾನ್ಯಸಭೆಗಳಿಗೆ ಅಧಿಕಾರಿಗಳೇ ಗೈರು ಹಾಜರಾಗುತ್ತಿದ್ದಾರೆ. ಈ ಬಗ್ಗೆ ಪೌರಾಯುಕ್ತರು ತಲೆ ಕೆಡಸಿಕೊಳ್ಳುವುದಿಲ್ಲ. ಸಭೆಯಲ್ಲಿ ಸದಸ್ಯರಿಗೂ ಗೌರವ ನೀಡುವುದಿಲ್ಲ ಎಂದು ಖಾರವಾಗಿ ಹೇಳಿದರು.

ಆಗ ಪೌರಾಯುಕ್ತ ಎಂ.ಪಿ. ನಾಗಣ್ಣ ಪ್ರತಿಕ್ರಿಯಿಸಿ, ಅಧಿಕಾರಿಗಳು ನೀಡುವ ಮಾಹಿತಿ ತಮಗೆ ಒಪ್ಪಿತವಾದರೆ, ಒಪ್ಪಿಕೊಳ್ಳಿ. ಇಲ್ಲವಾದರೆ ಬಿಟ್ಟು ಬಿಡಿ ಎಂದರು. ಇದನ್ನು ಆಲಿಸಿದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಅಧ್ಯಕ್ಷ ಅಬ್ದುಲ್ ಖದೀರ್ ಮಾತನಾಡಿ, ಪೌರಾಯುಕ್ತ ಸ್ಥಾನಕ್ಕೆ ಎಂ.ಪಿ. ನಾಗಣ್ಣ ಅವರು ಅರ್ಹರಲ್ಲ. ಸಮರ್ಪಕ ಮಾಹಿತಿ ಕೂಡ ನೀಡುವುದಿಲ್ಲ ಎಂದರು. ನಗರಸಭೆ ಎಇಇ ಸಯ್ಯದ್ ಮನ್ಸೂರ್ ಮಾತನಾಡಿ, ನಗರಸಭೆಗೆ ಎಲ್ಲಾ ಸಂಬಂಧಿಸಿದ ಮಾಹಿತಿಗಳನ್ನು ನೀಡಲಾಗುವುದು. ಸದಸ್ಯರು ಸಹಕರಿಸಬೇಕು ಎಂದರು. ಆಗ ಸಭೆ ಶಾಂತಿಗೆ ಮರಳಿತು.

ಸದಸ್ಯ ಕೆ. ಮಲ್ಲಪ್ಪ, ಡಿ. ವೇಣುಗೋಪಾಲ್, ಬೆಲ್ಲದ್ ರವೂಫ್, ಕಣ್ಣಿ ಉಮಾದೇವಿ, ಗೌಸಿಯಾ ಬೇಗಂ, ಕೆ. ಬಡಾವಲಿ, ಎಂ.ಎಸ್. ರಘು, ಗುಜ್ಜಲ ನಿಂಗಪ್ಪ, ಬಸವರಾಜ್, ಗುಡುಗಂಟಿ ಮಲ್ಲಿಕಾರ್ಜುನ, ಕೆ. ಗೌಸ್, ರೂಪೇಶ್ ಕುಮಾರ, ಕುಲ್ಲಾಯಪ್ಪ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here