ಹಂಪಿಯಲ್ಲಿ ತಂಪನೆ ವಾತವರಣ..

0
125

ಬಳ್ಳಾರಿ /ಹೊಸಪೇಟೆ:ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ತಾಲ್ಲೂಕಿನಲ್ಲಿ ಜಡಿ ಮಳೆ ಆಗಾಗ ಸುರಿಯುತ್ತಿದ್ದು, ವಿಶ್ವ ಪರಂಪರಾ ತಾಣ ಹಂಪಿಯಲ್ಲಿ ತಂಪನೆ ವಾತವರಣ ನಿರ್ಮಾಣವಾಗಿದ್ದು, ಪ್ರವಾಸಿಗರು, ಹೆಚ್ಚು ಹೊತ್ತು ಕಾಲ ಹಂಪಿಯಲ್ಲಿ ಕಾಲ ಕಳೆಯುತ್ತಿದ್ದಾರೆ.

ಹಂಪಿಯ ಪ್ರವಾಸವೆಂದರೆ ದೇಶ-ವಿದೇಶಿ ಪ್ರವಾಸಿಗರಿಗೆ  ಕೆಂಡದಂತಾ ಬಿಸಿಲು ಕಾದ ಹಾಸು ಬಂಡೆಗಳು ಬೆಟ್ಟಗುಡ್ಡಗಳಿಂದ ಬಿಸಿಗಾಳಿಯ ಅನುಭವ ನೀಡುತ್ತಿದ್ದರೆ ಆದರೆ ಕಳೆದ ಒಂದು ತಿಂಗಳಿನಿಂದ ಹಂಪಿಯ ಚಿತ್ರಣವೇ ಬದಲಾಗಿದೆ.

ಹೇಗಂತೀರಾ ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿರುವ ಮುಂಗಾರು ಮಳೆಯಿಂದ ಹಂಪಿ ಸುತ್ತಮುತ್ತಲಿನ ಬೆಟ್ಟಗುಡ್ಡಗಳು ಪ್ರದೇಶ ಹಾಗು ಸ್ಮಾರಕಗಳ ಸುತ್ತಮುತ್ತಲಪ್ರದೇಶಗಳಲ್ಲಿ ಕಣ್ಣು ಹಾಯಿಸಿದೆಲ್ಲಾ ಹಸಿರಿನ ಸೀರಿಯೇ ಕಾಣ ಸಿಗುತ್ತಿದೆ ಇನ್ನು ಹಂಪಿಯ ಪ್ರವಾಸಕ್ಕೆ ಆಗಮಿಸಿದ ಪ್ರವಾಸಿಗರಿಗೆ ಹಬ್ಬದೂಟದಂತಿದೇ

ಇನ್ನು ಬೇಸಿಗೆಯಲ್ಲಿ ಹಂಪಿಗೆ ಪ್ರವಾಸಕ್ಕೆ ಆಗಮಿಸಿದ ಪಟಪಟನೇ ಸ್ಮಾರಕಗಳನ್ನು ವೀಕ್ಷಿಸಿ ಜಾಗ ಕಾಲಿ ಮಾಡುತ್ತಿದ್ದರು ಆದರೆ ಈಗ ಹಂಪಿಯಲ್ಲಿ ಅಗಾಗ ಬರುವ ಜಿಟಿಜಿಟಿ ಮಳೆಮೋಡದಮರೆಯಲ್ಲಿ ಸೂರ್ಯನ ದರ್ಶನ ಹಾಗು ವಾತಾವರಣ ತಂಪಾಗಿರುವುದರಿಂದ ನಿಧಾನವಾಗಿ ಸ್ಮಾರಕಗಳನ್ನು ವೀಕ್ಷಿಸುತ್ತಾ ವಿನೂತನ ಅನುಭವವನ್ನು ಅನುಭವಿಸಿಸುತ್ತಿದ್ದಾರೆ.

ವಾರದ ಪ್ರತಿ ಶುಕ್ರವಾರದಿಂದ ಭಾನುವಾರದವರಗೆ ಹಂಪಿಗೆ ಬೇಟಿ ನೀಡುವವರ ಸಂಖ್ಯೆಯಲ್ಲಿ ಏರಿಕೆ ಕಾಣುವುದು ವಾಡಿಕೆ. ಸರ್ಕಾರಿ ವಿವಿಧ ಕಡೆಗಳಲ್ಲಿ ಕೆಲಸ ಮಾಡುವ ನೌಕರರು, ಪರಿವಾರ ಸಮೇತವಾಗಿ ಹಂಪಿಗೆ ಬೇಟಿ ನೀಡಿ, ಖುಷಿ ಅನುಭವಿಸುತ್ತಾರೆ.

ಮುಂಗಾರು ಆರಂಭವಾದ ಹಿನ್ನಲೆಯಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ಹೊಲ-ಗದ್ಧೆಗಳಲ್ಲಿ ಹಸನ ಮಾಡುವುದು ಸೇರಿದಂತೆ ಬಿತ್ತನೆ ಕಾರ್ಯ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ರೈತಾಪಿ ಜನರು, ಹಂಪಿಗೆ ಬೇಟಿ ನೀಡುವುದು ಕಡಿಮೆಯಾಗಿದೆ ಎಂದು ಪ್ರವಾಸಿ ಮಾರ್ಗದರ್ಶಕರು, ತಿಳಿಸಿದ್ದಾರೆ.

ಹಳೇ ಶಿವದೇವಸ್ಥಾನ, ತುಲಾಭಾರ, ಎರಡಸ್ತಿನ ಮಂಟಪ, ವಿಜಯ ವಿಠ್ಠಲ ದೇವಸ್ಥಾನ, ಹೇಮಕೂಟ ಪ್ರದೇಶ, ಸರಸ್ವತಿ ದೇವಸ್ಥಾನ, ಅಷ್ಟಭುಜಾಕೃತಿ ಕೊಳ, ಕಾವಲುಗಾರರಗೋಪುರ, ಪಾನ್ಸುಪಾರಿ ಬಜಾರ್ ಇನ್ನು ಅನೇಕ ಸ್ಥಳಗಳು ಹಸಿರಿನಿಂದ ಕೂಡಿ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿವೆ.

ಮೇಲ್ಛಾವಣೆಗೆ ಗಾರೆ ಕಾರ್ಯ:

ಐತಿಹಾಸಿಕ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಪ್ರಾಗಂಣದಲ್ಲಿರುವ ಪಾಕಶಾಲೆ ಮೇಲ್ಛಾವಣೆ ದುರಸ್ತಿ ಕಾರ್ಯವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಕೈಗೆತ್ತಿಕೊಂಡಿದ್ದು ನುರಿತ ಕಾರ್ಮಿಕರು, ಮೇಲ್ಚಾವಣೆ ಮೇಲೆ ಗಾರೆಯಿಂದ ಭದ್ರ  ಕೆಲಸವನ್ನು ಮಾಡುತ್ತಿದ್ದಾರೆ. ಈಗಾಗಲೇ ಕಮಲಾಪುರದಲ್ಲಿರುವ ಪಟ್ಟಾಭಿರಾಮ ದೇವಾಲಯದ ಮೇಲ್ಚಾವಣೆ ಮೇಲೆ ಗಾರೆ ಕೆಲಸ ಪೂರ್ಣವಾಗಿದೆ.

LEAVE A REPLY

Please enter your comment!
Please enter your name here