ಗಿಡ ನೆಡುವ ಕಾರ್ಯಕ್ರಮ

1
160

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ: ಹಸಿರು ಕ್ರಾಂತಿ ಯುವ ಸೇನೆ ವತಿಯಿಂದ ಪ್ರತಿ ಭಾನುವಾರ ಗಿಡ ನೆಡುವ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿತ್ತು . ಈ ಭಾನುವಾರ ದಿಬ್ಬೂರು, ಮಂಚನಬಲೆ,ಸಬ್ಬೇನಹಳ್ಳಿ ಮುಂತಾದ ಹಳ್ಳಿಗಳಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಹಾಗೂ ಡೆಂಗೂಜ್ವರ ಎಲ್ಲಾ ಕಡೆ ಹರಡುತ್ತಿದೆ. ಇದರ ಪರಿಣಾಮವು ಹೆಚ್ಚುತ್ತಿರುವುದರಿಂದ ಜಾಗ್ರತೆಯಿಂದ ಇದನ್ನು ತಡೆಗಟ್ಟಲು ಜನರಿಗೆ ತಿಳುವಳಿಕೆ ಮೂಡಿಸಿ ಮುನ್ನೆಚ್ಚರಿಕೆ ವಹಿಸುವುದರ ಬಗ್ಗೆ ಜಾಗೃತ ಮೂಡಿಸಲಾಯಿತು . ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳು , ಸದಸ್ಯರು ಮತ್ತು ಆರೋಗ್ಯ ಅಧಿಕಾರಿಗಳು ಡೆಂಗೂಜ್ವರ ಹರಡದ ಹಾಗೆ ಮುನ್ನೆಚ್ಚರಿಕೆ ಕ್ರಮಗಳನ್ನುಕೈಗೊಳ್ಳಬೇಕಾಗಿ ಹಸಿರು ಕ್ರಾಂತಿ ಯುವ ಸೇನೆ ವತಿಯಿಂದ ಮನವಿ ಮಾಡಿಕೊಳ್ಳಲಾಯಿತು.

1 COMMENT

  1. ಉತ್ತಮ ಪ್ರಯತ್ನ ಹೀಗೆಯೇ ಮುಂದುವರೆಸಿ ಅಭಿನಂದನೆಗಳು ಬಿ ಬಾಬು ಇಳಕಲ್ ಪತ್ರಕರ್ತರು ಸಂಯುಕ್ತ ಕನಾ೯ಟಕ

LEAVE A REPLY

Please enter your comment!
Please enter your name here