ಶಾಲೆ ಮಕ್ಕಳಿಗೆ ಚಿನ್ನದ ಪದಕ.

0
248

ಬಳ್ಳಾರಿ /ಹೊಸಪೇಟೆ: ಮಂಡ್ಯದಲ್ಲಿ ಇತ್ತೀಚಿಗೆ ಜರುಗಿದ ಸ್ಪೆಷಲ್ ಓಲಿಂಪಿಕ್ಸ್ ರಾಜ್ಯಮಟ್ಟದ ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ನಗರದ ಸಾಧ್ಯ ವಸತಿಯುತ ವಿಶೇಷ ಶಾಲೆಯ ಮಕ್ಕಳು ಚಿನ್ನದ ಪದಕವನ್ನು ಗಳಿಸಿದ್ದಾರೆ.

ಬಾಲಕರ ವಿಭಾಗದಲ್ಲಿ ಸುಶಾಂತ್ ಬೋಸ್, ಪೈಜಾನ್ ಅಹಮ್ಮದ್, ಬಾಲಕಿಯರ  ವಿಭಾಗದಲ್ಲಿ ವೀಣಾ ವಿಜೇಂದ್ರ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಪಡೆಯುವ ಮೂಲಕ ಬಳ್ಳಾರಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಜುಲೈ 9 ರಿಂದ 14 ರವರೆಗೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆಯುವ ರಾಷ್ಟ್ರ್ರೀಯಮಟ್ಟದ ಸ್ಪೆಷಲ್ ಓಲಿಂಪಿಕ್ಸ್‌ನ ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಸಾಧ್ಯ ವಸತಿಯುತ ವಿಶೇಷ ಶಾಲೆಯ ಸುಶಾಂತ್ ಬೋಸ್ ಮತ್ತು  ಮಹಿಳಾವಿಭಾಗಲ್ಲಿ ವೀಣಾ ವಿಜೇಂದ್ರ ಆಯ್ಕೆಯಾಗಿದ್ದಾರೆ. ಇವರು ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಲೆಂದು ವಿಶೇಷ ಶಾಲೆಯ ಸಿಬ್ಬಂದಿವರ್ಗ, ಪೋಷಕರು ಹಾರೈಸಿದ್ದಾರೆ.

ರಾಷ್ಟ್ರೀಯ ಪವರ್‌ಲಿಪ್ಟಿಂಗ್ ಕ್ರೀಡಾಪಟು ದಯಾನಂದ್ ಕಿಚಿಡಿ, ಉತ್ತಮ ತರಬೇತಿ ನೀಡುತ್ತಿದ್ದು, ಮಕ್ಕಳನ್ನು ಅಂತಾರಾಷ್ಟ್ರ್ರೀಯ ಕ್ರೀಡಾ ಪಟುಗಳಾನ್ನಾಗಿ ರೂಪಿಸಲು ಶ್ರಮಿಸುತ್ತಿದ್ದಾರೆ ಎಂದು ಸಾಧ್ಯ ವಿಶೇಷ ಮಕ್ಕಳ ಶಾಲೆ ಸಂಸ್ಥಾಪಕರು ಮತ್ತು ಮುಖ್ಯಸ್ಥರಾದ ಆರತಿ ಕೆ.ಟಿ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here