ದಲಿತರ ಸೌಲಭ್ಯಗಳು ಇತರರು ಪಡೆಯುತ್ತಿದ್ದಾರೆ..

0
182

ಬಳ್ಳಾರಿ:ಜಿಲ್ಲೆಯೂ ಸೇರಿದಂತೆ ರಾಜ್ಯದ ವಿವಿಧೆಡೆ ದಲಿತರಿಗೆ ಸಿಗಬೇಕಾದ ಸೌಲಭ್ಯಗಳನ್ನು ಇತರೆ ವರ್ಗದ ಜನರು ಪಡೆಯುತ್ತಿದ್ದಾರೆ. ದಲಿತರಲ್ಲದಿದ್ದರೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಅನ್ಯ ಕೋಮಿನ‌ ಜನರು ಪಡೆಯುತ್ತಿದ್ದಾರೆ. ಅಂಥವರ ಮಾಹಿತಿ ತಮಗೆ ಲಭ್ಯವಿದ್ದು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಕೆ.ರಾಮುಲಮ್ಮ ತಿಳಿಸಿದ್ದಾರೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ ಎಂ.ವೆಂಕಟೇಶ ಬಣದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾಗಿರುವ ತಮಗೆ ಈ ಕುರಿತು ಮಾಹಿತಿ ಲಭಿಸಿದೆ. ಶೀಘ್ರವೇ ಅಂತಹ ಪಟ್ಟಿಯನ್ನು ಬಿಡುಗಡೆ ಮಾಡುತ್ತೇನೆ. ಸಂಬಂಧಿಸಿದ ಅಧಿಕಾರಿಗನ್ನು ಸಸ್ಪೆಂಡ್ ಮಾಡಿಸುತ್ತೇನೆ ಅಂತ ಹೇಳಿದರು

ಬಳ್ಳಾರಿಯಲ್ಲಿ ಈ ಕುರಿತು ಮಾತನಾಡಿದ ಅವರು, ದೇವದಾಸಿ ಮಹಿಳೆಯರಿಗೆ ನಿವೇಶನ ‌ನೀಡುವಂತೆ ಮುಖ್ಯಮಂತ್ರಿಗಳು ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಹೇಳಿದ್ದರೂ ಅರ್ಹರಿಗೆ ವಿತರಣೆ ಮಾಡದೇ ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ ಎಂದರು
ಈ ಸಂದರ್ಭದಲ್ಲಿ ಡಿಎಸ್ಎಸ್ ನ ಎಂ.ವೆಂಕಟೇಶ್, ಗೌರಮ್ಮ, ಜ್ಯೋತಿ, ಲೀಲಾ ಕುಮಾರಿ ಇನ್ನಿತರರು ಇದ್ರು.

 

ಬೈಟ್: ರಾಮುಲಮ್ಮ, ರಾಜ್ಯಾಧ್ಯಕ್ಷೆ, ಡಿಎಸ್ಎಸ್, ಮಹಿಳಾ ಘಟಕ.

LEAVE A REPLY

Please enter your comment!
Please enter your name here