ಭಕ್ತರಿಗೆ ದರ್ಶನ ಭಾಗ್ಯ…

0
206

ಬಳ್ಳಾರಿ /ಹೊಸಪೇಟೆ:ಸದಾ ಜಲಾವೃತವಾಗಿ ಭಕ್ತರಿಗೆ ದರ್ಶನ ಭಾಗ್ಯ ನೀಡುತ್ತಿದ್ದ ಐತಿಹಾಸಿಕ ಹಂಪಿಯ ಬೃಹತ್ ಬಡವಿಲಿಂಗ(ಶಿವಲಿಂಗ) ಅಪರೂಪಕ್ಕೆ ಎಂಬಂತೆ ಇತ್ತೀಚಿಗೆ ನೀರಿನಲ್ಲದಂತೆ, ವೇಳೆಯಲ್ಲಿ ದರ್ಶನ ಭಾಗ್ಯ ನೀಡಿದ್ದಾನೆ.

ಹೌದು!ಹಂಪಿಯ ಪುರಾತನ ಬಡವಿಲಿಂಗ ದೇವಸ್ಥಾನದಲ್ಲಿ ಸದಾ ಕಾಲವೂ ನೀರಿನಿಂದ ತುಂಬಿರುವುದರಿಂದ ಸುಮಾರು 3 ಮೀಟರ್ ಎತ್ತರದಷ್ಟು ಏಕಶಿಲಾಬೃಹತ್ ಶಿವಲಿಂಗ ಪ್ರತಿಮೆ ಇತ್ತೀಚಿಗೆ ನೀರಿಲ್ಲದೇ ಇರುವ ವೇಳೆಯಲ್ಲಿ ಕೆಲ ಭಕ್ತರಿಗೆ ಗೋಚರವಾಗಿದೆ.

ಈಚೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ದೇವಾಲಯದಲ್ಲಿನ ಅಷ್ಟೂ ನೀರನ್ನು ಹೊರ ಹಾಕಿ, ಸ್ವಚ್ಛತೆ ನಡೆಸಿದ ಸಂದರ್ಭದಲ್ಲಿ ಸಂಪೂರ್ಣ ಶಿವಲಿಂಗ ಪ್ರತಿಮೆಯ ಕಂಡಿದೆ. ವರ್ಷದ ಎಲ್ಲಾ ಕಾಲದಲ್ಲಿ ಶಿವ ಪ್ರತಿಮೆ ನೀರಿನಲ್ಲಿ ಇರುವುದನ್ನೆ ಕಂಡಿದ್ದ ಭಕ್ತರಿಗೆ ಈ ದರ್ಶನ ಅಪರೂಪ ಎನ್ನಿಸಿ, ಧನ್ಯತೆ ಭಾವ ಅನುಭವಿಸಿದರು.

ದೇವಾಲಯದ ನೀರು ಹೊರ ಸಾಗ ಹಾಕುತ್ತಿದಂತೆ ಬಡವಿ ಲಿಂಗ ಅಷ್ಟೂ ವೃತ್ತಾಕಾರದ ಎತ್ತರದ ಶಿವ ಪೀಠವು ಸ್ಥಳದಲ್ಲಿದ್ದ ಕೆಲ ಭಕ್ತರಿಗೆ ಮಾತ್ರ ಗೋಚರವಾಯಿತು. ಈ ದರ್ಶನ ಸಿಗುವುದು ಸ್ವಲ್ಪ ಹೊತ್ತು ಕಾಲ ಏಕೆಂದರೆ, ಪುನಃ ನೀರು ದೇವಾಲಯದಲ್ಲಿ ಸಂಗ್ರಹವಾಗಿ ಬಡವಿ ಲಿಂಗದ ತಳ ಭಾಗ ಜಲಾವೃತವಾಗಿ, ವೀಕ್ಷಣೆಗೆ ಅವಕಾಶ ಸಿಗುವುದಿಲ್ಲ.

ಸುಮಾರು 3 ಮೀಟರ್ಗಳಷ್ಟು ಎತ್ತರವಾದ ಬೃಹದಾಕಾರದವಾದ ಶಿವಲಿಂಗವು ಪಕ್ಕದಲ್ಲಿ ಇರುವ ಉಗ್ರನರಸಿಂಹ ವಿಗ್ರಹದಂತೆ ಏಕಶಿಲಾ ವಿಗ್ರಹವಾಗಿದ್ದು, ಅಲ್ಲಿಯೇ ದೊರೆತ ಹೆಬ್ಬಂಡೆಯಿಂದ ಕೆತ್ತಲ್ಪಟ್ಟಿದೆ. ಸನಿಹದಲ್ಲಿ ತ್ರೀವ ಕೃಷಿ ಚಟುವಟಿಕೆಯಿಂದ ಈ ಭಗ್ನಗೊಂಡ ದೇವಾಲಯದಲ್ಲಿ ಸದಾಕಾಲವೂ ನೀರು ತುಂಬಿರುವುದರಿಂದ ಶಿವಲಿಂಗ ಪೀಠವೂ ನೀರಿನಲ್ಲಿ ಜಲಾವೃತವಾಗಿರುತ್ತದೆ. ಈ ಶಿವಲಿಂಗವನ್ನು ವೃತ್ತಾಕಾರದ ಎತ್ತರ ಪೀಠ ಹಾಗೂ ಪ್ರನಾಳ ಸಹಿತ ಯೋನಿ ಪೀಠವನ್ನು ಹೊಂದಿದೆ. ಶಿವಲಿಂಗವು ಸ್ತಂಭಾಕೃತಿಯಲ್ಲಿದ್ದು, ಶಿರೋಭಾಗವನ್ನು ಸ್ವಲ್ಪ ಚಪ್ಪಟೆಯಾಗಿದೆ. ಸೋಮಸೂತ್ರದ ಬಳಿಯಲ್ಲಿ ಮೂರು ಕಣ್ಣುಗಳನ್ನು ಚಿತ್ರಿಸಲಾಗಿದೆ. ಗರ್ಭಗೃಹದ ಕಟ್ಟಡವನ್ನು ಕಲ್ಲು, ಇಟ್ಟಿಗೆ ಮತ್ತು ಗಾರೆಯಿಂದ ನಿರ್ಮಿಸಲಾಗಿದೆ. ಸ್ಥಾನಿಕವಾಗಿ ಈ ದೇವಾಲಯವನ್ನು ಬಡವಿಯಾದ ಹೆಣ್ಣು ಮಗಳು ಕಟ್ಟಿಸಿದಳೆಂದು ಉಲ್ಲೇಖಿಸಲಾಗಿದೆ. ಹೀಗಾಗಿ ಈ ಶಿವಲಿಂಗವನ್ನು ಬಡವಿ ಲಿಂಗ ಎಂದು ಕರೆಯಲಾಗುತ್ತಿದೆ.

LEAVE A REPLY

Please enter your comment!
Please enter your name here