ಕೆರೆಯನ್ನು ಮುಚ್ಚಿ ಉದ್ಯಾನವನ ಮಾಡಲು ಹೊರಟ ಶಾಸಕ..

0
122

ಮಂಡ್ಯ/ಮಳವಳ್ಳಿ: ಗೆಂಡೆಕೆರೆಯನ್ನು ಮುಚ್ಚಿ ಉದ್ಯಾನವನ ಮಾಡಲು ಹೊರಟಿರುವುದು ಖಂಡನೀಯ ಎಂದು ಮಾಜಿ ಶಾಸಕ ಡಾ.ಅನ್ನದಾನಿ ಆರೋಪಿಸಿದರು. ಮಳವಳ್ಳಿ ಪಟ್ಟಣ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ತಾಲ್ಲೂಕಿನ ಗುಂಡಾ ಆಡಳಿತ ನಡೆಯುತ್ತಿದೆ. ಉದ್ಯಾನವನ ಕ್ಕಾಗಿ ಎನ್ಇಎಸ್ ಬಡಾವಣೆ ಎರಡು ಪಾರ್ಕ್ ವಿದ್ದರೂ ಅದನ್ನು ಅಭಿವೃದ್ಧಿ ಪಡಿಸದೆ ಕೆರೆಯನ್ನುಮುಚ್ಚಿ ಪಾರ್ಕ್ ಮಾಡುವ ಅವಶ್ಯಕತೆ ಏನು ಎಂದು ಪ್ರಶ್ನಿಸಿದರು.

ಪುರಸಭೆ ಆಶ್ರಯ ಯೋಜನೆ ಯಡಿ ಹಕ್ಕುಪತ್ರ ವಿತರಣೆ ಮಾಡಿದ ಪಲಾನುಭವಿಗಳಿಗೆ ತಕ್ಷಣ ಖಾತೆ ಮಾಡಿಕೊಂಡುವಂತೆ ಒತ್ತಾಯಿಸಿದರು. ಗೋಷ್ಠಿಯಲ್ಲಿ ಮಾಲೇಗೌಡ, ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ಪುರಸಭೆ ಸದಸ್ಯರಾದ ಮೆಹಬೂಬ್ ಪಾಷ, ಮಹೇಶ,ನಂದಕುಮಾರ,.ನಾರಾಯಣ ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here