ಅನ್ನಸಂತರ್ಪಣೆ ಕಾರ್ಯಕ್ರಮ…

0
155

ಮಂಡ್ಯ/ಮಳವಳ್ಳಿ: ಅಷಾಡ ಕಡೆ ಶುಕ್ರವಾರ ಪ್ರಯುಕ್ತ ಮಳವಳ್ಳಿ ಪಟ್ಟಣದ ಮದ್ದೂರು ರಸ್ತೆಯಲ್ಲಿ ಮಹದೇಶ್ವರ ದೇವಸ್ಥಾನದಲ್ಲಿ ಎಣ್ಣೆಮಜ್ಜನ ಹಾಗೂ ಅನ್ನಸಂತರ್ಪಣೆ ಕಾಯ೯ಕ್ರಮ ನಡೆಯಿತು. ನೂರಾರು ಭಕ್ತರು ಪೂಜೆ ಸಲ್ಲಿಸಿದರು . ಇದೇ ಸಂದರ್ಭದಲ್ಲಿ ಮಹದೇಶ್ವರ ಗುಡ್ಡರು ಭಕ್ತಿ ಯಿಂದ ಭಜನೆ ನಡೆಸಿದರು.

ಸಮಾಜ ಸೇವಕ ಹಾಗೂ ಬಿಜೆಪಿ ಮುಖಂಡ ಕಿರುಗಾವಲು ಮಹದೇವು ರವರು ಸಹ ಪೂಜೆ ಕಾಯ೯ಕ್ರಮ ದಲ್ಲಿ ಭಾಗವಹಿಸಿ ಬಂದ ಭಕ್ತರಿಗೆ ಅನ್ನ ಸಂತರ್ಪಣೆ ವನ್ನು ನೇರವೇರಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಗಂಗಮತ ಬೀದಿಯ ನಂಜುಂಡಸ್ವಾಮಿ, ತಳಗವಾದಿ ಟಿ.ಸಿ ಹನುಮೇಗೌಡ, ಗಂಗಾಧರ್, ಗೀರೀಶ್ . ಪುಟ್ಟಸ್ವಾಮಿ ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here